Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆ

ಇನ್ನು, ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 69 ಸಾವಿರ ಮಂದಿಗೆ ಹೊಸದಾಗಿ ಕೊರೋನಾ ಬಂದಿದೆ. ಹಾಗೆಯೇ ಬ್ರೆಜಿಲ್​​ನಲ್ಲಿ ಶುಕ್ರವಾರ ಒಂದೇ ದಿನ 45,000 ಹೊಸ ಕೇಸ್​​, 1,200 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಈ ಮೂಲಕ ಬ್ರೆಜಿಲ್​​​ ಒಂದರಲ್ಲೇ ಸೋಂಕಿತರ ಸಂಖ್ಯೆ 1.8 ಮಿಲಿಯನ್​ ಆಗಿದೆ.


Updated:July 11, 2020, 9:15 AM IST
Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜು.11): ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್​ ರೋಗದ ಆರ್ಭಟ ಮುಂದುವರಿದಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್​​-19 ಸೋಂಕು ಈಗ ಜಗತ್ತಿನ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ನಿನ್ನೆ ಒಂದೇ ದಿನ ಶುಕ್ರವಾರ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸುಮಾರು​ 2.2 ಲಕ್ಷಕ್ಕೂ ಹೆಚ್ಚು ಜನರಿಗೆ‌ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆಯೂ 12.5 ಮಿಲಿಯನ್​​ನಷ್ಟು ಆಗಿದೆ.

ಇನ್ನು, ವಿಶ್ವದಾದ್ಯಂತ ಕಳೆದ 24 ಗಂಟೆಯಲ್ಲಿ 228,102 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಗತ್ತಿನ ವಿವಿಧ ದೇಶಗಳಲ್ಲಿ ಸೋಂಕಿತರ ಸಂಖ್ಯೆಯೂ 1 ಕೋಟಿ 25 ಲಕ್ಷ ದಾಟಿದೆ. ಇದುವರೆಗೂ ಕೊರೋನಾಗೆ ಕಳೆದ ಏಳು ತಿಂಗಳಿನಲ್ಲಿ 559,000 ಜನರ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 69 ಸಾವಿರ ಮಂದಿಗೆ ಹೊಸದಾಗಿ ಕೊರೋನಾ ಬಂದಿದೆ. ಹಾಗೆಯೇ ಬ್ರೆಜಿಲ್​​ನಲ್ಲಿ ಶುಕ್ರವಾರ ಒಂದೇ ದಿನ 45,000 ಹೊಸ ಕೇಸ್​​, 1,200 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಈ ಮೂಲಕ ಬ್ರೆಜಿಲ್​​​ ಒಂದರಲ್ಲೇ ಸೋಂಕಿತರ ಸಂಖ್ಯೆ 1.8 ಮಿಲಿಯನ್​ ಆಗಿದೆ.

ಇನ್ನು, ಭಾರತದಲ್ಲಿ ನಿನ್ನೆ 26,506 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 7,93,802ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಂದೇ ದಿನ ಕೊರೋನಾಗೆ 475 ಮಂದಿ ಅಸುನೀಗಿದ್ದಾರೆ.

ಹೀಗಿರುವಾಗಲೇ ಕೊರೋನಾ ವೈರಸ್ ಸೋಂಕಿಗೆ ಮದ್ದು ಯಾವಾಗ ಕಂಡುಹಿಡಿಯುತ್ತಾರೆಂದು ಇಡೀ ಜಗತ್ತು ಕಾಯುತ್ತಿದೆ. ಈ ಮಧ್ಯೆ ಬೇರೆ ಬೇರೆ ವೈರಾಣು ರೋಗ ಮತ್ತು ಕಾಯಿಲೆಗಳಿಗೆ ನೀಡಲಾಗುವ ಔಷಧವನ್ನೇ ಸದ್ಯಕ್ಕೆ ಕೊರೋನಾ ಸೋಂಕಿತರ ಚಿಕಿತ್ಸೆಗೂ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಕೆಲವು ಯಶಸ್ವಿಯಾದರೆ ಮತ್ತೆ ಕೆಲವು ನಿರುಪಯುಕ್ತವೆನಿಸಿವೆ. ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಕೊರೋನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ಯೂನ್ (Hydroxychloroquine) ಔಷಧವನ್ನು ಬಳಕೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿದೆ. ಈ ಹೈಡ್ರಾಕ್ಸಿಕ್ಲೋರೋಕ್ಯೂನ್ ಅನ್ನು ಮಲೇರಿಯಾ ರೋಗದ ಚಿಕಿತ್ಸೆಗೆ ಬಳಸಲಾಗುತ್ತಿದೆ.

ಇದನ್ನೂ ಓದಿ: ಇಂದು ಕಾಂಗ್ರೆಸ್​​ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ: ಕೊರೋನಾ ವೈರಸ್​​, ಆರ್ಥಿಕ ಕುಸಿತದ ಬಗ್ಗೆ ಚರ್ಚೆ ಕೊರೋನಾ ವೈರಸ್ ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಹುದೆಂಬುದು ಫ್ರಾನ್ಸ್​ನಲ್ಲಿ ನಡೆದ ಪ್ರಯೋಗದಲ್ಲಿ ಗೊತ್ತಾಗಿದೆ. ಭಾರತದ ಲ್ಯಾಬ್​ಗಳಲ್ಲೂ ಇದರ ಪರೀಕ್ಷೆಯಾಗಿದೆ. ಇದನ್ನು ಆ್ಯಂಟಿ-ಬಯೋಟಿಕ್ ರೀತಿಯಲ್ಲಿ ಬಳಕೆ ಮಾಡಿದರೆ ಪ್ರಯೋಜನವಾಗಬಹುದೆಂಬುದು ಅರಿವಿಗೆ ಬಂದಿದೆ. ಆದರೆ, ಇದೆಲ್ಲವೂ ಕ್ಲಿನಿಕಲ್ ಟ್ರಯಲ್​ನಲ್ಲಿ ಮಾತ್ರ ಸಾಬೀತಾಗಿರುವಂಥದ್ದು. ವ್ಯಾಪಕವಾಗಿ ಇದರ ಪ್ರಯೋಗ ಆಗಬೇಕಿದೆ. ಆಗ ಇದು ಕೊರೋನಾ ಚಿಕಿತ್ಸೆಗೆ ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
Published by: Ganesh Nachikethu
First published: July 11, 2020, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading