ಕೂಲಿಕಾರ್ಮಿಕರಿಲ್ಲದ್ದರಿಂದ ರೈತರ ಹೊಲಕ್ಕಿಳಿದು ಖುದ್ದು ಬೆಳೆ ಕಟಾವ್ ಮಾಡಿದ ಶಾಸಕ ಎಸ್.ಆರ್. ವಿಶ್ವನಾಥ್

ಕೇವಲ ರಾಜಕೀಯ, ಚುನಾವಣೆ ಸಂಧರ್ಭಗಳಲ್ಲಿ ಮಾತ್ರ ಮುಖಂಡತ್ವ ತೋರುವುದಲ್ಲ, ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾಗ ಅವರ ನೋವು ಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಲೀಡರ್​ಶಿಪ್ ಎಂದು ವಿಶ್ವನಾಥ್ ತಮ್ಮ ಬೆಂಬಲಿಗರಿಗೆ ಮನವರಿಕೆ ಮಾಡಿಕೊಟ್ಟರು.

ಎಸ್.ಆರ್. ವಿಶ್ವನಾಥ್

ಎಸ್.ಆರ್. ವಿಶ್ವನಾಥ್

  • Share this:
ಯಲಹಂಕ: ಇಡೀ ಜಗತ್ತನ್ನೇ ಕೊರೋನ ಹೆಮ್ಮಾರಿ ಕಿತ್ತು ತಿನ್ನುತ್ತಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್​ಗಳು ಸೇರಿದಂತೆ ವೈದ್ಯಕೀಯ ಕ್ಷೇತ್ರದ ಜನರು, ಪೊಲೀಸರು, ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಜೀವ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ರೈತ ತಾನು ಬೆಳೆದ ತರಕಾರಿ, ಹಣ್ಣು, ಸೊಪ್ಪು, ಹೂ ಬೆಳೆಗಳಿಗೆ ಬೆಲೆ ಸಿಗದೆ, ಸಾಗಾಟ ಮಾಡಲು ಅವಕಾಶ ಸಿಗದೆ ಅದೆಷ್ಟೋ ರೈತರು ಹೊಲಗಳಲ್ಲೆ ಬೆಳೆಯನ್ನು ಹೂತಿರುವ ಉದಾಹರಣೆಗಳಿವೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ರೈತರಿಂದ ಕ್ಯಾರೆಟ್, ಹೂ ಕೋಸು, ಕೋಸು, ಕ್ಯಾಪ್ಸಿಕಮ್, ಆಲೂಗಡ್ಡೆ, ಟಮೆಟೋ ಇತ್ಯಾದಿ ಫಸಲನ್ನು ಖರೀದಿಸಿ ತಮ್ಮ ಕ್ಷೇತ್ರದ 26 ಸಾವಿರ ಬಡ ಕೂಲಿ ಕಾರ್ಮಿಕರು ಮತ್ತು 13 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿತರಣೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕನಿಷ್ಠ ಬೆಲೆ ನಿಗದ ಮಾಡಿ ಖರೀದಿ ಮಾಡಿದ್ದ ತರಕಾರಿಗಳನ್ನ ಟ್ರಾಕ್ಟರ್ ಮೂಲಕ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಹಂಚಿದ್ದಾರೆ. ಈ ಮೂಲಕ ಬೆಳೆ ಬೆಳೆದ ರೈತರಿ ಆಪದ್ಬಾಂಧರಾದರೆ, ಜನಸಾಮಾನ್ಯರ ಸಂಕಷ್ಟಕ್ಕೂ ಸ್ಪಂದಿಸಿದ್ದಾರೆ.

ಇನ್ನು ರೈತರ ಹೊಲದಲ್ಲಿ ಬೆಳೆಗಳ ಕಟಾವ್ ಮಾಡಲು ಕೂಲಿಗಳಿಲ್ಲದ ಕಾರಣ ಶಾಸಕ ವಿಶ್ವನಾಥ್ ಅವರೇ ಖುದ್ದಾಗಿ ಗದ್ದೆಗಿಳಿದು ಅಚ್ಚರಿ ಮೂಡಿಸಿದರು. ತಮ್ಮ ಜೊತೆ ಬಂದಿದ್ದ ಬೆಂಬಲಿಗರನ್ನೂ ರೈತರ ಗದ್ದೆಗೆ ಇಳಿಸಿ ಬೆಳೆ ಕಟಾವ್ ಮಾಡಿಸಿದರು. ಅವರು ಮತ್ತು ಅವರ 50ಕ್ಕೂ ಹೆಚ್ಚು ಬೆಂಬಲಿಗರು ಸೇರಿಕೊಂಡು ರೈತರೊಬ್ಬರ ಗದ್ದೆಯಲ್ಲಿ ಕ್ಯಾರೆಟ್ ಕಿತ್ತು ಟ್ರಾಕ್ಟರ್​ಗೆ ಲೋಡ್ ತುಂಬಿದರು.

ಇದನ್ನೂ ಓದಿ: ಹಳೆ ಶೈಲಿ ರಾಜಕಾರಣ, ಹೊಂದಾಣಿಕೆ ಮತ್ತು ಘನತೆ; ಕೊರೋನಾ ಬಿಕ್ಕಟ್ಟಿನ ನಡುವೆ ಬಿಎಸ್​ವೈ ಸಿಎಂ ಸ್ಥಾನ ಭದ್ರಪಡಿಸಿಕೊಂಡ ಬಗೆ

ಕೇವಲ ರಾಜಕೀಯ, ಚುನಾವಣೆ ಸಂಧರ್ಭಗಳಲ್ಲಿ ಮಾತ್ರ ಮುಖಂಡತ್ವ ತೋರುವುದಲ್ಲ, ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾಗ ಅವರ ನೋವು ಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಲೀಡರ್​ಶಿಪ್ ಎಂದು ಬೆಂಬಲಿಗರಿಗೆ ಮನವರಿಕೆ ಮಾಡಿಕೊಟ್ಟರು. ಕ್ಷೇತ್ರದ ಜನರು ಕೊರೋನ ಭೀತಿಯಿಂದ ಮನೆಗಳಿಂದ ಹೊರ ಬರಲಾಗದ ಸ್ಥಿತಿಯಲ್ಲಿದ್ದಾಗ ನೆರವಾಗುವುದರ ಜೊತೆಗೆ, ಅವಕಾಶ ಸಿಕ್ಕಾಗ ಜನರ ಸೇವೆ ಮಾಡಬೇಕು ಎಂದು ತಮ್ಮ ಬೆಂಬಲಿಗರಿಗೆ ತಿಳಿಹೇಳಿದರು.

ಬೆಂಗಳೂರು ಉತ್ತರ ಭಾಗದ ಯಲಹಂಕ ತಾಲ್ಲೂಕಿನ ಕಡತನಮಲೆ ಗ್ರಾಮದ ಸತೀಶ್ ಎಂಬುವರರು ಕೋಸು ಮತ್ತು ಕ್ಯಾಪ್ಸಿಕಮ್ ನೀಡುತ್ತೇವೆಂದಿದ್ದಾರೆ. ಅರಕೆರೆ ಗ್ರಾಮದ ಚನ್ನೇಗೌಡ ಎಂಬುವರು ಎರಡು ಎಕರೆ ಕ್ಯಾರೆಟ್, ಟಮೇಟೋ ಬೆಳೆಗಳನ್ನ ನೀಡಿ ಕೂಲಿಕಾರ್ಮಿಕರ ಕಷ್ಟಕ್ಕೆ ನೆರವಾಗುವುದಾಗಿ ತಿಳಿಸಿದ್ಧಾರೆ.

ಕೇವಲ ಒಂದು ಬೆಳೆ ನಷ್ಟದಿಂದ ರೈತರು ಎದುಗುಂದುವುದಿಲ್ಲ, ಮತ್ತೊಂದು ಬೆಳೆ ಕೈ ಹಿಡಿಯಲಿದೆ. ತೋಟದಲ್ಲೆ ಹಾಳಾಗುವ ಬದಲು ಕನಿಷ್ಠ ಯಾರೊಬ್ಬರ ಆಹಾರವಾಗಿಯಾದರೂ ಬಳಕೆ ಆಗಲಿ ಎಂಬುದು ಕಡತನಮಲೆ ರೈತ ಸತೀಶ್ ಅಭಿಪ್ರಾಯ.

ಇದನ್ನೂ ಓದಿ: ಸೀಜ್ ಆದ ವಾಹನಗಳನ್ನು ಪಡೆಯಲು ಮಾಲೀಕರು ಅನುಸರಿಸಬೇಕಾದ ಕ್ರಮಗಳೇನು?

ಇದೇ ವೇಳೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಅವರು ತಮ್ಮ ಕ್ಷೇತ್ರದ ಜನರಿಗೆ ಆಹಾರ ಕಿಟ್ ಒದಗಿಸುವ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದರು.

ಕ್ಷೇತ್ರದ ಜನರಿಗೆ ಇದುವರೆಗೂ 13 ಸಾವಿರ ಆಹಾರದ ಕಿಟ್ ನೀಡಲಾಗಿದೆ. 26 ಸಾವಿರ ಕೂಲಿ ಕಾರ್ಮಿಕರು ಇಲ್ಲಿದ್ಧಾರೆ. ಇದೀಗ ಮತ್ತೆ 10 ಸಾವಿರ ಮನೆಗಳಿಗೆ ಕಿಟ್ ವಿತರಣೆಗೆ ತಯಾರಿ ನಡೆಯುತ್ತಿದೆ. 22 ಸಾವಿರ ಕಿಟ್ ವಿತರಣೆ ಮೊದಲ ಹಂತದಲ್ಲಿ ಮುಗಿದಿದೆ. ಎರಡನೆ ಹಂತದಲ್ಲಿ 10 ಸಾವಿರ ಕಿಟ್ ತಯಾರಿ ಬಿರುಸಿನಿಂದ ನಡೆದಿದೆ. ಇನ್ನೂ 10 ಸಾವಿರ ಕಿಟ್ ಅವಶ್ಯಕತೆ ಇದ್ದು, ಒಟ್ಟು 42 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ನ್ಯೂಸ್18 ಗೆ ಎಸ್.ಆರ್.ವಿಶ್ವನಾಥ್ ಹೇಳಿದ್ಧಾರೆ.

First published: