ಬೆಂಗಳೂರಿನಲ್ಲಿ ಜನರ ನೆರವಿಗೆ ನಿಂತಿದೆ ಈ ಯುವಕರ ತಂಡ; ಕೋವಿಡ್ ವಿರುದ್ಧ ಸಮರ ಸಾರಿದ್ದಾರೆ ಕೊರೋನಾ ಕಲಿಗಳು

ಕೊರೋನಾ ಪೀಡಿತರು, ಸಾರ್ವಜನಿಕರ ಕರೆ ಸ್ವೀಕರಿಸುವ ಕೊರೋನಾ ಕಲಿಗಳ ತಂಡ, ಕೂಡಲೇ ಸಹಾಯ ಕೇಳಿದ ವ್ಯಕ್ತಿಯ ವಿಳಾಸ, ಅವರಿಗೆ ಏನು ಬೇಕಿದೆ? ಎಲ್ಲಿದ್ದಾರೆ? ಎಂಬುದನ್ನ ತಿಳಿದುಕೊಂಡು ತುರ್ತಾಗಿ ಅವರಿಗೆ ಬೇಕಾದ ಸಹಾಯ ಮಾಡ್ತಿದ್ದಾರೆ. ನಗರದ ಬಹುತೇಕ ಕಡೆ ತಮ್ಮ ವಾಹನಗಳಲ್ಲಿ ಓಡಾಡುವ ಈ ಕೊರೋನಾ ಕಲಿಗಳು ಸಾವಿರಾರು ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಕಲಿಗಳು

ಕೊರೋನಾ ಕಲಿಗಳು

  • Share this:
ಬೆಂಗಳೂರು(ಮೇ 19): ಕೊರೋನಾ ಮಾಹಾಮಾರಿಯ ಅಬ್ಬರಕ್ಕೆ ದಿನನಿತ್ಯ ಸಾವಿರಾರು ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಪ್ರತಿ ಕ್ಷಣ ಪರದಾಡುವಂತಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕೊರೋನಾ ಪೀಡಿತರ ನೆರವಿಗೆ ನಿಂತಿರೋ ಯುವಕರ ಗುಂಪೊಂದು ಹಗಲು ರಾತ್ರಿ ಎನ್ನದೆ ನೆರವು ನೀಡುತ್ತಿದ್ದಾರೆ.

ಕೊರೋನಾ ಮಾಹಾಮಾರಿ ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಇದರಿಂದ ದಿನನಿತ್ಯ ಸಾವಿರಾರು ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ವೇಳೆ ಸಾಕಷ್ಟು ಜನ ಆಕ್ಸಿಜನ್, ಬೆಡ್, ಮೆಡಿಸಿನ್, ಊಟೋಪಚಾರ ಇಲ್ಲದೆ ಅಕ್ಷರಶಃ ನರಳುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ಜನರ ಕಷ್ಟ, ನೋವು ನಲಿವುಗಳಿಗೆ ಸ್ಪಂದಿಸಿ ಅವರಿಗೆ ನೆರವಾಗಲು ಯುವಕರ ತಂಡವೊಂದು ಹುಟ್ಟಿಕೊಂಡಿದೆ. ಅವರೇ ಕೊರೋನಾ ಕಲಿಗಳು.

ಈ ಕೊರೋನಾ ಕಲಿಗಳ ತಂಡ ನಗರದ ನಾಗರಬಾವಿಯ ಹೊಟೇಲ್ ವೊಂದರಲ್ಲಿ ಕಂಟ್ರೋಲ್ ರೂಂ ತೆಗೆದಿದ್ದಾರೆ. ನಿತ್ಯ ಅಲ್ಲಿಗೆ  400 ಕ್ಕೂ ಹೆಚ್ಚು ಜನ ಹಲವಾರು ಜನ ಕರೆ ಮಾಡಿ ನೆರವು ಕೇಳುತ್ತಿದ್ದಾರೆ. ಕೊರೋನಾ ಪೀಡಿತರು, ಸಾರ್ವಜನಿಕರ ಕರೆ ಸ್ವೀಕರಿಸುವ ಕೊರೋನಾ ಕಲಿಗಳ ತಂಡ, ಕೂಡಲೇ ಸಹಾಯ ಕೇಳಿದ ವ್ಯಕ್ತಿಯ ವಿಳಾಸ, ಅವರಿಗೆ ಏನು ಬೇಕಿದೆ? ಎಲ್ಲಿದ್ದಾರೆ? ಎಂಬುದನ್ನ ತಿಳಿದುಕೊಂಡು ತುರ್ತಾಗಿ ಅವರಿಗೆ ಬೇಕಾದ ಸಹಾಯ ಮಾಡ್ತಿದ್ದಾರೆ. ನಗರದ ಬಹುತೇಕ ಕಡೆ ತಮ್ಮ ವಾಹನಗಳಲ್ಲಿ ಓಡಾಡುವ ಈ ಕೊರೋನಾ ಕಲಿಗಳು ಸಾವಿರಾರು ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

Viral Video: ಐದು ಅಂತಸ್ತಿನ ಕಟ್ಟಡದಿಂದ ಜಿಗಿದ ಬೆಕ್ಕು...!; ವಿಡಿಯೋ ವೈರಲ್

ಇನ್ನೂ ಈ ಕೊರೊನಾ ಕಲಿಗಳ ತಂಡ ಉತ್ಸಾಹಿ ಯುವಕರು ಸೇರಿ ಮಾಡಿರೋ ಒಂದು ತಂಡ. ಇದರಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ, ವಾಣಿಜ್ಯ ತೆರಿಗೆ ಇಲಾಖೆ ಎಸಿ ಪ್ರದೀಪ್, ಟೆಕ್ಕಿ ಗೋಪಿ ಸೇರಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ 40ಕ್ಕೂ ಹೆಚ್ಚು ಜನ ಸ್ವಯಂಪ್ರೇರಿತವಾಗಿ ಕೆಲಸ ಮಾಡ್ತಿದ್ದಾರಂತೆ. ಕೊರೋನಾ ರೋಗಿಗಳಿಗೆ ಮೆಡಿಸಿನ್ ಕಿಟ್ ವಿತರಣೆ, ಹೋಂ ಐಸೋಲೇಷನ್ ಇರುವ ರೋಗಿಗಳಿಗೆ ಊಟದ ವ್ಯವಸ್ಥೆ, ಆಕ್ಸಿಜನ್ ಮತ್ತು ಬೆಡ್ ಬೇಕಿರುವವರಿಗೆ ಎಲ್ಲಿ ಲಭ್ಯವಿದೆ ಎಂದು ನಿಖರ ಮಾಹಿತಿ ನೀಡಿ ವ್ಯವಸ್ಥೆ ಮಾಡ್ತಿದ್ದಾರೆ ಈ ಕಲಿಗಳು.

ಕಂಟ್ರೋಲ್ ರೂಂನಲ್ಲಿ ರೋಗಿಗಳಿಗೆ ಕೌನ್ಸಿಲಿಂಗ್ ಸೌಲಭ್ಯ ಸಹ ಕಲ್ಪಿಸಿದ್ದಾರೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಕಂಟ್ರೋಲ್ ರೂಂಗೆ ಬೆಂಗಳೂರು ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಸ್ಟ್ರೇಲಿಯಾದಿಂದ ಸಹ ಕರೆ ಮಾಡಿ ಸಹಾಯ ಕೇಳ್ತಿದ್ದಾರಂತೆ.

ಸ್ವಂತ ಹಣದಿಂದ ಕಂಟ್ರೋಲ್ ರೂಂ, ಮೆಡಿಸಿನ್, ಊಟ ವ್ಯವಸ್ಥೆ ಮಾಡಿರುವ ಈ ಕಲಿಗಳ ಕೆಲಸವನ್ನು ಮೆಚ್ಚಿ, ಇದೀಗ ಒಂದಷ್ಟು ದಾನಿಗಳು ಸಹ ಇವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ತಮ್ಮ ಕೆಲಸದ ಒತ್ತಡ ನಡುವೆ ಈ ಯುವಕರು ಜನರ ಕಷ್ಟಕ್ಕೆ ನೆರವಾಗ್ತಿರೋದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜನರ ಈ ಕಷ್ಟ ಕಾಲದಲ್ಲಿ ಕೈಲಾದ ಸಹಾಯ ಮಾಡಿ ಅವರ ಜೀವ ಉಳಿಸಿದರೆ ಸಾಕು ಅನ್ನೋದು ಈ ಕಲಿಗಳ ಮೂಲ ಉದ್ದೇಶ.
Published by:Latha CG
First published: