HOME » NEWS » Coronavirus-latest-news » WORLD NO 1 TENNIS PLAYER NOVAK DJOKOVIC HAS TESTED POSITIVE FOR COVID 19 VB

Novak Djokovic: ವಿಶ್ವದ ನಂಬರ್ ಒನ್ ಟಿನಿಸ್ ಆಟಗಾರ ಜೊಕೋವಿಕ್​ಗೆ ಕೊರೋನಾ; ಗರ್ಭಿಣಿ ಪತ್ನಿಗೂ ಪಾಸಿಟಿವ್

ಈ ವಿಚಾರ ಹೊರಬಿದ್ದ ಬೆನ್ನಲ್ಲೇ ಕೂಟ ಆಯೋಜಿಸಿದ ಜೊಕೋವಿಕ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ 19 ಸೋಂಕು ತಡೆಗಾಗಿ ಸರ್ಬಿಯಾ ಹಾಗೂ ಕ್ರೊವೇಶಿಯಾ ಸರಕಾರಗಳ ಮಾರ್ಗಸೂಚಿಗಳನ್ನು ಸಂಘಟಕರು ಸರಿಯಾಗಿ ಪಾಲಿಸಿರಲಿಲ್ಲ.

news18-kannada
Updated:June 24, 2020, 9:24 AM IST
Novak Djokovic: ವಿಶ್ವದ ನಂಬರ್ ಒನ್ ಟಿನಿಸ್ ಆಟಗಾರ ಜೊಕೋವಿಕ್​ಗೆ ಕೊರೋನಾ; ಗರ್ಭಿಣಿ ಪತ್ನಿಗೂ ಪಾಸಿಟಿವ್
ನೊವಾಕ್​ ಜೊಕೋವಿಕ್
  • Share this:
ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್​ ಆಟಗಾರ ಸರ್ಬಿಯಾದ ನೊವಾಕ್​ ಜೊಕೋವಿಕ್​ಗೆ ಮತ್ತು ಅವರ ಗರ್ಭಿಣಿ ಪತ್ನಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ತಾನೇ ಆಯೋಜಿಸಿದ ಆಯಡ್ರಿಯಾ ಟೂರ್‌ ಸೌಹಾರ್ದ ಟೆನಿಸ್‌ ಕೂಟದ ವೇಳೆ ಜೊಕೋವಿಕ್‌ ಅವರಿಗೆ ಕೋವಿಡ್ 19 ಸೋಂಕು ಅಂಟಿಕೊಂಡದ್ದು ವಿಪರ್ಯಾಸ.

ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ನಾಲ್ವರಲ್ಲಿ ಪಾಸಿಟಿವ್‌ ಕಂಡುಬಂದಂತಾಗಿದೆ. ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ಗೆ ಕೋವಿಡ್ 19 ಸೋಂಕು ತಗುಲಿದ ಬೆನ್ನಲ್ಲೇ ಕ್ರೊವೇಶಿಯಾದ ಬೋರ್ನ ಕೊರಿಕ್‌ಗೂ ವೈರಸ್‌ ತಾಗಿತ್ತು. ಮಂಗಳವಾರ ಸರ್ಬಿಯಾದ ವಿಕ್ಟರ್‌ ಟ್ರಾಯ್ಕಿ ಅವರಿಗೂ ಕೋವಿಡ್ 19 ಅಂಟಿಕೊಂಡಿತು.

ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು; ಪಾಕಿಸ್ತಾನದ 10 ಆಟಗಾರರಿಗೆ ಕೊರೋನಾ ಪಾಸಿಟಿವ್

ಅಲ್ಲದೆ ಜೊಕೋವಿಕ್ ಅವರ ಗರ್ಭಿಣಿ ಪತ್ನಿ ಜೆಲೆನಾಗೂ ಸೋಂಕು ತಗುಲಿದ್ದು, ಇಬ್ಬರೂ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ. ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಇದಾಗಿ 5 ದಿನಗಳ ನಂತರ ಮತ್ತೊಮ್ಮೆ ಜೊಕೋವಿಕ್ ದಂಪತಿಗೆ ಕೋವಿಡ್ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಇನ್ನೂ ಈ ವಿಚಾರ ಹೊರಬಿದ್ದ ಬೆನ್ನಲ್ಲೇ ಕೂಟ ಆಯೋಜಿಸಿದ ಜೊಕೋವಿಕ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ 19 ಸೋಂಕು ತಡೆಗಾಗಿ ಸರ್ಬಿಯಾ ಹಾಗೂ ಕ್ರೊವೇಶಿಯಾ ಸರಕಾರಗಳ ಮಾರ್ಗಸೂಚಿಗಳನ್ನು ಸಂಘಟಕರು ಸರಿಯಾಗಿ ಪಾಲಿಸಿರಲಿಲ್ಲ.

Sanju Samson: ರಾಹುಲ್ ದ್ರಾವಿಡ್ ಗುರುವಾಗಿ ಸಿಕ್ಕಿದ್ದು ನನ್ನ ಅದೃಷ್ಟ..!

ಸಾಮಾಜಿಕ ಅಂತರವನ್ನು ಮರೆತು ಪರಸ್ಪರ ಅಪ್ಪಿಕೊಳ್ಳುವುದು ಹಾಗೂ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದರು ಇದರಿಂದ ಸೋಂಕು ಹರಡಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅಷ್ಟರಲ್ಲಿ ಸ್ವತಃ ಜೊಕೋವಿಕ್‌ ಅವರೇ ಕೋವಿಡ್ 19 ಸೋಂಕಿತರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
First published: June 24, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories