• ಹೋಂ
  • »
  • ನ್ಯೂಸ್
  • »
  • Corona
  • »
  • ಕೋವಿಡ್-19ಗೆ ಜನ್ಮಕೊಟ್ಟ ಚೀನಾದಲ್ಲಿ ಈಗ ಪ್ಲೇಗ್ ಮಹಾಮಾರಿ ಮತ್ತೆ ಪ್ರತ್ಯಕ್ಷ; ವಿಶ್ವರಾಷ್ಟ್ರಗಳು ದಿಗ್ಮೂಢ

ಕೋವಿಡ್-19ಗೆ ಜನ್ಮಕೊಟ್ಟ ಚೀನಾದಲ್ಲಿ ಈಗ ಪ್ಲೇಗ್ ಮಹಾಮಾರಿ ಮತ್ತೆ ಪ್ರತ್ಯಕ್ಷ; ವಿಶ್ವರಾಷ್ಟ್ರಗಳು ದಿಗ್ಮೂಢ

ಹೆಗ್ಗಣ ಜಾತಿಯ ಮಾರ್ಮೋಟ್ ಪ್ರಾಣಿ

ಹೆಗ್ಗಣ ಜಾತಿಯ ಮಾರ್ಮೋಟ್ ಪ್ರಾಣಿ

ಚೀನಾದ ಉತ್ತರ ಭಾಗದಲ್ಲಿರುವ ಇನ್ನರ್ ಮಂಗೋಲಿಯಾ ಪ್ರದೇಶದ ಬಯಣ್ಣುರ್ ಎಂಬ ನಗರದ ಆಸ್ಪತ್ರೆಯೊಂದರಲ್ಲಿ ಬುಬೋನಿಕ್ ಪ್ಲೇಗ್ ಪ್ರಕರಣ ಪತ್ತೆಯಾಗಿದೆ.

  • Share this:
top videos

    ನವದೆಹಲಿ(ಜುಲೈ 06): ಇಡೀ ವಿಶ್ವಕ್ಕೆ ಅನೇಕ ವಸ್ತುಗಳನ್ನ ರಫ್ತು ಮಾಡಿ ಬಲಿಷ್ಠ ರಾಷ್ಟ್ರವೆನಿಸಿರುವ ಚೀನಾದಿಂದ ರೋಗಗಳೂ ರಫ್ತಾಗುತ್ತವೆ. ಐತಿಹಾಸಿಕವಾಗಿ ವಿಶ್ವವನ್ನ ಬಾಧಿಸಿರುವ ಅನೇಕ ರೋಗಗಳಿಗೆ ಚೀನಾವೇ ಮೂಲವಾಗಿದೆ. ಕೋವಿಡ್-19 ವೈರಾಣು ರೋಗ ಕೂಡ ಜನ್ಮತಳೆದದ್ದು ಚೀನಾದ ವುಹಾನ್ ನಗರಿಯಲ್ಲೇ. ಈ ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವೇ ತತ್ತರಿಸಿಹೋಗುತ್ತಿದೆ. ಇದೇ ಹೊತ್ತಲ್ಲಿ ಈಗ ಚೀನಾದಲ್ಲಿ ಪ್ಲೇಗ್ ಎಂಬ ಭೀಕರ ಮಹಾಮಾರಿ ಮತ್ತೆ ಪ್ರತ್ಯಕ್ಷವಾಗಿದೆ. ಚೀನಾದ ಉತ್ತರ ಭಾಗದಲ್ಲಿರುವ ಇನ್ನರ್ ಮಂಗೋಲಿಯಾ ಪ್ರದೇಶದ ಬಯಣ್ಣುರ್ ಎಂಬ ನಗರದ ಆಸ್ಪತ್ರೆಯೊಂದರಲ್ಲಿ ಬುಬೋನಿಕ್ ಪ್ಲೇಗ್ ಪ್ರಕರಣ ಪತ್ತೆಯಾಗಿದೆ.

    ಇದರ ಬೆನ್ನಲ್ಲೇ ಈಗ ಪ್ಲೇಗ್ ಹರಡುವ ಸಾಧ್ಯತೆ ಇರುವುದರಿಂದ ಲೆವೆಲ್ 3 ಅಲರ್ಟ್ ಹೊರಡಿಸಲಾಗಿದೆ. ಕೋವಿಡ್ ರೋಗಕ್ಕೆ ವೈರಸ್ ಸೋಂಕು ಕಾರಣವಾಗದರೆ, ಈ ಪ್ಲೇಗ್ ಕಾಯಿಲೆಗೆ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಹೆಗ್ಗಣ, ತೋಡದಂತಹ ಪ್ರಾಣಿಗಳ(Rodents) ಮೈಮೇಲಿರುವ ಚಿಗಟಗಳಿಂದ (fFleas) ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ರವಾನೆಯಾಗಿ ಆ ಮೂಲಕ ಸೋಂಕು  ಹರಡುತ್ತದೆ.

    ಇದನ್ನೂ ಓದಿ: ಕುವೈತ್​ನಲ್ಲಿ ಹೊಸ ಕಾನೂನು ಜಾರಿಗೆ ಸಿದ್ಧತೆ; ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ 7 ಲಕ್ಷ ಭಾರತೀಯರು!

    21ನೇ ಶತಮಾನಕ್ಕೂ ಮುನ್ನ ಇಡೀ ವಿಶ್ವವನ್ನೇ ಅತಿ ಹೆಚ್ಚು ಬಾಧಿಸಿದ್ದ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಪ್ಲೇಗ್ ಮತ್ತು ಕಾಲರಾ ಪ್ರಮುಖವಾದವು. ಪ್ಲೇಗ್​ನಲ್ಲಿ ಮೂರು ವಿಧಗಳಿವೆ. ಈಗ ಚೀನಾದಲ್ಲಿ ಮರುಪ್ರತ್ನಕ್ಷವಾಗಿರುವ ಬುಬೋನಿಕ್ ಪ್ಲೇಗ್, ಸೆಪ್ಟಿಸೆಮಿಕ್ ಪ್ಲೇಗ್ ಮತ್ತು ನ್ಯೂಮೋನಿಕ್ ಪ್ಲೇಗ್. ಯೆರ್ಸಿನಿಯಾ ಪೆಸ್ಟ್ಸ್ (Yersinia Pests) ಎಂದು ಹೆಸರಿಲಾಗಿರುವ ಬ್ಯಾಕ್ಟೀರಿಯಾಗಳು ಈ ಪ್ಲೇಗ್ ಕಾಯಿಲೆಗೆ ಕಾರಣವಾಗುತ್ತವೆ. ನ್ಯೂಮೋನಿಕ್ ಪ್ಲೇಗ್ ಗಾಳಿಯಲ್ಲು ಹರಡುವುದರಿಂದ ಬಹಳ ಅಪಾಯಕಾರಿ ಎನಿಸುತ್ತದೆ. ಆದರೆ, ಬುಬೋನಿಕ್ ಪ್ಲೇಗ್ ಮುಖ್ಯವಾಗಿ ಚಿಗಟಗಳ ಮೂಲಕ ಮನುಷ್ಯರಿಗೆ ರವಾನೆಯಾಗುತ್ತದೆ. ಸೋಂಕಿತ ಮನುಷ್ಯನ ಎಂಜಲು, ಗೊಣ್ಣೆ, ಕಫ, ರಕ್ತ ಇತ್ಯಾದಿ ಸಂಪರ್ಕದ ಮೂಲಕವೂ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ಹೆಗ್ಗಣದ ಮಾಂಸ ತಿಂದವರಿಗೂ ಸೋಂಕು ತಗುಲುತ್ತದೆ.

    ಇದನ್ನೂ ಓದಿ: ‘ಗಾಳಿಯಿಂದಲೂ ಕೊರೊನಾ ಹರಡಲಿದೆ‘ - ಹೀಗೊಂದು ಭಯಾನಕ ಮಾಹಿತಿ ಹೊರಹಾಕಿದ 239 ವಿಜ್ಞಾನಿಗಳು



    ಬುಬೋನಿಕ್ ಪ್ಲೇಗ್ ಕಾಯಿಲೆಯ ಲಕ್ಷಣಗಳು:

    ಚಳಿ ನಡುಕ, ಜ್ವರದಂತಹ ಅಸ್ವಸ್ಥತೆ, 102 ಡಿಗ್ರಿಗೂ ಹೆಚ್ಚು ತೀವ್ರತೆಯ ಜ್ವರ, ದುಗ್ದರಸ ಗ್ರಂಥಿ (Lymph node) ಊತ, ದೇಹದ ಯಾವುದಾದರೂ ಭಾಗ ಊದಿಕೊಳ್ಳುವುದಕ್ಕಿಂತ ಮೊದಲು ನೋವಾಗುವುದು, ಕೆಲ ತೀವ್ರ ಸೋಂಕಿನ ಸಂದರ್ಭದಲ್ಲಿ ಬೆರಳು, ಪಾದ, ತುಟಿ, ಮೂಗಿನ ಗ್ಯಾಂಗ್ರೀನ್ ಆಗಬಹುದು. ಹಾಗೆಯೇ, ತೀವ್ರತರದ ಉಸಿರಾಟ, ರಕ್ತ ವಾಂತಿ, ಕೆಮ್ಮು ವ್ಯಕ್ತವಾಗಬಹುದು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು