Coronavirus Updates: ವಿಶ್ವಾದ್ಯಂತ 37.27 ಲಕ್ಷ ಜನರಿಗೆ ಕೊರೋನಾ; ಸಾವಿನ ಸಂಖ್ಯೆ 2.58 ಲಕ್ಷಕ್ಕೆ ಏರಿಕೆ

Coronavirus News Updates: ಅಮೆರಿಕದಲ್ಲಿ 12.37 ಲಕ್ಷ ಜನರಿಗೆ ಸೋಂಕು ತಗುಲಿದ್ದು, 72,271 ಜನರು ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:May 6, 2020, 8:43 AM IST
Coronavirus Updates: ವಿಶ್ವಾದ್ಯಂತ 37.27 ಲಕ್ಷ ಜನರಿಗೆ ಕೊರೋನಾ; ಸಾವಿನ ಸಂಖ್ಯೆ 2.58 ಲಕ್ಷಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಮೇ 6): ಜಗತ್ತಿನ ಬಹುತೇಕ ದೇಶಗಳಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ವಿಶ್ವಾದ್ಯಂತ 37.27 ಲಕ್ಷ ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 2.58 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

37.27 ಲಕ್ಷ ಸೋಂಕಿತರ ಪೈಕಿ 12.41 ಲಕ್ಷ ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಮೆರಿಕದಲ್ಲಿ ಅತಿಹೆಚ್ಚು ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅಮೆರಿಕದಲ್ಲಿ 12.37 ಲಕ್ಷ ಜನರಿಗೆ ಸೋಂಕು ತಗುಲಿದ್ದು, 72,271 ಜನರು ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲಿ 25,613 ಜನರು ಸಾವನ್ನಪ್ಪಿದ್ದು, 2.50 ಲಕ್ಷ ಜನರಿಗೆ ಸೋಂಕು ತಗುಲಿದೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ 2.13 ಲಕ್ಷಕ್ಕೆ ಏರಿಕೆಯಾಗಿದ್ದು, 29,315 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 12 ದೇಶ, 64 ವಿಮಾನ, 14,800 ಭಾರತೀಯರು; ಮೇ 7ರಿಂದ ಸರ್ಕಾರದಿಂದ ಅನಿವಾಸಿಗಳ ರಕ್ಷಣಾ ಕಾರ್ಯಾಚರಣೆ

ಭಾರತದಲ್ಲಿ 2ನೇ ಬಾರಿಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಇದರ ನಡುವೆಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ದೇಶದಲ್ಲಿ 49,400 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. 14,142 ಜನರು ಗುಣಮುಖರಾಗಿದ್ದು, 1,693 ಜನರು ಕೊರೋನಾ ವೈರಸ್​​ನಿಂದ ಸಾವನ್ನಪ್ಪಿದ್ದಾರೆ.
First published: May 6, 2020, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading