• ಹೋಂ
  • »
  • ನ್ಯೂಸ್
  • »
  • Corona
  • »
  • Mask: ಲಸಿಕೆ ಹಾಕಿಸಿಕೊಳ್ಳದ ನಿಮ್ಮ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆಯೇ? ಹಾಗಾದರೆ ಅವರು ಯಾವ ರೀತಿಯ  ಮಾಸ್ಕ್ ಧರಿಸಬೇಕು?

Mask: ಲಸಿಕೆ ಹಾಕಿಸಿಕೊಳ್ಳದ ನಿಮ್ಮ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆಯೇ? ಹಾಗಾದರೆ ಅವರು ಯಾವ ರೀತಿಯ  ಮಾಸ್ಕ್ ಧರಿಸಬೇಕು?

 Photo: Google

Photo: Google

Children mask: ತಮ್ಮ ಮಕ್ಕಳನ್ನು ಸಾಂಕ್ರಾಮಿಕ ವೈರಸ್‍ನಿಂದ ರಕ್ಷಿಸುವುದ ಮತ್ತು ಅದಕ್ಕಾಗಿ ಯಾವ ರೀತಿಯ ಮಾಸ್ಕ್​ಗಳನ್ನು ಅವರಿಗೆ ಹಾಕಿಸಬೇಕು ಎಂಬ ಬಗ್ಗೆ ಬಹಳಷ್ಟು ಪೋಷಕರು ಚಿಂತಿತರಾಗಿದ್ದಾರೆ. ಈ ಕುರಿತು ಕೆಲವು ಮಕ್ಕಳ ತಜ್ಞರು ನೀಡಿರುವ ಸಲಹೆಗಳು ಇಂತಿವೆ.

  • Trending Desk
  • 5-MIN READ
  • Last Updated :
  • Share this:

ಮಾಸ್ಕ್ ಯಾವ ರೀತಿಯದ್ದು ಎನ್ನುವುದು ಮುಖ್ಯವೇ? ಅದು ಫಿಟ್ ಆಗುತ್ತದೆಯೇ ಎನ್ನುವುದು ಮುಖ್ಯವೇ, ಡೆಲ್ಟಾ ರೂಪಾಂತರಗೊಂಡಿರುವ ಈ ಸಂದರ್ಭದಲ್ಲಿ ಯಾವ ರೀಯ ಮುನ್ನೆಚ್ಚರಿಕೆಗಳನ್ನು ಬಳಸಬೇಕು? ಏನನ್ನುತ್ತಾರೆ ವೈದ್ಯರು?


ಮಕ್ಕಳ ಪುಸ್ತಕ, ಪೆನ್ಸಿಲ್ , ಊಟದ ಡಬ್ಬಿ ಮತ್ತಿತರ ಶಾಲೆಗೆ ಹೋಗುವಾಗ ಅಗತ್ಯ ಇರುವ ವಸ್ತುಗಳನ್ನು ಪರಿಶೀಲಿಸುವಾಗ, ಇದೀಗ ಆ ಪಟ್ಟಿಗೆ ಮಾಸ್ಕ್ ಕೂಡ ಸೇರಿಕೊಂಡಿದೆ. ಅದರಲ್ಲೂ ತಮ್ಮ ಮಕ್ಕಳನ್ನು ಸಾಂಕ್ರಾಮಿಕ ವೈರಸ್‍ನಿಂದ ರಕ್ಷಿಸುವುದ ಮತ್ತು ಅದಕ್ಕಾಗಿ ಯಾವ ರೀತಿಯ ಮಾಸ್ಕ್​ಗಳನ್ನು ಅವರಿಗೆ ಹಾಕಿಸಬೇಕು ಎಂಬ ಬಗ್ಗೆ ಬಹಳಷ್ಟು ಪೋಷಕರು ಚಿಂತಿತರಾಗಿದ್ದಾರೆ. ಈ ಕುರಿತು ಕೆಲವು ಮಕ್ಕಳ ತಜ್ಞರು ನೀಡಿರುವ ಸಲಹೆಗಳು ಇಂತಿವೆ.


ಡೆಲ್ಟಾ ರೂಪಾಂತರ ಎಲ್ಲಾ ವಯಸ್ಸಿನವರಲ್ಲಿ ಹರಡುತ್ತಿದೆ. ಮಕ್ಕಳಿಗೆ ಬಟ್ಟೆ ಮಾಸ್ಕ್ ಸಾಕಾಗುತ್ತದೆಯೆ?


ಅದು ಸರಿಯಾದ ರೀತಿಯದ್ದಾಗಿದ್ದರೆ ಖಂಡಿತಾ ಸಾಕಾಗುತ್ತದೆ. “ಬಟ್ಟೆಯಿಂದ ಫಿಟ್ ತುಂಬಾ ಮುಖ್ಯ” ಎನ್ನುತ್ತಾರೆ ಟಫ್ಟ್ಸ್ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ನಿನಾ ಡಡ್ಲೇಜ್. ಮಾಸ್ಕ್ ಸರಿಯಾಗಿ ಹಾಕಿಲ್ಲವೆಂದರೆ ವೈರಾಣುವಿನ ಕಣಗಳು ಮಕ್ಕಳ ಮೂಗು ಮತ್ತು ಬಾಯಿಯ ಸುತ್ತಲೂ ಹೋಗುತ್ತವೆ. ಹಾಗಾಗಿ ಮಗುವಿನ ಬಾಯಿ ಮತ್ತು ಮೂಗಿಗೆ ಸುರಕ್ಷತೆ ನೀಡುವಷ್ಟು ಫಿಟ್ ಇರುವ ಮಾಸ್ಕ್​ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಬಟ್ಟೆಯ ಮಾಸ್ಕ್​ಗಳು. ಈಗ ಮಕ್ಕಳು ಧರಿಸಬಹುದಾದಂತಹ ಸರ್ಜಿಕಲ್ ಮಾಸ್ಕ್​ಗಳು ಕೂಡ ಲಭ್ಯ ಇವೆ. ಕೆಲವು ವೈದ್ಯರು ಅದನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಯಾವುದೇ ಮಾಸ್ಕ್ ಖರೀದಿಸುವ ಮುನ್ನ ಅದು ಉತ್ತಮ ಫಿಲ್ಟ್ರೇಸನ್ ಮತ್ತು ಸರಿಯಾಗಿ ಉಸಿರಾಟಕ್ಕೆ ಅನುಕೂಲ ಮಾಡಿಕೊಡುತ್ತದೆಯೇ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೂರು ಲೇಯರ್ ಫಿಲ್ಟ್ರೇಶನ್ ಹೊಂದಿರುವ ಮಾಸ್ಕ್​ಗಳು ಮಕ್ಕಳಿಗೆ ಸೂಕ್ತ. ಅದರಲ್ಲೂ ಮಾಸ್ಕ್ ಹಾಕದೆ ರಜೆ ಕಳೆದಿರುವ ಮಕ್ಕಳು, ಶಾಲೆಗೆ ಹೋಗುವ ಮುನ್ನ ವಿಭಿನ್ನ ರೀತಿಯ ಮಾಸ್ಕ್‍ಗಳನ್ನು ಧರಿಸಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತು.


ಇದನ್ನು ಓದಿ- ಬಾರಿ ಬೆಲೆ, ಸಖತ್ ಫೀಚರ್ಸ್; Samsung Galaxy Z Fold3 ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

ಮಾಸ್ಕ್ ಧರಿಸು ಇಷ್ಟಪಡದ ಮಕ್ಕಳಿಗೆ, ಯಾವ ರೀತಿಯ ಮಾಸ್ಕ್‍ಗಳ ಮೂಲಕ ಮನ ಒಲಿಸಬಹುದು?


ನಿರ್ದಿಷ್ಟ ಕಾರ್ಟೂನ್ ಪಾತ್ರಗಳುಳ್ಳ , ಡಿಸ್ನಿ ಪಾತ್ರಗಳುಳ್ಳ, ನಿರ್ದಿಷ್ಟ ಬಣ್ಣಗಳುಳ್ಳ, ಚಿಹ್ನೆಗಳುಳ್ಳ ಮಕ್ಕಳನ್ನು ಆಕರ್ಷಿಸುವ ಮಾಸ್ಕ್​ಗಳನ್ನು ಮಕ್ಕಳಿಗೆ ಕೊಡಿಸಿ, ಅಥವಾ ಮನೆಯವರೆಲ್ಲರೂ ಅಂತದ್ದೇ ಮಾಸ್ಕ್ ಬಳಸಬಹುದು. ಪೋಷಕರು ಕೂಡ ಮಕ್ಕಳಿಗೆ ಹಾಕುವ ಮಾಸ್ಕ್‍ನ ಮಾತ್ರಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಉದಾಹರಣೆಗೆ, ಪುಟ್ಟ ಮಗುವೊಂದು ಮಾಸ್ಕ್ ಹಾಕಿಕೊಂಡಿರುವಾಗ ತನ್ನ ನೆಚ್ಚಿನ ಗೊಂಬೆಯನ್ನು ಹಿಡಿದುಕೊಂಡಿರಲು ಬಯಸಬಹುದು ಅಥವಾ ಮಾಸ್ಕ್​ನಲ್ಲಿರುವ ತನ್ನ ನೆಚ್ಚಿನ ನಾಯಕನ ಬಗ್ಗೆ ಕಥೆ ಕೇಳಲು ಬಯಸಬಹುದು. ಮಾಸ್ಕ್‍ನಲ್ಲಿರುವ ಕಾರ್ಟೂನ್ ಚಿತ್ರದ ಬಗ್ಗೆ ಯಾವುದೇ ಕಥೆ ಇಲ್ಲದಿದ್ದಲ್ಲಿ ಹೆತ್ತವರೇ ಒಂದು ಕಥೆ ಕಟ್ಟಿ ಹೇಳಬಹುದು.


ಸೂಕ್ಷ್ಮ ತ್ವಚೆಯುಳ್ಳ ಮಕ್ಕಳಿಗೆ ಮತ್ತು ಮಾಸ್ಕ್ ಧರಿಸಿದಾಗ ಕಿವಿಗೆ ನೋವಾಗದಂತಹ ಮಾಸ್ಕ್‍ಗಳನ್ನು ಆಯ್ಕೆ ಮಾಡುವುದು ಹೇಗೆ?


ಮಕ್ಕಳಿಗೆ ಮೃದು ಇಯರ್ ಲೂಪ್ಸ್ ಉಳ್ಳ ಮಾಸ್ಕ್​ಗಳನ್ನು ಅಥವಾ ಮಾಸ್ಕ್​ಗೆ ಹಾಕು ಕಿವಿ ರಕ್ಷಕ (ಇಯರ್ ಸೇವರ್ಸ್) ಅಥವಾ ಹೆಡ್ ಬ್ಯಾಂಡ್ ಯುಕ್ತ ಮಾಸ್ಕ್ ಖರೀದಿಸಿ ಎಂದು ಬೋಸ್ಟನ್ ಮೆಡಿಕಲ್ ಸೆಂಟರ್​ನ ಡಾ,ಕ್ಯಾಸಂಡ್ರ ಪಿರ್ರೆ ಸಲಹೆ ನೀಡುತ್ತಾರೆ. ಪೋಷಕರು ಸ್ವಂತ ಇಯರ್ ಸೇವರ್ಸ್ ಸೇವರ್ಸ್‍ಗಳನ್ನು ಕೂಡ ಮಾಡಬಹುದು.


ಇದನ್ನು ಓದಿ- WhatsApp Hack: ನಿಮಗೇ ಗೊತ್ತಿಲ್ಲದೆ ನಿಮ್ಮ ವಾಟ್ಸ್​​​ಆ್ಯಪ್ ಹ್ಯಾಕ್ ಆಗಿರಬಹುದು, ತಿಳಿದುಕೊಳ್ಳೋಕೆ ಹೀಗೆ ಮಾಡಿ!

ಮಕ್ಕಳಿಗಾಗಿ ಸುರಕ್ಷಿತ ಮತ್ತು ಗುಣಮಟ್ಟದ ಮಾಸ್ಕ್‍ಗಳನ್ನು ಎಲ್ಲಿಂದ ಕೊಳ್ಳಬಹುದು?ದ ಗ್ಯಾಪ್ , ಓಲ್ಡ್ ನೇವಿ, ಡಾಕ್ಟರ್ ಟ್ಯಾಲ್ಬೋಟ್ಸ್ , ಪ್ಯಾಕ್-ಡೆಂಟ್ ಐ ಮಾಸ್ಕ್ಸ್ ಮುಂತಾದ ಬ್ರಾಂಡ್‍ಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಮತ್ತು ಸುರಕ್ಷಿತ ಮಾಸ್ಕ್‍ಗಳು ಲಭ್ಯ. ಮಕ್ಕಳಿಗಾಗಿ ಮರು ಬಳಕೆ ಮಾಡಬಹುದಾದ, ಇಯರ್‍ಲೂಪ್‍ಗಳುಳ್ಳ ಮಾಸ್ಕ್‍ಗಳನ್ನು ಕೊಳ್ಳಬಹುದು. ಬಳಸಬಹುದು ಅಥವಾ ಉಪಯೋಗಿಸಿ ಬಿಸಾಡುವಂತವುಗಳನ್ನು ನೀಡಬಹುದು. ಮಕ್ಕಳಿಗೆ ಹೊಂದುವ ವೆಲ್ ಬಿಫೋರ್ ಬ್ರಾಂಡ್‍ನ ಕೆಎನ್ -95 ಮಾಸ್ಕ್‍ಗಳು ಮತ್ತು ಕೊರಿಯನ್ ಬ್ರಾಂಡ್ ಗುಡ್ ಡೇ ಹ್ಯಾಪಿ ಲೈಪ್‍ನ ಕೆ ಎಫ್ -94 ಮಾಸ್ಕ್‍ಗಳು ಆನ್‍ಲೈನ್‍ನಲ್ಲಿ ಲಭ್ಯ.


ದುಬಾರಿ ಮಾಸ್ಕ್ ಗಳನ್ನು ಬಳಸದೆಯೂ, ಮಕ್ಕಳನ್ನು ಸುರಕ್ಷಿತವಾಗಿ ಇಡುವುದು ಹೇಗೆ?


ಕೆಎನ್ -95 ನಂತಹ ದೊಡ್ಡ ಮಟ್ಟದ ಮಾಸ್ಕ್ಗಳನ್ನು ಬಳಸಿಯೇ ನಿಮ್ಮ ಮಗುವನ್ನು ಸುರಕ್ಷಿತವಾಗಿ ಇಡಬೇಕೆಂದಿಲ್ಲ ಎನ್ನುತ್ತಾರೆ ಪೀರ್ರೆ. ಬದಲಿಗೆ ಪೋಷಕರು ಮಾಸ್ಕ್ ಮಗುವಿಗೆ ಸರಿಯಾಗಿ ಫಿಟ್ ಆಗಿದೆಯೇ ಎಂಬ ಬಗ್ಗೆ ಪೋಷಕರು ಗಮನ ಹರಿಸಬೇಕು. ದೊಡ್ಡವರ ಮಾಸ್ಕ್ಗಳು ಕೂಡ ಮಕ್ಕಳಿಗೆ ಸರಿ ಹೊಂದಬಹುದು. ಮಾಸ್ಕ್ಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಇಯರ್‍ಲೂಪ್‍ಗಳಿದ್ದರೆ ಇನ್ನೂ ಒಳ್ಳೆಯದು. ಕೋವಿಡ್ ಹೆಚ್ಚಾಗಿ ಹರಡುತ್ತಿರುವ ಸಮುದಾಯಗಳಲ್ಲಿ ಇರುವ ಪೋಷಕರು, ಮಾಸ್ಕ್ ಗುಣಮಟ್ಟದ ಬಗ್ಗೆ ನಂಬಿಕೆ ಹೊಂದಿಲ್ಲದಿದ್ದಲ್ಲಿ, ಡಬಲ್ ಮಾಸ್ಕ್ ಹಾಕಿಸುವುದರ ಬಗ್ಗೆಯೂ ಯೋಚಿಸಬಹುದು.


First published: