ನವದೆಹಲಿ(ಏ.15): ಭಾರತದಲ್ಲಿ ಆರ್ಥಿಕತೆ ಕೆಳಮಟ್ಟಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಎಂಜಿಎನ್‌ಆರ್‌ಇಜಿಎ) ಯೋಜನೆಯಡಿ ಕೆಲಸ ಪುನರಾರಂಭಿಸಲು ಅನುಮತಿ ನೀಡಿದೆ. ಆದರೆ, ಈ ವೇಳೆ ಕೂಲಿ ಕಾರ್ಮಿಕರು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಹೇಳಿದೆ.
ಎಂಜಿಎನ್‌ಆರ್‌ಇಜಿಎ ಕಾಮಗಾರಿಗಳನ್ನು ಪುನರಾರಂಭಿಸಲು ಅನುಮತಿಸಿದ ಗೃಹ ಸಚಿವಾಲಯದ ಇತ್ತೀಚಿನ ಮಾರ್ಗಸೂಚಿಗಳು ಲಕ್ಷಾಂತರ ದೈನಂದಿನ ಕೂಲಿ ಕಾರ್ಮಿಕರಿಗೆ ಸಾಕಷ್ಟು ಆರ್ಥಿಕ ಪರಿಹಾರವನ್ನು ಒದಗಿಸಲಿದೆ. ಅವರ ಏಕೈಕ ಜೀವನೋಪಾಯದ ಮೂಲವೆಂದರೆ ಎಂಜಿಎನ್‌ಆರ್‌ಇಜಿಎ ಮೂಲಕ ಆದಾಯವಾಗಿದೆ.
ಎಂಜಿಎನ್‌ಆರ್‌ಇಜಿಎ ಕಾಮಗಾರಿಗಳನ್ನು ಪುನರಾರಂಭಿಸುವಾಗ, ನೀರಾವರಿ ಮತ್ತು ನೀರಿನ ಸಂರಕ್ಷಣಾ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.
ನೀರಾವರಿ ಮತ್ತು ಜಲ ಸಂರಕ್ಷಣಾ ಕ್ಷೇತ್ರಗಳಲ್ಲಿನ ಇತರ ಕೇಂದ್ರ ಮತ್ತು ರಾಜ್ಯ ವಲಯದ ಯೋಜನೆಗಳನ್ನು ಸಹ ಕಾರ್ಯಗತಗೊಳಿಸಲು ಅನುಮತಿಸಬಹುದು ಮತ್ತು ಎಂಎನ್‌ಆರ್‌ಇಜಿಎ ಕಾರ್ಯಗಳೊಂದಿಗೆ ಸೂಕ್ತವಾಗಿ ಬಳಸಿಕೊಳ್ಳಬಹುದು ಎಂದು ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.
ಈ ಯೋಜನೆಯಡಿ ಬಾಕಿ 4,431 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ದೇಶದ ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಏಪ್ರಿಲ್ 10 ರೊಳಗೆ ಬಾಕಿ ಇರುವ ಬಾಕಿ 11,499 ರೂಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು.
ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಸ್ಥಗಿತಗೊಂಡಿದ್ದರಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 7,000 ರೂ.ಗಳ ತುರ್ತು ಹಣಕಾಸು ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಹಲವಾರು ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದವು.
ಕಳೆದ ವಾರ ಕೇಂದ್ರ ಮತ್ತು ರಾಜ್ಯಗಳ ನಡುವಿನ ವೀಡಿಯೊ ಕಾನ್ಫರೆನ್ಸ್ನಲ್ಲಿ 7 ರಾಜ್ಯಗಳು ಈಗಾಗಲೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸ್ಥಗಿತಗೊಳಿಸಿವೆ ಎಂದು ತಿಳಿಸಲಾಯಿತು.
ಲಾಕ್ ಡೌನ್ ಅವಧಿಯ ವಿಸ್ತರಣೆಯನ್ನು ಘೋಷಿಸುವಾಗ ಪ್ರಧಾನಿ ಮೋದಿ ಮಂಗಳವಾರ ತಮ್ಮ ಭಾಷಣದಲ್ಲಿ ಮಾತನಾಡುತ್ತಾ, ಹೊಸ ಮಾರ್ಗಸೂಚಿಗಳು ಜನರ ಹಿತಾಸಕ್ತಿಗಳನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ : Monsoon 2020: ಈ ವರ್ಷ ಸರಾಸರಿ ಮುಂಗಾರು ಸುರಿಯಲಿದೆ ಎಂದ ಹಮಾಮಾನ ಇಲಾಖೆ; ಅತಿ ಹೆಚ್ಚು ಕೃಷಿ ಉತ್ಪನ್ನ ಉತ್ಪಾದನೆ ನಿರೀಕ್ಷೆ
ಹೊಸ ಮಾರ್ಗಸೂಚಿಗಳನ್ನು ಮಾಡುವಾಗ, ನಾವು ಬಡ ಮತ್ತು ದೈನಂದಿನ ಕೂಲಿ ಕಾರ್ಮಿಕರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡಿದ್ದೇವೆ. ರಾಬಿ ಬೆಳೆಗಳ ಕಟಾವು ಕೂಡ ನಡೆಯುತ್ತಿದೆ. ರೈತರು ಕನಿಷ್ಠ ಸಮಸ್ಯೆಗಳನ್ನು ಎದುರಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ