Covid-19 ನಿವಾರಣೆಗೆ ಲಾಕ್‌ಡೌನ್ ಮೂಲಕ ಎರಡನೇ ಅವಕಾಶವನ್ನು ರಚಿಸಿದ್ದೀರಿ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ

ಎಲ್ಲಾ ದೇಶಗಳು ಲಾಕ್‌ಡೌನ್ ಘೋಷಿಸುವ ಮೂಲಕ ಕೊರೋನಾ ವಿರುದ್ಧ ಹೋರಾಡಲು ಎರಡನೇ ಅವಕಾಶವನ್ನು ರಚಿಸಿದ್ದೀರಿ. ಇಂತಹ ಸಮಯವನ್ನು ಕೊರೋನಾ ವಿರುದ್ದದ ಹೋರಾಟಕ್ಕೆ ಬಳಸಿಕೊಳ್ಳಬಹುದು. ಹೀಗಾಗಿ ಎಲ್ಲಾ ದೇಶಗಳು ಈ ಸಮಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೀರಿ ಎಂಬುದು ಪ್ರಶ್ನೆ ಎಂದು WHO ತಿಳಿಸಿದೆ.

MAshok Kumar | news18-kannada
Updated:March 26, 2020, 1:35 PM IST
Covid-19 ನಿವಾರಣೆಗೆ ಲಾಕ್‌ಡೌನ್ ಮೂಲಕ ಎರಡನೇ ಅವಕಾಶವನ್ನು ರಚಿಸಿದ್ದೀರಿ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್ಓ) ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
  • Share this:
ಎಲ್ಲಾ ದೇಶಗಳು ಕೇವಲ ಲಾಕ್‌ಡೌನ್ ಮಾಡುವ ಮೂಲಕ ಮಾತ್ರ ಮಾರಣಾಂತಿಕ ಕೊರೋನಾ ವೈರಸ್ ಅನ್ನು ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್ಓ) ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, "COVID -19 ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಹಲವಾರು ದೇಶಗಳು ಇಡೀ ದೇಶವನ್ನೇ ಲಾಕ್‌ಡೌನ್ ಮಾಡುವ ಹೊಸ ಕ್ರಮವನ್ನು ಪರಿಚಯಿಸಿವೆ. ಆದರೆ, ಕೇವಲ ಲಾಕ್‌ಡೌನ್‌ನಿಂದ ಮಾತ್ರ ಈ ಸಾಂಕ್ರಾಮಿಕ ರೋಗವನ್ನು ತಡೆಯುವುದು ಸಾಧ್ಯವಿಲ್ಲ. ಬದಲಾಗಿ ಲಾಕ್‌ಡೌನ್ ಘೋಷಿಸಿರುವ ಇಂತಹ ಸಂದರ್ಭದಲ್ಲಿ ನಾವು ಕೊರೋನಾ ವಿರುದ್ಧ ಹೋರಾಡ ನಡೆಸಬೇಕಿದೆ.

ಎಲ್ಲಾ ದೇಶಗಳು ಲಾಕ್‌ಡೌನ್ ಘೋಷಿಸುವ ಮೂಲಕ ಕೊರೋನಾ ವಿರುದ್ಧ ಹೋರಾಡಲು ಎರಡನೇ ಅವಕಾಶವನ್ನು ರಚಿಸಿದ್ದೀರಿ. ಇಂತಹ ಸಮಯವನ್ನು ಕೊರೋನಾ ವಿರುದ್ದದ ಹೋರಾಟಕ್ಕೆ ಬಳಸಿಕೊಳ್ಳಬಹುದು. ಹೀಗಾಗಿ ಎಲ್ಲಾ ದೇಶಗಳು ಈ ಸಮಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೀರಿ ಎಂಬುದು ಪ್ರಶ್ನೆ” ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ದೇಶಗಳಲ್ಲೂ ಸೋಂಕು ಪೀಡಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಉತ್ತಮ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ನಿರ್ಬಂಧಗಳ ಆಚೆಗೂ ಸಹ ಈ ಸೋಂಕು ನಮ್ಮ ಮೇಲೆ ಹರಡದಂತೆ ಎಚ್ಚರಿಕೆ ವಹಿಸುವುದು ಇನ್ನೂ ಉತ್ತಮ ಕ್ರಿಯೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ 21,000 ಜನ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4 ಲಕ್ಷವನ್ನೂ ಮೀರಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದ್ದು ಇದರ ನಡುವೆಯೂ  ಸೋಂಕಿತರ ಸಂಖ್ಯೆ 650 ಕ್ಕೆ ಏರಿಕೆಯಾಗಿದೆ. ಈವರೆಗೆ 15 ಜನ ಮೃತಪಟ್ಟಿದ್ದಾರೆ. ಸೋಂಕಿತರ ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್‌; ನೆಲಕಚ್ಚಿದ ಕುಕ್ಕುಟೋದ್ಯಮ, ಗಗನಕ್ಕೇರುತ್ತಿದೆ ಕುರಿ-ಮೇಕೆ ಮಾಂಸದ ಬೆಲೆ
First published: March 26, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading