ಕೊರೋನಾ ಎಫೆಕ್ಟ್​​​​; ದಾಸನಪುರಕ್ಕೆ ಶಿಫ್ಟ್​ ಆದ ಯಶವಂತಪುರ ತರಕಾರಿ ಮಾರುಕಟ್ಟೆ

Coronavirus News Updates: ದಾಸನಪುರ ತರಕಾರಿ ಮಾರುಕಟ್ಟೆಯಲ್ಲೇ ಇಂದಿನಿಂದ ವ್ಯಾಪಾರ-ವಹಿವಾಟು ಆರಂಭವಾಗಿದೆ. ಸದ್ಯಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಮಾರುಕಟ್ಟೆ ಸ್ಥಳಾಂತರ ಮಾಡಿರುವುದಕ್ಕೆ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:March 30, 2020, 9:22 AM IST
ಕೊರೋನಾ ಎಫೆಕ್ಟ್​​​​; ದಾಸನಪುರಕ್ಕೆ ಶಿಫ್ಟ್​ ಆದ ಯಶವಂತಪುರ ತರಕಾರಿ ಮಾರುಕಟ್ಟೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.30): ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ರಾಜ್ಯದಲ್ಲೂ ಸಹ ಕೊರೋನಾ ಹರಡದಂತೆ ಅಗತ್ಯ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚು ಜನ ಸೇರದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಹೆಚ್ಚು ಜನ ಸೇರುವ ಕೆ.ಆರ್.ಮಾರುಕಟ್ಟೆ ಹಾಗೂ ಇನ್ನಿತರ ಮಾರುಕಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ನಗರದ ಯಶವಂತಪುರ ತರಕಾರಿ ಮಾರುಕಟ್ಟೆಯನ್ನು ದಾಸನಪುರಕ್ಕೆ ಶಿಫ್ಟ್​ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಉಪ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಭೀತಿ ಹಿನ್ನೆಲೆ ಯಶವಂತಪುರ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲಾಗಿದೆ.

ಕೆ.ಆರ್.ಮಾರುಕಟ್ಟೆಯ ಎಲ್ಲಾ ರಸ್ತೆಗಳು ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ

ದಾಸನಪುರ ತರಕಾರಿ ಮಾರುಕಟ್ಟೆಯಲ್ಲೇ ಇಂದಿನಿಂದ ವ್ಯಾಪಾರ-ವಹಿವಾಟು ಆರಂಭವಾಗಿದೆ. ಸದ್ಯಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಮಾರುಕಟ್ಟೆ ಸ್ಥಳಾಂತರ ಮಾಡಿರುವುದಕ್ಕೆ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ.

ದಾಸನಪುರದ ಮಾರುಕಟ್ಟೆ ಸ್ಥಳ ವಿಶಾಲವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ.  ರೈತರು, ಗ್ರಾಹಕರು, ವರ್ತಕರು, ಸುರಕ್ಷಿತ ಕ್ರಮ ಅನುಸರಿಸಿ ವಹಿವಾಟು ಮಾಡಬೇಕಿದೆ. ರೈತರು ರಾಜ್ಯದ ವಿವಿಧ ಜಿಲ್ಲೆಗಳಿಂದ ತರಕಾರಿಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಯಶವಂತಪುರದ ತರಕಾರಿ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಇನ್ನು ಮುಂದೆ ದಾಸನಪುರದಲ್ಲಿ ನಡೆಯಲಿದೆ.
First published: March 30, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading