HOME » NEWS » Coronavirus-latest-news » YADAGIRI COVID 19 PATIENT CREATING AWARENESS ON CORONAVIRUS AND DISTRIBUTING FOOD NMPG SCT

ಕೊರೊನಾ ಗೆದ್ದು ಬಂದ ಯಾದಗಿರಿಯ ಯುವಕನಿಂದ ಹಸಿವು ‌ನೀಗಿಸುವ ಕಾರ್ಯ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದ ಯುವ ಮುಖಂಡ ಕೃಷ್ಣಾರೆಡ್ಡಿ ಮುದನೂರು ಅವರು ಕೋವಿಡ್ ನಿಂದ ಗುಣಮುಖರಾದ ನಂತರ ಕೆಂಭಾವಿ ಪಟ್ಟಣದ ಬಡವರಿಗೆ ಆಹಾರ ವಿತರಣೆ ಮಾಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.

news18-kannada
Updated:May 13, 2021, 1:17 PM IST
ಕೊರೊನಾ ಗೆದ್ದು ಬಂದ ಯಾದಗಿರಿಯ ಯುವಕನಿಂದ ಹಸಿವು ‌ನೀಗಿಸುವ ಕಾರ್ಯ
ಕೊರೋನಾದಿಂದ ಗುಣಮುಖನಾದ ಯುವಕನಿಂದ ಕೊರೋನಾ ಜಾಗೃತಿ
  • Share this:
ಯಾದಗಿರಿ: ಆ ಯುವಕ ಕೊರೊನಾ ಗೆದ್ದು ಬಂದು ಕೊರೊನಾಗೆ ಭಯಗೊಳ್ಳದೇ ಕೋವಿಡ್ ಮುಂಜಾಗ್ರತೆ ವಹಿಸಿ ಈಗ ಬಡಜನರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದ ಯುವ ಮುಖಂಡ ಕೃಷ್ಣಾರೆಡ್ಡಿ ಮುದನೂರು ಅವರು ಕೋವಿಡ್ ನಿಂದ ಗುಣಮುಖರಾದ ನಂತರ ಜನರು ಹಸಿವಿನಿಂದ ಬಳಲಬಾರದೆಂದು ಅರಿತು ಕಳೆದ 16 ದಿನಗಳಿಂದ ಕೆಂಭಾವಿ ಪಟ್ಟಣದ ಬಡವರಿಗೆ ಆಹಾರ ವಿತರಣೆ ಮಾಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಅದರ ಜೊತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿ ಕೋವಿಡ್ ಜಾಗೃತಿ ಮೂಡಿಸುವ ಮಾನವೀಯ ಕಾಳಜಿ ಮೆರೆಯುತ್ತಿದ್ದಾರೆ.

ರಾಜು ಗೌಡ ಅಭಿಮಾನಿ ಬಳಗ ರಚನೆ ಮಾಡಿಕೊಂಡು ಸ್ನೇಹಿತರೊಂದಿಗೆ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಯಾರು ಹಸಿವಿನಿಂದ ಬಳಲಬಾರದೆಂದು ಅರಿತು ಹಸಿವು ನಿಗಿಸುವ ಕೆಲಸ ಮಾಡುತ್ತಿದ್ದಾರೆ. ಕೆಂಭಾವಿ ಪಟ್ಟಣದಲ್ಲಿ ಕಳೆದ 16 ದಿನಗಳಿಂದ ಬಡವರಿಗೆ, ನಿರ್ಗತಿಕರಿಗೆ, ನಿರಂತರವಾಗಿ ಆಹಾರ, ನೀರು ವಿತರಣೆ ಮಾಡಿ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹೊಟೇಲ್ ಗಳು ಬಂದ್ ಆಗಿದ್ದು ಹಸಿದವರಿಗೆ ಊಟ ಕೂಡ ಸಿಗುತ್ತಿಲ್ಲ. ಇದರ ಪರಿಣಾಮ ಬಡವರು, ನಿರ್ಗತಿಕರು ಹಸಿವಿನಿಂದ ಬಳಲುವಂತಾಗಿದೆ.

ಇದನ್ನೂ ಓದಿ: ವ್ಯಾಕ್ಸಿನ್​ ಪ್ರೊಡಕ್ಷನ್​ ಆಗದಿದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ?; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಸಮಾಧಾನ

ಜನರು ಹಸಿವಿನಿಂದ ಬಳಲಬಾರದೆಂದು ಅರಿತು ಶಾಸಕ ರಾಜುಗೌಡ ಅವರ ಪ್ರೇರಣೆ ಮೇರೆಗೆ ರಾಜು ಗೌಡ ಅವರ ಅಭಿಮಾನಿ ಬಳಗ ರಚನೆ ಮಾಡಿಕೊಂಡು ಕೃಷ್ಣಾರೆಡ್ಡಿ ಮುದನೂರು ಅವರು ಬಡವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಅದೆ ರೀತಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿ ಕೋವಿಡ್  ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕೃಷ್ಣಾರೆಡ್ಡಿ ಮುದನೂರು ಮಾತನಾಡಿ, ಜನರು ಕೋವಿಡ್ ಬಗ್ಗೆ ಭಯಗೊಳ್ಳದೇ ಧೈರ್ಯವಾಗಿ ಇರಬೇಕು, ಮಾಸ್ಕ್ ಹಾಕಿಕೊಳ್ಳುವ ಜೊತೆ ಸಮಾಜಿಕ ಅಂತರ ಕಾಪಾಡಬೇಕು. ಕೊರೊನಾ ಬಂದಿದೆ ಎಂದು ಭಯ ಪಡಬಾರದು. ಧೈರ್ಯದಿಂದ ಕೊರೊನಾ ಎದುರಿಸಬಹುದಾಗಿದೆ. ಪ್ರತಿಯೊಬ್ಬರು ಅನವಶ್ಯಕವಾಗಿ ಮನೆಯಿಂದ ಹೊರಬಾರದೇ ಮನೆಯಲ್ಲಿ ಇರಬೇಕೆಂದು ಕೊರೊನಾ ಗೆದ್ದು ಬಂದ ಯುವ ಮುಖಂಡ ಕೃಷ್ಣಾರೆಡ್ಡಿ ಮುದನೂರು ಜನರಿಗೆ ಮನವಿ ಮಾಡಿದ್ದಾರೆ.
Youtube Video

ಕೊರೊನಾ ಎರಡನೇ ಅಲೆಗೆ ಈಡೀ ದೇಶವೇ ನಲುಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು ಗ್ರಾಮೀಣ ಭಾಗದಲ್ಲಿ ಈಗ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೂಡ ಕೋವಿಡ್ ನಿಂದ ಗುಣಮುಖನಾಗಿ ಮನೆಯಲ್ಲಿ ಸುಮ್ಮನೆ ಇರದೇ ಕೃಷ್ಣಾರೆಡ್ಡಿ ಮುದನೂರು ಅವರು ಬಡಜನರ ಹಸಿವು ನಿಗಿಸುವ ‌ಜೊತೆ ಕೋವಿಡ್ ಜಾಗೃತಿ ಮೂಡಿಸುತ್ತಿರುವ ಕಾರ್ಯ ‌ಮೆಚ್ಚುವಂತಾಗಿದೆ.
Published by: Sushma Chakre
First published: May 13, 2021, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories