ಯಾದಗಿರಿಯಲ್ಲಿ ಡಿಸಿ ಗನ್​ಮ್ಯಾನ್​ಗೆ ಕೊರೋನಾ; ಜಿಲ್ಲಾಡಳಿತ ಕಚೇರಿ ಸೀಲ್​ಡೌನ್

ಜಿಲ್ಲಾಡಳಿತ ಭವನದ ವಿವಿಧ ಇಲಾಖೆಯ ಕೆಲ ಸಿಬ್ಬಂದಿಗಳಿಗೆ ‌ಕೊರೋನಾ ಪತ್ತೆಯಾಗಿದೆ ಎನ್ನಲಾಗುತಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದು ಬಾಕಿ ಇದೆ.

news18-kannada
Updated:July 10, 2020, 3:57 PM IST
ಯಾದಗಿರಿಯಲ್ಲಿ ಡಿಸಿ ಗನ್​ಮ್ಯಾನ್​ಗೆ ಕೊರೋನಾ; ಜಿಲ್ಲಾಡಳಿತ ಕಚೇರಿ ಸೀಲ್​ಡೌನ್
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ(ಜು.10): ಜಿಲ್ಲೆಯಲ್ಲಿ ಹಗಲಿರುಳು ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್​​ಗೆ ಈಗ ಮಹಾಮಾರಿ ಕೊರೋನಾ ವ್ಯಾಪಿಸಿಕೊಳ್ಳುತ್ತಿದೆ. ಜಿಲ್ಲಾಡಳಿತ ಭವನದಿಂದಲೇ ಜಿಲ್ಲಾಧಿಕಾರಿ ಸೇರಿ ಹಲವಾರು ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೊರೋನಾ ವಿರುದ್ಧ ಹೋರಾಟ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಜಿಲ್ಲಾಡಳಿತ ಭವನದಿಂದಲೇ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್​​ಗೆ ಈಗ ಕೊರೋನಾ ಸೋಂಕು ವಕ್ಕರಿಸಿದೆ.

ಡಿಸಿ ಗನ್ ಮ್ಯಾನ್ ಗೆ ಕೊರೋನಾ..!

ಯಾದಗಿರಿ ‌ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಅವರ ಗನ್ ಮ್ಯಾನ್ ಗೆ ಕೂಡ ಕೊರೋನಾ ವಕ್ಕರಿಸಿದೆ. ಗನ್ ಮ್ಯಾನ್ ಹಾಗೂ ‌ಜಿಲ್ಲಾಧಿಕಾರಿ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕ, ಡಿಸಿ ಅವರ ಆಪ್ತ ಸಹಾಯಕನಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವದು ಬಾಕಿ ಇದೆ.

ಕಾರಿನಿಂದ ಕೊರೋನಾ ಕಂಟಕ...!

ಜಿಲ್ಲಾಧಿಕಾರಿ ಅವರ ಹೊಸ ಕಾರನ್ನು ಬೆಂಗಳೂರಿನಿಂದ ತೆಗೆದುಕೊಂಡು ಬರಲಾಗಿತ್ತು.‌ ಕಾರು ತರಲು ಹೋದ ಡಿಸಿ ಅವರ ಆಪ್ತ ಸಹಾಯಕನಿಗೆ ಕೊರೋನಾ ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಬಂದ ಹಿನ್ನೆಲೆ ಟ್ರಾವೆಲ್ ಹಿಸ್ಟರಿ ಗಮನಿಸಿ ಸ್ಯಾಂಪಲ್‌ ಸಂಗ್ರಹ ಮಾಡಲಾಗಿತ್ತು. ಜಿಲ್ಲಾಡಳಿತ ಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದೇ ಜು. 3ರಂದು ಸ್ಯಾಂಪಲ್‌ ನೀಡಿದ್ದರು. ಈಗ ವರದಿ ಬಂದಿದ್ದು ಡಿಸಿ ಅವರ ಗನ್ ಮ್ಯಾನ್, ಹೊರಗುತ್ತಿಗೆ ವಾಹನ ಚಾಲಕ ಹಾಗೂ ಡಿಸಿ ಅವರ ಆಪ್ತಸಹಾಯಕನಿಗೆ ಕೊರೊನಾ ಕಾಣಿಸಿಕೊಂಡಿದೆ.

ಪ್ರವಾಹದ ಕಹಿನೆನಪು ಮಾಸುವ ಮೊದಲೇ ಚಾರ್ಮಾಡಿ ಗ್ರಾಮದಲ್ಲಿ ಮತ್ತೆ ಶುರುವಾಗಿದೆ ನೆರೆಯ ಭೀತಿ

ಬೆಂಗಳೂರಿನಿಂದ ಬಂದಿದ್ದಕ್ಕೆ ಕೊರೋನಾ ಕಾಣಿಸಿಕೊಂಡಿದೆಯಾ ಅಥವಾ ಜಿಲ್ಲಾಡಳಿತ ಭವನದಲ್ಲಿ ಬರುವ ಯಾರಾದರೂ ಸೋಂಕಿತರಿಂದ ಕೊರೋನಾ ವಕ್ಕರಿಸಿದೆಯಾ ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದೇ ರೀತಿ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಯ ಕೆಲ ಸಿಬ್ಬಂದಿಗಳಿಗೆ ‌ಕೊರೋನಾ ಪತ್ತೆಯಾಗಿದೆ ಎನ್ನಲಾಗುತಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದು ಬಾಕಿ ಇದೆ.ಹೋಂ ಕ್ವಾರೆಂಟೈನ್ ನಲ್ಲಿ ಡಿಸಿ ಕೂರ್ಮರಾವ್...!

ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್  ಅವರು ಸ್ವಯಂ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. ಡಿಸಿ ಅವರು ತಮ್ಮ ಮನೆಯಿಂದ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಡಿಸಿ ಅವರು ಮೂರು ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿ ಇರಲಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಅವರ ವರದಿ ನೆಗೆಟಿವ್ ಎಂದು ಬಂದಿದೆ.

ಜಿಲ್ಲಾಡಳಿತ ಭವನ ಸೀಲ್ ಡೌನ್..!

ಈಗಾಗಲೇ ಜಿಲ್ಲಾಡಳಿತ ಭವನ ಸೀಲ್ ಡೌನ್ ಮಾಡಲಾಗಿದ್ದು ಮೂರು ದಿನಗಳ ಕಾಲ ಜಿಲ್ಲಾಡಳಿತ ಭವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ.ಡಿಸಿ ಭವನದಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಭವನ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.ಮೂರು ದಿನಗಳ ಕಾಲ ಸೋಂಕು ನಿವಾರಕ ಸಿಂಪಡಣೆ ಮಾಡಿ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ.
Published by: Latha CG
First published: July 10, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading