HOME » NEWS » Coronavirus-latest-news » WROTE THE LETTER TO ELECTION COMMISSION FOR POSTPONED THE GRAMA PANCHAYAT ELECTIONS SAYS KS ESHWARAPPA RH

ಈ ತಿಂಗಳು ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಆಯೋಗಕ್ಕೆ ಪತ್ರ; ಸಚಿವ ಕೆ.ಎಸ್.ಈಶ್ವರಪ್ಪ

Gram Panchayat Election: ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು ನೀಡಿದರು. ಮದ್ಯ ಮಾರಾಟ ಮಾಡಿ ಎಂದು ಮೊದಲು ಹೇಳಿದವರು ಇವರೇ. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಅಂದ್ರೆ ಏನು? ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ? ಎಂದು ಪ್ರಶ್ನೆ ಮಾಡಿದರು.

news18-kannada
Updated:May 5, 2020, 5:16 PM IST
ಈ ತಿಂಗಳು ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಆಯೋಗಕ್ಕೆ ಪತ್ರ; ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಬೆಂಗಳೂರು: ನಾಳೆಯಿಂದ ಅಂತರ್ಜಲ ಚೇತನ‌ ವಿಶೇಷ ಯೋಜನೆಯನ್ನು ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ತರಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಅಂತರ್ಜಲ ಚೇತನ ಯೋಜನೆಯನ್ನು ಮೊದಲು ಶಿವಮೊಗ್ಗದಲ್ಲಿ ಪ್ರಾರಂಭ ಮಾಡಲಾಗುವುದು. ಕೋಲಾರ,  ಚಿಕ್ಕಬಳ್ಳಾಪುರದಲ್ಲಿ ಮೂರ್ನಾಲ್ಕು ದಿನದಲ್ಲಿ ಜಾರಿಗೆ ತರುತ್ತೇವೆ. ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು. ಹಾಗೆಯೇ, ನರೇಗಾ ಯೋಜನೆಯಲ್ಲಿ ಅತಿಹೆಚ್ಚಿನ ಜನರು ಕೆಲಸಕ್ಕೆ ಬರುತ್ತಿದ್ದಾರೆ. ಕೆಲಸಕ್ಕೆ ಬರುವ ಪ್ರತಿಯೊಬ್ಬರಿಗೆ ಜಾಬ್ ಕಾರ್ಡ್ ನೀಡಲಾಗಿದೆ ಎಂದು ಹೇಳಿದರು.

ಇದೇ ತಿಂಗಳಲ್ಲಿ  ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೋನಾದಿಂದಾಗಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಅವಧಿ ಮುಕ್ತಾಯ ಆಗಿರುವ ಗ್ರಾ.ಪಂ. ಗಳಲ್ಲಿ ಆಡಳಿತಾಧಿಕಾರಿ ಇಲ್ಲವೆ ಆಡಳಿತ ಸಮಿತಿ ರಚಿಸುವ ಕುರಿತು ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಒಂದು ವಾರದಲ್ಲಿ ಸ್ಪಷ್ಟ ನಿರ್ಧಾರ ಆಗಲಿದೆ ಎಂದು ಈಶ್ವರಪ್ಪ ತಿಳಿಸಿದರು. ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಒಟ್ಟಿಗೆ ನಡೆಸಬೇಕು ಅಂತ ಒತ್ತಾಯಗಳು ಕೇಳಿ ಬರುತ್ತಿವೆ. ಇದರ ಸಾದಕ- ಬಾದಕ ಕುರಿತು ಚರ್ಚೆ ಮಾಡಬೇಕು. ಕ್ಯಾಬಿನೆಟ್​ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ‌ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.

ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು ನೀಡಿದರು. ಮದ್ಯ ಮಾರಾಟ ಮಾಡಿ ಎಂದು ಮೊದಲು ಹೇಳಿದವರು ಇವರೇ. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಅಂದ್ರೆ ಏನು? ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ? ಸಿದ್ದರಾಮಯ್ಯ ಅವರ ಹೇಳಿಕೆ ನನಗೆ ಅರ್ಥ ಆಗ್ತಿಲ್ಲ. ಕುಡುಕರಿಗೆ ಶಿಸ್ತು ಪಾಲನೆ ಮಾಡಲು, ಕುಡುಕರು ಹೇಗೆ ಇರಬೇಕು ಎಂದು ತಿಳಿಯಲು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದರೆ ಉತ್ತಮ. ಸಿದ್ದರಾಮಯ್ಯ ಅವರೇ ಸಲಹೆ ನೀಡಲಿ, ಅವರು ಹೇಳಿದಂತೆ ನಾವು ಮಾಡ್ತೇವೆ ಎಂದ  ವ್ಯಂಗ್ಯವಾಡಿದರು.

ಇದನ್ನು ಓದಿ: Siddaramaiah: ಕಾರ್ಮಿಕರು ತವರಿಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡದಿದ್ದರೆ ಕಾಂಗ್ರೆಸ್​ ಹೋರಾಟ ಮಾಡಲಿದೆ - ಸಿದ್ದರಾಮಯ್ಯ

ಕಾರ್ಮಿಕರನ್ನು ಅವರವರ ಊರಿಗೆ ಕಳಿಸುವಲ್ಲಿ ಸರ್ಕಾರ ಎಡವಿದೆ ಎನ್ನುವ ಪ್ರತಿಪಕ್ಷಗಳ ವಿರುದ್ದ ಈಶ್ವರಪ್ಪ ಗರಂ ಆದರು. ಡಿಕೆ ಶಿವಕುಮಾರ್​ಗೆ ಕಣ್ಣು ಕಾಣಲ್ವಾ. ಅವರು ಕಣ್ಣಿದ್ದು ಕುರುಡರಾಗಿದ್ದಾರೆ. ದೇಶದಲ್ಲಿ ಕೊರೋನಾ ನಿಯಂತ್ರಣ ವಿಷಯದಲ್ಲಿ ಕರ್ನಾಟಕ ಉತ್ತಮ ಕೆಲಸ ಮಾಡುತ್ತಿದೆ. ಅದಕ್ಕೆ ಜನರು ನಮ್ಮನ್ನು ಪ್ರಶಂಸಿಸುತ್ತಿದ್ದಾರೆ.  ಆದ್ರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಪೈಪೋಟಿಗೆ ಬಿದ್ದು ಮಾತಾಡ್ತಾ ಇದ್ದಾರೆ. ಡಿಕೆ ಶಿವಕುಮಾರ್ ಸೋನಿಯಾ ಗಾಂಧಿ ಮೆಚ್ಚಿಸೋಕೆ ಮಾಡ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವೊಂದು ಇದೆ ಎಂದು ತೋರಿಸವ ಪ್ರಯತ್ನ ಅಷ್ಟೇ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾಗಿದೆ ಎಂದು ಆರೋಪಿಸಿದರು.
Youtube Video
First published: May 5, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories