ದೆಹಲಿಯಲ್ಲಿ ಮದ್ಯ ಸಾಗಿಸುತ್ತಿದ್ದ ಕರ್ನಾಟಕ, ತೆಲಂಗಾಣದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಬಂಧಿತರ ವಿರುದ್ಧ ದೆಹಲಿ ಅಬಕಾರಿ ಕಾಯ್ದೆ ಸೆಕ್ಷನ್ 33 ಮತ್ತು 58ರ ಅನ್ವಯ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

news18-kannada
Updated:April 21, 2020, 4:05 PM IST
ದೆಹಲಿಯಲ್ಲಿ ಮದ್ಯ ಸಾಗಿಸುತ್ತಿದ್ದ ಕರ್ನಾಟಕ, ತೆಲಂಗಾಣದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ಲಾಕ್ ಡೌನ್ ಪಾಸ್ ಪಡೆದ ಅಕ್ರಮವಾಗಿ ಮದ್ಯ ಸಾಗಾಣಿಕ ಮಾಡುತ್ತಿದ್ದ ಯುವ ಕಾಂಗ್ರೆಸ್​ನ ಇಬ್ಬರು ಕಾರ್ಯಕರ್ತರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಇವರಲ್ಲಿ ಒಬ್ಬರು ಕರ್ನಾಟಕದವರಾದರೆ ಮತ್ತೊಬ್ಬರು ತೆಲಂಗಾಣದ ಮೂಲದವರಾಗಿದ್ದಾರೆ.

ತುರ್ತು ವಸ್ತುಗಳ ಸಾಗಾಟಕ್ಕೆಂದು ಪಾಸ್ ಪಡೆದುಕೊಂಡು ಕಾರಿನಲ್ಲಿ ಹರಿಯಾಣದಿಂದ ದೆಹಲಿಗೆ ಮದ್ಯ ಸಾಗಾಟ ಮಾಡುತ್ತಿದ್ದ ಯುವ ಕಾಂಗ್ರೆಸ್​ನ ಕರ್ನಾಟಕ ಕಾರ್ಯಕರ್ತ ಮನೀಶ್ ಬಸವರಾಜ್ ಹಾಗೂ ತೆಲಂಗಾಣದ ರಾಮಗಾಡು ಶ್ರವಣ್ ರಾವ್​ ಅವರನ್ನು ಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರ ವಿರುದ್ಧ ದೆಹಲಿ ಅಬಕಾರಿ ಕಾಯ್ದೆ ಸೆಕ್ಷನ್ 33 ಮತ್ತು 58ರ ಅನ್ವಯ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ಇದನ್ನು ಓದಿ: ಚೆನ್ನೈನ ಕೊರೋನಾಪೀಡಿತ ಪತ್ರಕರ್ತನಿಂದ ಸಂಸ್ಥೆಯ 26 ಸಿಬ್ಬಂದಿಗೆ ಹರಡಿದ ಸೋಂಕು
First published: April 21, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading