HOME » NEWS » Coronavirus-latest-news » WORK FROM HOME AND NO OUTSIDE ACTIVITIES MAHARASHTRA TASK FORCES ADVICE TO GOVERNMENT RHHSN

ಮಹಾರಾಷ್ಟ್ರದಲ್ಲಿ ಕೊರೋನಾತಂಕ; ವರ್ಕ್ ಫ್ರಂ ಹೋಂ, ಹೊರಗಿನ ಚಟುವಟಿಕೆ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಕಾರ್ಯಪಡೆ

ಮಹಾರಾಷ್ಟ್ರ ಕೊರೋನಾ ನಿಯಂತ್ರಣ ಕಾರ್ಯಪಡೆ ನೀಡಿರುವ ಶಿಫಾರಸುಗಳನ್ನು ಇಂದಿನ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರು ಚರ್ಚಿಸಿ, ಮುಂದಿನ ನಿರ್ಧಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

news18-kannada
Updated:March 26, 2021, 4:07 PM IST
ಮಹಾರಾಷ್ಟ್ರದಲ್ಲಿ ಕೊರೋನಾತಂಕ; ವರ್ಕ್ ಫ್ರಂ ಹೋಂ, ಹೊರಗಿನ ಚಟುವಟಿಕೆ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಕಾರ್ಯಪಡೆ
ಸಾಂದರ್ಭಿಕ ಚಿತ್ರ
  • Share this:
ಮುಂಬೈ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 35,952 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಮತ್ತು 111 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಕೈ ಮೀರುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಆದರೂ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶುಕ್ರವಾರ ರಾಜ್ಯದ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಕಾರ್ಯಾಚರಣೆಗೆ ಸ್ಥಾಪಿಸಲಾದ ಮಹಾರಾಷ್ಟ್ರ ಕಾರ್ಯಪಡೆ ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದೆ. ಈ ಎಲ್ಲ ಶಿಫಾರಸ್ಸುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.

ಕಾರ್ಯಪಡೆ ನೀಡಿರುವ ಶಿಫಾರಸ್ಸುಗಳು

ಕೊರೋನಾ ಎರಡನೇ ಅಲೆ ಮತ್ತು ಹೊಸ ರೂಪಾಂತರಿ ವೈರಸ್​ನ ಒತ್ತಡವಿದೆ ಎಂದು ಕಾರ್ಯಪಡೆ ಹೇಳಿದೆ. ಅದು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ರೋಗನಿರೋಧಕದಿಂದ ಪಾರಾಗುವುದು ಕಷ್ಟವಿದೆ. ಇದು ಕೂಡ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಒಂದು ಕಾರಣವಾಗಿದೆ.

ಕಾರ್ಯಪಡೆ ಎರಡು ಅಂಶಗಳನ್ನು ಆಧರಿಸಿ ಶಿಫಾರಸುಗಳನ್ನು ಕಳುಹಿಸಿದೆ: 1) ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಮತ್ತು 2) ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸುವುದು.

ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಕಾನೂನಿನಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕಾರ್ಯಪಡೆ ಸೂಚಿಸಿದೆ.

ಕಾರ್ಯಪಡೆಯು ಪ್ರಮುಖವಾಗಿ ‘ಮೂರು ಟಿ’ಗಳು ಮತ್ತು‘ ಒಂದು ಐ’ ಬಗ್ಗೆ ಸಲಹೆ ನೀಡಿದೆ. ಪತ್ತೆ ಹಚ್ಚುವಿಕೆ, ಪರೀಕ್ಷೆ, ಚಿಕಿತ್ಸೆ (test, trace treat) ಮತ್ತು ಪ್ರತ್ಯೇಕಿಸಿ ಇರಿಸುವುದು. (isolate). ಯುವಕರನ್ನು ಮನೆಯಲ್ಲಿ ಐಸೋಲೆಟ್​ ಮಾಡುವುದು ಕಷ್ಟಕರವಾದ ಕಾರಣ, ಅವರನ್ನು ಸಾಂಸ್ಥಿಕ ಐಸೋಲೆಷನ್​ನಲ್ಲಿ ಇರಿಸಬೇಕು ಅಥವಾ   ಹೋಂ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.- 24 ಗಂಟೆಗಳಲ್ಲಿ ಪ್ರತಿ ಕೋವಿಡ್ ಪ್ರಕರಣಕ್ಕೆ 30 ಸಂಪರ್ಕಗಳನ್ನು ಪತ್ತೆ ಹಚ್ಚಬೇಕು.

- ಕೆಲಸವಿಲ್ಲದಿದ್ದರೆ ಹೊರಗೆ ಹೋಗುವುದನ್ನು ತಪ್ಪಿಸಿ. ರಸ್ತೆ ಮೂಲೆಗಳಲ್ಲಿ ಜನರು ಚಿಟ್-ಚಾಟ್ ಮಾಡುವುದು, ಬೆಳಿಗ್ಗೆ ಮತ್ತು ಸಂಜೆ ವಾಕ್​ ಮಾಡುವುದು ಸೇರಿದಂತೆ ಮುಂತಾದ ಚಟುವಟಿಕೆಗಳನ್ನು ನಿಲ್ಲಿಸಬೇಕಿದೆ.

- ಕಚೇರಿಯ ವಾಸ್ತವ ಬಳಕೆ. ಪ್ರಸ್ತುತ ಕಚೇರಿ ಸ್ಥಳಗಳನ್ನು ಶೇ. 50 ರಷ್ಟು ಮುಚ್ಚಲಾಗಿದೆ ಆದರೆ ಉಳಿದ ಶೇ. 50  ಮನೆಯಿಂದಲೂ ಕೆಲಸ ಮಾಡಲು ಸಾಧ್ಯವಾದರೆ, ಅವರು ಹಾಗೆ ಮಾಡಬೇಕು.

- ಒಬ್ಬ ವ್ಯಕ್ತಿಯು ರೋಗ ಲಕ್ಷಣಗಳನ್ನು ಹೊಂದಿದ್ದರೆ, ಅವರು ಅದನ್ನು ನಿರ್ಲಕ್ಷಿಸಬಾರದು, ಆದರೆ ಪರೀಕ್ಷೆಗೆ ಒಳಗಾಗಬೇಕು.

ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. 18 ಮತ್ತು 45 ವರ್ಷದೊಳಗಿನ ಜನರು ಸೇರಿದಂತೆ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಲು ಶಿಫಾರಸು ಮಾಡಲಾಗಿದೆ ಆದರೆ ಸರ್ಕಾರಿ ಮಟ್ಟದಲ್ಲಿ ಅದಕ್ಕೆ ನಿರ್ಬಂಧಗಳಿವೆ.

ಇದನ್ನು ಓದಿ: Mumbai Fire - ಮುಂಬೈ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; ಇಬ್ಬರ ಸಾವು

- ಹೆಚ್ಚಿದ ಪರೀಕ್ಷೆಯಿಂದಾಗಿ ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡುಬರಬಹುದು ಎಂದು ಕಾರ್ಯಪಡೆ ಎಚ್ಚರಿಕೆ ನೀಡಿದೆ.
Youtube Video

ಮಹಾರಾಷ್ಟ್ರ ಕೊರೋನಾ ನಿಯಂತ್ರಣ ಕಾರ್ಯಪಡೆ ನೀಡಿರುವ ಶಿಫಾರಸುಗಳನ್ನು ಇಂದಿನ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರು ಚರ್ಚಿಸಿ, ಮುಂದಿನ ನಿರ್ಧಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
Published by: HR Ramesh
First published: March 26, 2021, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories