ಐಪಿಎಲ್​ಗಾಗಿ ಏಷ್ಯಾ ಕಪ್ ವೇಳಾಪಟ್ಟಿ ಬದಲಿಸಿದರೆ ನಾವು ಒಪ್ಪಲ್ಲ; ಪಾಕ್ ಕ್ರಿಕೆಟ್ ಮಂಡಳಿ

ಐಪಿಎಲ್​ಗಾಗಿ  ಏಷ್ಯಾ ಕಪ್ ಟೂರ್ನಿ ರದ್ದು ಮಾಡಲು ಅಥವಾ ಏಷ್ಯಾ ಕಪ್ ವೇಳಾಪಟ್ಟಿ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.

news18-kannada
Updated:April 24, 2020, 12:24 PM IST
ಐಪಿಎಲ್​ಗಾಗಿ ಏಷ್ಯಾ ಕಪ್ ವೇಳಾಪಟ್ಟಿ ಬದಲಿಸಿದರೆ ನಾವು ಒಪ್ಪಲ್ಲ; ಪಾಕ್ ಕ್ರಿಕೆಟ್ ಮಂಡಳಿ
ಈ ಸುದ್ದಿ ಬೆನ್ನಲ್ಲೇ ಇತ್ತ ಪಾಕ್ ಕ್ರಿಕೆಟ್ ಮಂಡಳಿ ಹೊಸ ವರಸೆ ಶುರು ಮಾಡಿಕೊಂಡಿದೆ. 2020 ರ ಟಿ20 ಏಷ್ಯಾ ಕಪ್ ಕೂಡ ಸೆಪ್ಟೆಂಬರ್​ನಲ್ಲಿ ನಡೆಯಬೇಕಿದೆ. ಅದು ಕೂಡ ಪಾಕಿಸ್ತಾನದಲ್ಲಿ. ಆದರೆ ಕೊರೋನಾ ಕಾರಣದಿಂದ ಟೂರ್ನಿಯನ್ನು ರದ್ದು ಮಾಡಲು ಚರ್ಚಿಸಲಾಗಿದೆ.
  • Share this:
ಬೆಂಗಳೂರು (ಏ. 24): ಕೊರೋನಾ ವೈರಸ್ ಹಾವಳಿಯಿಂದಾಗಿ ವಿಶ್ವದ ಬಹುತೇಕ ಎಲ್ಲ ಕ್ರೀಡಾಕೂಟಗಳು ರದ್ದಾಗಿವೆ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮುಂದಕ್ಕೆ ಹೋಗಿದ್ದು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಈ ನಡುವೆ ಮುಂದೂಡಲ್ಪಟ್ಟಿರುವ ಐಪಿಎಲ್​ಗೆ ಅವಕಾಶ ಕಲ್ಪಿಸುವ ಸಲುವಾಗಿ ಸಪ್ಟೆಂಬರ್​​ನಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

Sachin Tendulkar Birthday: ಇಂದು ಕ್ರಿಕೆಟ್ ದೇವರ ಜನ್ಮದಿನ; ಕೊರೋನಾ ಕಾರಣ ಹುಟ್ಟುಹಬ್ಬ ಆಚರಿಸದಿರಲು ಸಚಿನ್ ತೆಂಡುಲ್ಕರ್ ನಿರ್ಧಾರ

ಅಂದುಕೊಂಡಂತೆ ಆಗಿದ್ದರೆ ಕಳೆದ ತಿಂಗಳ 29ರಿಂದ ಟೂರ್ನಿ ನಡೆಯಬೇಕಿತ್ತು. ಆದರೆ, ಅದಕ್ಕೂ ಒಂದು ವಾರ ಮುನ್ನ ದೇಶದಲ್ಲಿ ಲಾಕ್‌ ಡೌನ್‌ ಘೋಷಿಸಲಾಯಿತು. ಈ ಸಂದರ್ಭ ಏಪ್ರಿಲ್ 15ರವರೆಗೆ ಟೂರ್ನಿಯನ್ನು ಮುಂದೂಡಲಾಯಿತು. ಆದರೆ, ಏ. 14ರಿಂದ ಮತ್ತೆ ಎರಡನೇ ಹಂತದ ಲಾಕ್‌ಡೌನ್ ಮುಂದೂಡಲಾಯಿತು. ಇದರಿಂದಾಗಿ ಟೂರ್ನಿ ಆರಂಭವಾಗಲಿಲ್ಲ.

ಇದರ ಬೆನ್ನಲ್ಲೆ ಐಪಿಎಲ್​ಗಾಗಿ  ಏಷ್ಯಾ ಕಪ್ ಟೂರ್ನಿ ರದ್ದು ಮಾಡಲು ಅಥವಾ ಏಷ್ಯಾ ಕಪ್ ವೇಳಾಪಟ್ಟಿ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ. ಅಲ್ಲದೆ ಕೊರೋನಾ ಸಮಸ್ಯೆಗಳಿಲ್ಲದಿದ್ದರೆ ಪಾಕಿಸ್ತಾನವೇ ಪಂದ್ಯಾವಳಿ ನಡೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಏಷ್ಯಾ ಕಪ್ ಕುರಿತು ಮಹತ್ವದ ಹೇಳಿಕೆ ಬಿಡುಗಡೆ ಮಾಡಿತ್ತು. ಏಷ್ಯಾ ಕಪ್ ಟೂರ್ನಿ ಕೇವಲ ಪಾಕಿಸ್ತಾನ ಮತ್ತು ಭಾರತದ ನಡುವಿನ ಟೂರ್ನಿಯಲ್ಲ. ಇತರೆ ದೇಶಗಳೂ ಆಡುತ್ತಿವೆ. ಪಾಕಿಸ್ತಾನದಲ್ಲೇ ಈ  ಟೂರ್ನಿಯನ್ನು ಆಯೋಜಿಸಬೇಕಿತ್ತು. ಆದರೆ ಭಾರತವು ಭದ್ರತಾ ಕಾರಣಗಳನ್ನು ನೀಡಿ ಇಲ್ಲಿಗೆ ಬರಲು ಹಿಂದೇಟು ಹಾಕಿದ ನಂತರ ಅದನ್ನು ದುಬೈ ಮತ್ತು ಅಬುಧಾಬಿಗೆ ಸ್ಥಳಾಂತರಿಸಲಾಯಿತು. ಆದರೆ ಇದೀಗ ಅಲ್ಲಿಯೂ ಟೂರ್ನಿ ಆಯೋಜನೆ ಕುರಿತು ಪ್ರಶ್ನೆ ಎದ್ದಿದೆ. ಯಾವುದೇ  ಕಾರಣಕ್ಕೂ ಐಪಿಎಲ್​ಗಾಗಿ ಏಷ್ಯಾ ಕಪ್ ರದ್ದಾಗಲು ಬಿಡುವುದಿಲ್ಲ. ಏಷ್ಯಾದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಏಷ್ಯಾ ಕಪ್ ನಿರ್ಣಾಯಕ ಪಾತ್ರವಹಿಸಲಿದೆ. ಏಷ್ಯನ್ ಕ್ರಿಕೆಟ್ ಸಂಸ್ಥೆಗಳಿಗೆ ಆದಾಯ ತಂದೊಡ್ಡಲಿದೆ ಎಂದು ಹೇಳಿತ್ತು.

RCB ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಹ ಆಟಗಾರರೇ ಹೊಟ್ಟೆಕಿಚ್ಚು ಪಟ್ಟಿದ್ದರು..!ಇತ್ತ ಎಲ್ಲಾದರು ಈ ವರ್ಷ ಐಪಿಎಲ್ ಟೂರ್ನಿ ರದ್ದಾದರೆ ಕೋಟ್ಯಂತರ ರೂಪಾಯಿ ಜೇಬಿಗಿಳಿಸುತ್ತಿದ್ದ ಸ್ಟಾರ್ ವಾಹಿನಿ ದೊಡ್ಡ ನಷ್ಟದ ಅನುಭವಿಸಿಲಿದೆ. ಒಂದು ಅಂದಾಜಿನ ಪ್ರಕಾರ ಐಪಿಎಲ್ ನಡೆಯದೇ ಹೋದಲ್ಲಿ ಸ್ಟಾರ್ ಸುಮಾರು ಮೂರು ಸಾವಿರ ಕೋಟಿ‌ ನಷ್ಟ ಹೊಂದಲಿದೆ. ಇನ್ನೂ ಬಿಗ್​ಬಾಸ್ ಬಿಸಿಸಿಐ ಕಥೆಯೂ ಹೀಗೆ ಇದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಷ್ಟ 400 ಕೋಟಿ ರೂಪಾಯಿ ಎನ್ನಲಾಗಿದೆ.
First published: April 24, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading