HOME » NEWS » Coronavirus-latest-news » YAMRAJ TAKES TO MORADABAD STREETS URGES PEOPLE TO FOLLOW COVID 19 PROTOCOLS STG LG

Coronavirus: ಕೊರೋನಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಧರೆಗಿಳಿದು ಬಂದ ಯಮರಾಜ

ಯಮರಾಜ ವೇಷಧಾರಿ ವಿಕ್ಕಿ ಅವರು ಜನರಿಗೆ ಸಂದೇಶ ನೀಡುವ ಬರಹ ಹಾಸ್ಯಾಸ್ಪದವೆನ್ನಿಸಿದರೂ ಗಂಭೀರ ಅರ್ಥವನ್ನು ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯಮರಾಜನ ಫೋಟೋಗಳು ದೊಡ್ಡ ಸುದ್ದಿ ಮಾಡುತ್ತಿದೆ.

news18-kannada
Updated:April 11, 2021, 10:33 AM IST
Coronavirus: ಕೊರೋನಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಧರೆಗಿಳಿದು ಬಂದ ಯಮರಾಜ
ಯಮರಾಜ
  • Share this:
ಕಳೆದೊಂದು ವರ್ಷದಿಂದ ಕೊರೋನಾ ಜಗತ್ತಿನಾದ್ಯಂತ ರಣಕೇಕೆ ಆರ್ಭಟಿಸುತ್ತಿದೆ. ಈಗ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ಎರಡನೇ ಅಲೆ ಎದ್ದಿದ್ದು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈಗಾಗಲೇ ಕೊರೋನಾಗೆ ಲಸಿಕೆಯನ್ನು ಕಂಡುಹಿಡಿಯಲಾಗಿದ್ದು ವ್ಯಾಕ್ಸಿನೇಷನ್‌ಗೆ ಚಾಲನೆ ನೀಡಲಾಗಿದೆ. ಎರಡನೇ ಅಲೆಯು ತ್ವರಿತಗತಿಯಲ್ಲಿ ಉಲ್ಬಣಗೊಳ್ಳುತ್ತಿರುವುದರಿಂದ ಅಪಾಯಕಾರಿಯ ಮಟ್ಟ ತಲುಪುತಿದೆ. ಹೀಗಿದ್ದರೂ, ಜನರು ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಪಾಲಿಸದೇ ಹಾಗೂ ಮುಂಜಾಗ್ರತೆಯನ್ನು ಕಾಪಾಡಿಕೊಳ್ಳದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ವೈರಸ್ ನಿರಂತರವಾಗಿ ಹರಡುವುದನ್ನು ತಡೆಗಟ್ಟಲು ರಾತ್ರಿ ವೇಳೆಯಲ್ಲಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್‌ಡೌನ್‌ನಂತಹ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಇಷ್ಟಾದರೂ ಜನರಿಗೆ "ಕೊರೋನಾಗೂ ನಮಗೂ ಸಂಬಂಧವೇ ಇಲ್ಲ" ಎಂಬಂತೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಕೊರೋನಾದ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಲು ಭೂಲೋಕಕ್ಕೆ ಯಮರಾಜ ಆಗಮಿಸಿದ್ದಾನೆ.

ಉತ್ತರಪ್ರದೇಶದ ಮೊರಾದಾಬಾದ್‌ನ ಸ್ಥಳೀಯ ಕಲಾವಿದರೊಬ್ಬರು ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ವಿಭಿನ್ನ ಮಾರ್ಗವನ್ನು ಆಯ್ದುಕೊಂಡಿರುವ ಈ ಕಲಾವಿದ ವಿಕ್ಕಿ ಅವರು ಈ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ಮೊರಾದಾಬಾದ್‌ನ ಸ್ಥಳೀಯ ಎನ್‌ಜಿಒವೊಂದರ ಜೊತೆ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಕ್ಕಿ, ಕೊರೋನಾ ಜಾಗೃತಿ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಮೃತ್ಯುದೇವನಾಗಿರುವ ಯಮನ ವೇಷಧಾರಿಯನ್ನು ಧರಿಸಿ ಮೊರಾದಾಬಾದ್‌ನ ಪ್ರದೇಶದಲ್ಲಿ ಸಂಚರಿಸಿ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರವನ್ನು ಪಾಲಿಸಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿಕ್ಕಿ ಅವರು ಯಮರಾಜನ ವೇಷದಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದ್ದಾರೆ.

Diabetes: ಡಯಾಬಿಟಿಸ್‍ನಿಂದ ದೂರವಿರಲು ಜೀವನ ಶೈಲಿ ಉತ್ತಮವಾಗಿರಲಿ; ರೋಗದ ಲಕ್ಷಣಗಳು ಹೀಗಿವೆ ನೋಡಿ

ಸಾಂಪ್ರದಾಯಿಕ ಕಪ್ಪು ಧೋತಿಯನ್ನು ಮತ್ತು ಚಿನ್ನದ ಲೇಪನ ಮಾಡಲಾಗಿರುವ ಕೀರಿಟವನ್ನು ಧರಿಸಿ ಬಂದಿರುವ ವಿಕ್ಕಿ ಅವರನ್ನು ಯಮರಾಜನ ವೇಷದಲ್ಲಿ ಕಂಡ ಸ್ಥಳೀಯರು ಉತ್ಸುಕರಾದರು. “ಧರತಿ ವಾಸಿಯೋ, ಹಮಾರ ವರ್ಕ್ ಲೋಡ್ ಮತ್ ಬಡಾವೋ, ಮಾಸ್ಕ್‌ ಲಗಾವ್ ಆರ್ ಡಿಸ್ಟಂನ್ಸ್ ರಕೋ" ಎಂದು ಹಿಂದಿ ಬರಹದಲ್ಲಿ ಹಾಕಿಕೊಂಡಿರುವ ಕಲಾವಿದ ವಿಕ್ಕಿ, "ಭೂಮಿಯಲ್ಲಿ ವಾಸಿಸುವ ಜನರೇ, ನಮ್ಮ ಕೆಲಸದ ಹೊರೆ ಹೆಚ್ಚಿಸಬೇಡಿ, ಮಾಸ್ಕ್ ಧರಿಸಿ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳಿ" ಎಂದು ಸಂದೇಶ ನೀಡುತ್ತಿದ್ದಾರೆ.

"ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ನಾವು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ”ಎಂದು ಕಲಾವಿದ ವಿಕ್ಕಿ ಅವರು ಹೇಳಿದ್ದಾರೆ.

ಈಗಾಗಲೇ ಕೊರೋನಾ ಎರಡನೇ ಅಲೆಯಿಂದಾಗಿ ಸೋಂಕಿತರ ಪ್ರಕರಣಗಳಲ್ಲಿ ತೀವ್ರಗತಿಯಲ್ಲಿ ಏರಿಕೆಯಿಯಾಗಿದೆ. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಧಿಸಲಾಗಿದೆ. ನೋಯ್ಡಾ, ಅಲಹಾಬಾದ್, ಮೀರತ್ ಮತ್ತು ಗಾಜಿಯಾಬಾದ್ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಏಪ್ರಿಲ್ 8 ರಿಂದ ಕರ್ಫ್ಯೂ ಜಾರಿಗೆ ಬಂದಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಕೆಲಸ ಕಾರ್ಯಗಳಿಗೆ ನಿರ್ಬಂಧಗೊಳಿಸಲಾಗಿದೆ. ಲಕ್ನೋದಲ್ಲಿ, ಕೋವಿಡ್ -19 ಅಧಿಸೂಚನೆಗಳಡಿಯಲ್ಲಿ ಹಗಲಿನಲ್ಲಿ, ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಕೆಲಸ ಮುಂದುವರೆಯಲಿದೆ.
ಯಮರಾಜ ವೇಷಧಾರಿ ವಿಕ್ಕಿ ಅವರು ಜನರಿಗೆ ಸಂದೇಶ ನೀಡುವ ಬರಹ ಹಾಸ್ಯಾಸ್ಪದವೆನ್ನಿಸಿದರೂ ಗಂಭೀರ ಅರ್ಥವನ್ನು ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯಮರಾಜನ ಫೋಟೋಗಳು ದೊಡ್ಡ ಸುದ್ದಿ ಮಾಡುತ್ತಿದೆ. ಟ್ವಿಟರ್, ಫೇಸ್ ಬುಕ್ ಹಾಗೂ ಸುದ್ದಿ ಮಾಧ್ಯಮ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಯಮರಾಜನ ವೇಷದಾರಿಯಲ್ಲಿರುವ ವಿಕ್ಕಿಯ ಫೋಟೋ ಮತ್ತು ಅವರ ಹಿಂದಿ ಭಾಷೆಯಲ್ಲಿ ನೀಡಿರುವ ಸಂದೇಶವು ಜನರಿಗೆ ಎಚ್ಚರಿಕೆ ನೀಡುತ್ತಿದೆ. ಬೇಜಬ್ದಾರಿ ಜನರಿಗೆ ಎಚ್ಚರಿಕೆ ನೀಡಿರುವ ಯಮನ ಸಂದೇಶವು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published by: Latha CG
First published: April 11, 2021, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories