ಬಡವರು, ಕಾರ್ಮಿಕರಿಗೆ ಧೈರ್ಯ ತುಂಬಲು ಒಂದು ದಿನ ಉಪವಾಸ ಮಾಡಿದ ವೈ.ಎಸ್.ವಿ ದತ್ತ

ಆಳುವವರಿಗೆ ಇದನ್ನು ಮನವರಿಕೆ ಮಾಡಲು, ಹಸಿವಿನಿಂದ ಬಳಲುತ್ತಿರುವವರೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಲು, ಇದರಲ್ಲಿ ನಮ್ಮದೂ ತಪ್ಪಿದೆ ಎಂಬ ಪಾಪಪ್ರಜ್ಞೆಯ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಮಾಡಲಾಗುತ್ತಿದೆ. ಇದರಿಂದ ಒಂದು ಸಂದೇಶ ರವಾನೆಯಾಗಿ ಜನಜಾಗೃತಿ ಮೂಡುತ್ತಿದೆ ಎಂದು ದತ್ತ ಹೇಳಿದರು.

news18-kannada
Updated:April 10, 2020, 9:23 PM IST
ಬಡವರು, ಕಾರ್ಮಿಕರಿಗೆ ಧೈರ್ಯ ತುಂಬಲು ಒಂದು ದಿನ ಉಪವಾಸ ಮಾಡಿದ ವೈ.ಎಸ್.ವಿ ದತ್ತ
ಒಂದು ದಿನ ಉಪವಾಸ ಮಾಡಿದ ಮಾಜಿ ಶಾಸಕ ವೈಎಸ್​ವಿ ದತ್ತ.
  • Share this:
ಚಿಕ್ಕಮಗಳೂರು: ಕೊರೋನಾ ಆತಂಕದಿಂದ ಇಡೀ ದೇಶವೇ ಕಂಗಾಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರು ಸಂಖ್ಯೆಯಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಪಾಪಪ್ರಜ್ಞೆ, ಪ್ರಾಯಶ್ಚಿತ್ತ ಹಾಗೂ ಗಾಂಧಿ, ಅಂಬೇಡ್ಕರ್ ಚಿಂತನೆಯ ಆರ್ಥಿಕ ನೀತಿ ಅನುಸರಿಸಲು ಆಗ್ರಹಿಸಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಸಮಾನ ಮನಸ್ಕರು ಶುಕ್ರವಾರ ನಗರದ ಶಂಕರಪುರ ಬಡಾವಣೆಯ ದಲಿತ ಮಹಿಳೆ ಸಾವಿತ್ರಮ್ಮ ಅವರ ಮನೆಯಲ್ಲಿ ಉಪವಾಸ ಆಚರಿಸಿದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ, ರೈತ ಮುಖಂಡ ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್ ಹಾಗೂ ಜೆಡಿಎಸ್ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಮರ್ಲೆ ಅಣ್ಣಯ್ಯ, ಜಮೀಲ್ ಅಹಮದ್ ಮತ್ತಿತರರು ಉಪವಾಸದಲ್ಲಿ ಪಾಲ್ಗೊಂಡಿದ್ದರು.

ರಾಜ್ಯಮಟ್ಟದಲ್ಲಿ ಗ್ರಾಮ ಸೇವಾ ಸಂಘದ ಮುಖ್ಯಸ್ಥ, ರಂಗಕರ್ಮಿ ಪ್ರಸನ್ನ ಅವರು ಒಂದು ಹೊತ್ತಿನ ಉಪವಾಸಕ್ಕೆ ಕರೆ ನೀಡಿದ್ದು, ನಾವೆಲ್ಲಾ ಉಪವಾಸ ಮಾಡುವ ಮೂಲಕ ಅವರಿಗೆ ಬೆಂಬಲಿಸೋಣ ಎಂದರು. ಸಮಾನ ಮನಸ್ಕರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಹಲವರು ಮನೆಯಲ್ಲೇ ಉಪವಾಸ ಆಚರಿಸಿದರು. ಮೂಡಿಗೆರೆಯ ನಿಂಬೆಮೂಲೆಯ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ, ನರಸಿಂಹರಾಜಪುರದಲ್ಲಿ ಜೆಡಿಎಸ್ ಹಿರಿಯ ಮುಖಂಡ ಎಚ್.ಟಿ.ರಾಜೇಂದ್ರ ಉಪವಾಸ ಆಚರಿಸಿದರು.

ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಉಪವಾಸ ನಡೆಸಲಾಯಿತು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಬದುಕು ಕಟ್ಟಿಕೊಂಡಿದ್ದ ಗ್ರಾಮೀಣ ಭಾಗದ ಜನ ಇಂದಿನ ಪರಿಸ್ಥಿತಿಯಿಂದ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಉದ್ಯೋಗ ಕಳೆದುಕೊಂಡು ಸಾವಿರಾರು ಜನ ಆತಂಕಕ್ಕೀಡಾಗಿದ್ದಾರೆ. ಹಾಗಾಗಿ, ಅವರಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯದ ಕ್ರಮ ಸ್ವಾಗತಾರ್ಹ. ಆದರೆ, ಕೊರೋನಾ ವೈರಸ್ ಹಿಮ್ಮೆಟಿಸಿ ಮೇಲೆ ಲಾಕ್ಡೌನ್ ತೆರವಿನ ಬಳಿಕ ದೇಶ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ ಎದುರಿಸುವ ಸನ್ನಿವೇಶವಿದೆ. ದೇಶದ ಈ ಪರಿಸ್ಥಿತಿಗೆ ಮಹಾತ್ಮ ಗಾಂಧಿ ಕನಸು ಮತ್ತು ಅಂಬೇಡ್ಕರ್ ಆರ್ಥಿಕ ನೀತಿ ಕಡೆಗಣಿಸಿ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಹೊಣೆ ಹೊರಬೇಕು ಎಂದರು.

ಇದನ್ನು ಓದಿ: ಕೊರೋನಾ ಸೋಂಕು: ಜುಬಿಲೆಂಟ್ಸ್ ಕಾರ್ಖಾನೆ ಉದ್ಯೋಗಿ ಡಿಸ್​ಚಾರ್ಜ್; ಇಂದು ಹೊಸ 5 ಕೇಸ್ ಪತ್ತೆ

ಲಾಕ್​ಡೌನ್​ನಿಂದ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ವಲಸೆ, ಗುಳೆ ಹೋಗುವ ಕೂಲಿ ಕಾರ್ಮಿಕರು, ಕೃಷಿ, ಅಸಂಘಟಿತ ಕಾರ್ಮಿಕರ ಹಸಿವಿನ ಪ್ರಶ್ನೆಯಾಗಿದೆ. ಗಾಂಧಿ, ಅಂಬೇಡ್ಕರ್ ಚಿಂತನೆಯ ಆರ್ಥಿಕ ನೀತಿ ಅಳವಡಿಸಿಕೊಳ್ಳದಿದ್ದರೆ ಮುಂದಿನ ದಿನಗಳು ಮತ್ತಷ್ಟು ಕಷ್ಟವಾಗಲಿವೆ. ಆಳುವವರಿಗೆ ಇದನ್ನು ಮನವರಿಕೆ ಮಾಡಲು, ಹಸಿವಿನಿಂದ ಬಳಲುತ್ತಿರುವವರೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಲು, ಇದರಲ್ಲಿ ನಮ್ಮದೂ ತಪ್ಪಿದೆ ಎಂಬ ಪಾಪಪ್ರಜ್ಞೆಯ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಮಾಡಲಾಗುತ್ತಿದೆ. ಇದರಿಂದ ಒಂದು ಸಂದೇಶ ರವಾನೆಯಾಗಿ ಜನಜಾಗೃತಿ ಮೂಡುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಲಾಕ್​ಡೌನ್​ ಅನಿವಾರ್ಯ. ಆದರೆ, ದೇಶದ ಬಡವರು ಇದರಿಂದ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ತಪ್ಪು ಆರ್ಥಿಕ ನೀತಿಗಳೇ ಇಂತಹ ಸಮಸ್ಯೆಗಳಿಗೆ ಕಾರಣ. ಆರ್ಥಿಕ ನೀತಿಯ ಪುನರ್ ವಿಮರ್ಶೆ ಇನ್ನಾದರೂ ಆಗಬೇಕಿದೆ ಎಂದರು.
First published: April 10, 2020, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading