Lockdown Effects: ಗದಗ್​ನಲ್ಲಿ ನೆಲಕಚ್ಚಿದ್ದಾನೆ ಯಾಲಕ್ಕಿ ಬಾಳೆ ಬೆಳೆದ ರೈತ

Lockdown In Gadag: ರೈತ ಅಂದಪ್ಪ ಸಾಲಸೋಲ ಮಾಡಿ ಬೆಳೆದ ಬೆಳೆ ಕೈಗೆ ಬಂತಲ್ಲಾ ಅನುವಷ್ಟರಲ್ಲಿ  ಕೊರೋನಾ ಮತ್ತು ಮಳೆರಾಯ ಆರ್ಭಟಕ್ಕೆ ಎಲ್ಲವೂ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ.

ಯಾಲಕ್ಕಿ ಬಾಳೆ ಗೊನೆ

ಯಾಲಕ್ಕಿ ಬಾಳೆ ಗೊನೆ

 • Share this:
  ಗದಗ: ಕೊರೋನಾ ಎಂಬ ಮಹಾಮಾರಿ ಇಡೀ ಜಗತ್ತನೇ ಬುಡಮೇಲು ಮಾಡಿದೆ. ಕೊರೋನಾಕ್ಕೆ ಮನುಷ್ಯರು ಅಷ್ಟೇ ಬಲಿಯಾಗುತ್ತಿಲ್ಲ, ರೈತರು ಬೆಳೆದ ಬೆಳೆಯು ಸಹ ಬಲಿಯಾಗುತ್ತಿದೆ‌. ಕೊರೋನಾ ಎಫೆಕ್ಟ್​ನಿಂದ ಎರಡನೇ ಹಂತ ಲಾಕ್ ಡೌನ್ ಕೂಡಾ ಆರಂಭವಾಗಿದೆ. ಹೀಗಾಗಿ ರೈತರು ಬೆಳೆದ ಬೆಳೆ ಜಮೀನಿನಲ್ಲಿ ಕೊಳೆತು ನಾರುತ್ತಿದೆ. ಖರೀದಿ ಮಾಡಲು ಯಾರು ಬರುತ್ತಿಲ್ಲ. ನಾಶವಾದ ಬಾಳೆಗೆ ಪರಿಹಾರ ನೀಡಿ. ಇಲ್ವಾದ್ರೆ ಮಾರುಕಟ್ಟೆಯಾದರೂ ಕಲ್ಪಿಸಿ ಎಂದು ರೈತ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾನೆ.

  ಕಳೆದ ವಾರ ಸುರಿದ ಗಾಳಿಸಹಿತ ಮಳೆಗೆ ಯಾಲಕ್ಕಿ ಬಾಳೆ ಸಂಪೂರ್ಣವಾಗಿ ನೆಲಕಚ್ಚಿರುವಂತಹ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಮುಂಡರಗಿ ಪಟ್ಟಣದ ರೈತ ಅಂದಪ್ಪ ಬೆಲ್ಲದ ಎಂದ ರೈತರ ಆರು ಎಕರೆ ಜಮೀನಿನಲ್ಲಿ ಯಾಲಕ್ಕಿ ಬಾಳೆ ಹಣ್ಣು ಬೆಳೆದಿದ್ದ. ಅದು ಕಳೆದ ವಾರ ಗಾಳಿಸಹಿತ ಸುರಿದ ಮಳೆಗೆ ಯಾಲಕ್ಕಿ ಬಾಳೆ ತೋಟದಲ್ಲಿಯೇ ಕೊಳೆತು ಹಾಳಾಗುತ್ತಿದೆ. ಸಾಲಸೋಲ ಮಾಡಿ ಬೆಳೆದ 6 ಎಕರೆ ಬೆಳೆ ಹಾನಿಯಾಗಿದ್ರಿಂದ ರೈತ ಕಂಗಾಲ ಆಗಿದ್ದಾನೆ.

  ಎಕರೆಗೆ 3 ಲಕ್ಷ ಖರ್ಚು ಮಾಡಿ 6 ಎಕರೆ ಯಾಲಕ್ಕಿ ಬಾಳೆ ಬೆಳೆದಿದ್ದ ಅನ್ನದಾತ ಸಂಕಷ್ಟಕ್ಕೆ ಸಿಲುಕೊಂಡಿದ್ದಾನೆ. ರೈತನಿಗೆ ಎಕರೆಗೆ 15-20 ಟನ್ ಯಾಲಕ್ಕಿ ಬಾಳೆ ಇಳುವರಿ ಬರುತ್ತದೆ. ಬಾಳೆ‌ ಹಾನಿಯಿಂದ ಅಂದಾಜು 30 ಲಕ್ಷ ರೂಪಾಯಿ ನಷ್ಟವನ್ನು ರೈತ ಅಂದಪ್ಪ ಅನುಭವಿಸುತ್ತಿದ್ದಾನೆ. ಕೊರೋನಾ ಎಫೆಕ್ಟ್ ನಿಂದ ಬಾಳೆಹಣ್ಣು ರಫ್ತಿಗೆ ಅವಕಾಶ ಇಲ್ಲದೆ ಕಂಗಾಲಾಗಿದ್ದಾನೆ. ಸರ್ಕಾರವೇ ರೈತರ ಜಮೀನಿಗೆ ಬಂದು ಹಣ್ಣು ಖರೀದಿ ಮಾಡುವಂತೆ ಮನವಿ ಸಹ ಮಾಡಿಕೊಂಡಿದ್ದಾ‌ನೆ. ಇಲ್ಲವಾದರೆ, ರಾಜ್ಯ ಸರ್ಕಾರ ಸೂಕ್ತ ಮಾರುಕಟ್ಟೆ ಕಲ್ಪಿಸಿ, ಪರಿಹಾರ ಒದಗಿಸುವಂತೆ ರೈತರ ಪರಿಪರಿಯಾಗಿ ಬೇಡಿಕೊಂಡಿದ್ದಾನೆ.

  ಇದನ್ನೂ ಓದಿ: ಪತ್ರಕ್ಕೆ ಸ್ಪಂದಿಸಿದ ಮಹಿಳಾ ಆಯೋಗ; ಯಾದಗಿರಿ ವೃದ್ಧೆಗೆ ತಿಂಗಳಿಗಾಗುವಷ್ಟು ಔಷಧ ಪೂರೈಕೆ

  ಅಂದಪ್ಪ ಸಾಲಸೋಲ ಮಾಡಿ ಬೆಳೆದ ಬೆಳೆ ಕೈಗೆ ಬಂತಲ್ಲಾ ಅನುವಷ್ಟರಲ್ಲಿ  ಕೊರೋನಾ ಮತ್ತು ಮಳೆರಾಯ ಆರ್ಭಟಕ್ಕೆ ಎಲ್ಲವೂ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಯಾಲಕ್ಕಿ ಬಾಳೆ ಹಣ್ಣಿಗೆ ಸಿಕ್ಕಾಪಟೆ ಬೇಡಿಕೆ ಕೂಡ ಇತ್ತು. ಆದ್ರೆ ಕೊರೋ‌ನಾ ಎಂಬ ಮಹಾಮಾರಿ ವಕ್ಕರಿಸಿದ್ದೇ ತಡ ಯಾವುದೇ ಜನರು ಹಣ್ಣು ಹಂಪಲು ಖರೀದಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ದೇಶದ ಬೆನ್ನೆಲುಬು ಆಗಿರುವ ಅನ್ನದಾತ ಮಾತ್ರ ಕಂಗಾಲು ಆಗಿಬಿಟ್ಟಿದ್ದಾನೆ.

  ರಾಜ್ಯ ಸರ್ಕಾರ ಅನ್ನದಾತರ ಧ್ವನಿಯಾಗಿ ನಿಂತು ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಪರಿಹಾರ ನೀಡಿ, ರೈತ ಬೆಳೆದ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಮತ್ತು ಖರೀದಿಗಾರರನ್ನು ನಿಯೋಜಿಸಬೇಕಿದೆ. ಇಲ್ಲದಿದ್ದರೆ ದೇಶಕ್ಕೆ ಅನ್ನ ನೀಡುವ ಅನ್ನದಾತರು ಬೀದಿಗೆ ಬೀಳತ್ತಾರೆ. ಈಗಾಗಲೇ ಗದಗ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಪ್ರತಿಯೊಂದು ಬೆಳೆಗೆ ಮಾರುಕಟ್ಟೆಗೆ ತರೋಕೆ ಆಗದೆ, ಜಮೀನುಗಳಲ್ಲಿ ನಾಶಪಡಿಸಿರುವ ಎಷ್ಟೋ ಉದಾಹರಣೆಗಳು ಸಹ ಇವೆ.

  ವರದಿ: ಸಂತೋಷ ಕೊಣ್ಣೂರ

  First published: