• ಹೋಂ
  • »
  • ನ್ಯೂಸ್
  • »
  • Corona
  • »
  • ವ್ಯಾಕ್ಸಿನ್​ ತೆಗೆದುಕೊಂಡವರಿಗೆ ಮಾತ್ರ ಸಿನಿಮಾ ನೋಡಲು ಅವಕಾಶ: ಪಂಜಾಬಿನಲ್ಲಿ ಹೊಸ ಅನ್​ಲಾಕ್​ ರೂಲ್ಸ್​

ವ್ಯಾಕ್ಸಿನ್​ ತೆಗೆದುಕೊಂಡವರಿಗೆ ಮಾತ್ರ ಸಿನಿಮಾ ನೋಡಲು ಅವಕಾಶ: ಪಂಜಾಬಿನಲ್ಲಿ ಹೊಸ ಅನ್​ಲಾಕ್​ ರೂಲ್ಸ್​

ಸಿನಿಮಾ ಥಿಯೇಟರ್

ಸಿನಿಮಾ ಥಿಯೇಟರ್

• ಬಾರ್‌ಗಳು, ಸಿನೆಮಾ ಹಾಲ್‌, ರೆಸ್ಟೋರೆಂಟ್‌, ಸ್ಪಾ, ಈಜುಕೊಳ, ಜಿಮ್‌, ಮಾಲ್‌ಗಳು, ಕ್ರೀಡಾ ಸಂಕೀರ್ಣಗಳು, ವಸ್ತುಸಂಗ್ರಹಾಲಯ, ಮೃಗಾಲಯಗ ಇತ್ಯಾದಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಒಂದೇ ಒಂದು ಡೋಸ್ ಲಸಿಕೆಯನ್ನಾದರೂ ತೆಗೆದುಕೊಂಡಿರಬೇಕು ಅಂತಹವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ

ಮುಂದೆ ಓದಿ ...
  • Share this:

ಪಂಜಾಬ್​: ರಾಜ್ಯದ ಕೊರೋನಾ ಹರಡುವಿಕೆ 0.4 ಕ್ಕೆ ಇಳಿದ ತಕ್ಷಣ ಪಂಜಾಬ್​​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​​ ಸಿಂಗ್​ ವಾರಾಂತ್ಯ ಕರ್ಫ್ಯೂ ಮತ್ತು ನೈಟ್​ ಕರ್ಫ್ಯೂ ತೆಗೆಯಲಾಗುವುದು ಎಂದು ಆದೇಶ ಹೊಡರಿಸಿದ್ದಾರೆ. ಅಲ್ಲದೇ ಒಳಾಂಗಣದಲ್ಲಿ 100 ಜನ ಹಾಗೂ ಹೊರಾಂಗಣದ ಕಾರ್ಯಕ್ರಮಗಳಿಗೆ 200 ಜನರು ಸೇರಲು ಅವಕಾಶ ಮಾಡಿಕೊಡಲಾಗಿದೆ.


ಕೋವಿಡ್​ ಕುರಿತಾದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿಜಿಪಿ ದಿನಕರ್​ ಗುಪ್ತಾ ಅವರಿಗೆ ಒಂದಷ್ಟು ಸೂಚನೆಗಳನ್ನು ನೀಡಿದರು. ಇಡೀ ರಾಜ್ಯದಲ್ಲಿ ಇತರೇ ಪಕ್ಷಗಳ ನಾಯಕರುಗಳಿಂದ ರ್ಯಾಲಿ, ಸೇರಿದಂತೆ ಇತರೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕುರಿತು ಏನು ಕ್ರಮ ತೆಗೆದುಕೊಳ್ಳಬಹುದು ಎನ್ನುವ ಕುರಿತು ಮುಂದಿನ ಜುಲೈ 20 ರಂದು ನಡೆಯುವ ಸಭೆಯಲ್ಲಿ ತಿಳಿಸಬೇಕು ಎಂದು ಆದೇಶಿಸಿದರು.


ಪಂಜಾಬಿನಲ್ಲಿ ಯಾವುದಕ್ಕೆ ಅವಕಾಶವಿದೆ, ಯಾವುದಕ್ಕೆ ಇಲ್ಲ ಇಲ್ಲಿದೆ ಪಟ್ಟಿ

ಬಾರ್‌ಗಳು, ಸಿನೆಮಾ ಹಾಲ್‌, ರೆಸ್ಟೋರೆಂಟ್‌, ಸ್ಪಾ, ಈಜುಕೊಳ, ಜಿಮ್‌, ಮಾಲ್‌ಗಳು, ಕ್ರೀಡಾ ಸಂಕೀರ್ಣಗಳು, ವಸ್ತುಸಂಗ್ರಹಾಲಯ, ಮೃಗಾಲಯಗ ಇತ್ಯಾದಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಒಂದೇ ಒಂದು ಡೋಸ್ ಲಸಿಕೆಯನ್ನಾದರೂ ತೆಗೆದುಕೊಂಡಿರಬೇಕು ಅಂತಹವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ


ಶಾಲೆಗಳು ಎಂದಿನಂತೆ ತೆರೆಯುವಂತಿಲ್ಲ.


ಕಾಲೇಜುಗಳು, ತರಬೇತಿ ಕೇಂದ್ರಗಳು ಮತ್ತು ಇತರ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. ಇಲ್ಲೂ ಸಹ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ವಾರಗಳ ಹಿಂದೆ  ಒಂದು ಡೋಸ್ ಲಸಿಕೆಯನ್ನು ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ.


ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಈ ಕುರಿತು ಮತ್ತಷ್ಟು ಕಠಿಣ ನಿಯಮಗಳನ್ನು ತರುವುದಾಗಿ ಹೇಳಿದರು.


ಪಂಜಾಬಿನ 4 ರಾಜ್ಯಗಳಲ್ಲಿ ಕೊರೋನಾ ಕೇಸ್​ಗಳು ಶೇ 1ಕ್ಕಿಂತ ಕಡಿಮೆ ಇದೆ. ಆದರೆ ಲೂದಿಯಾನ, ಅಮೃತ್​ಸರ, ಗುರುದಾಸಪುರ, ಹೋಶಿಯಾರ್​ಪುರ, ಫಿರೋಜ್​ ಪುರ, ರೂಪಾ ನಗರಗಳ ಮೇಲೆ ನಿಗಾವಹಿಸಲಾಗುವುದು ಎಂದು  ಆರೋಗ್ಯ ಇಲಾಖೆ ಕಾರ್ಯದರ್ಶಿ ಹುಸಾನ್​ ಲಾಲ್​ ಹೇಳಿದರು.


ಮೈಕ್ರೋಮಯೋಸಿಸ್​ ನಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರದ ಕಡೆಯಿಂದಲೇ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಡೆಲ್ಟಾ ಪ್ಲಸ್​ ವೈರಾಣುವಿನ ಯಾವುದೇ ಪ್ರಕರಣಗಳು ಇದುವರೆಗೂ ಕಂಡು ಬಂದಿಲ್ಲ. ಇದರ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿ ಸದಾ ನಿಗಾವಹಿಸಬೇಕು.


ಪಂಜಾಬ್​ ಕೂಡ ಒಣ ಸ್ವ್ಯಾಬ್​ ಪರೀಕ್ಷೆಗೆ ಮುಂದಾಗಿದ್ದು ಇದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ, ವೇಗವಾಗಿ ಮಾಡುವ ವಿಧಾನದ ಆಲೋಚಿಸುವಂತೆ ಹೇಳಿದೆ.


ಇದನ್ನೂ ಓದಿ: ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಪಿಎಸಿ ಅಧ್ಯಕ್ಷ : ಮೋದಿಗೆ ದೊಡ್ಡ ಶಾಕ್​ ನೀಡಿದ ದೀದಿ


ಕೇಂದ್ರದ ನಿಯಮದಂತೆ 10 ಸೂಕ್ಷ್ಮ ಪ್ರದೇಶಗಳನ್ನು ಗುರಉತಿಸಿದ್ದು ಅಲ್ಲಿನ ಕೊರೋನಾ ರೋಗಿಗಳ ಕನಿಷ್ಟ 15 ಮಾದರಿಗಳನ್ನು 15 ದಿನಗಳಿಗೆ ಒಮ್ಮೆ ಕಳಿಸುವ ಯೋಜನೆ ಹಾಕೊಕೊಂಡಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: