HOME » NEWS » Coronavirus-latest-news » WOMAN MANAGER GIVING HALF A BREAK TO STAFF FOR MASTURBATION RHHSN

ಹಸ್ತಮೈಥುನಕ್ಕಾಗಿ ಸಿಬ್ಬಂದಿಗೆ ದಿನದಲ್ಲಿ ಅರ್ಧ ತಾಸು ಬ್ರೇಕ್ ಕೊಟ್ಟು ವಿಶ್ವದ ಗಮನ ಸೆಳೆದ ಮಹಿಳಾ ಮ್ಯಾನೇಜರ್!

ಮೇ ತಿಂಗಳನ್ನು ಅಂತಾರಾಷ್ಟ್ರೀಯ ಹಸ್ತಮೈಥುನ ತಿಂಗಳನ್ನಾಗಿ ಆಚರಣೆ ಮಾಡಿಕೊಂಡು, ಮೇ 26ಕ್ಕೆ ಹಸ್ತಮೈಥುನ ದಿನದ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಸ್ತಮೈಥುನದಿಂದ ಒತ್ತಡ ಕಡಿಮೆ ಆಗುತ್ತದೆ ಎನ್ನುವುದನ್ನು ಸಂಶೋಧನೆಗಳು ಸಹ ಒಪ್ಪಿಕೊಂಡಿವೆ.

news18-kannada
Updated:May 31, 2021, 11:21 PM IST
ಹಸ್ತಮೈಥುನಕ್ಕಾಗಿ ಸಿಬ್ಬಂದಿಗೆ ದಿನದಲ್ಲಿ ಅರ್ಧ ತಾಸು ಬ್ರೇಕ್ ಕೊಟ್ಟು ವಿಶ್ವದ ಗಮನ ಸೆಳೆದ ಮಹಿಳಾ ಮ್ಯಾನೇಜರ್!
ಎರಿಕಾ ಲಸ್ಟ್‌
  • Share this:
ಕೊರೋನಾ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಕೊರೋನಾ ಕಾರಣದಿಂದ ಮಾಡಲಾದ ಲಾಕ್​ಡೌನ್​ ಹಲವು ದೇಶಗಳ ಆರ್ಥಿಕ ಅಧಃಪತನಕ್ಕೆ ಕಾರಣವಾಗಿದ್ದರೆ, ಹಲವು ಕಂಪನಿಗಳು, ಕಾರ್ಖಾನೆಗಳು ನಷ್ಟದಲ್ಲಿ ನಡೆಯುವಂತಾಗಿದೆ. ಹೀಗಾಗಿ ನಷ್ಟ ಸರಿದೂಗಿಸಿಕೊಳ್ಳಲು ಹಲವು ಕಂಪನಿಗಳು ನೂರಾರು ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟಿದೆ. ಆದರೆ, ಇಲ್ಲೊಂದು ಕಂಪನಿ ನೀಡಿರುವ ಸೌಲಭ್ಯ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

ಕೊರೋನಾ ಕಾರಣದಿಂದ ಜನರ ಹಾಗೂ ಉದ್ಯೋಗಿಗಳ ಪ್ರತೀದಿನದ ಜೀವನ ಕ್ರಮವೆ ಬದಲಾಗಿ ಹೋಗಿದೆ. ಕೊರೋನಾ ಪರಿಣಾಮ ತಮ್ಮ ಉದ್ಯೋಗಿಗಳು ಒತ್ತಡದಿಂದ ಇರಬಾರದು, ಅವರು ಸದಾ ಉಲ್ಲಾಸದಿಂದ ಇರಬೇಕು ಎಂದು ಇಲ್ಲೊಬ್ಬರು ಮಹಿಳಾ ಮ್ಯಾನೇಜರ್ ವಿಶೇಷ ಕ್ರಮ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಬಾರ್ಸಿಲೋನಾದ ವಯಸ್ಕ ಸಿನಿಮಾಗಳ ನಿರ್ಮಾಪಕಿ ಹಾಗೂ ಎರಿಕಾ ಲಸ್ಟ್  ಫಿಲಂಸ್ ಮ್ಯಾನೇಜರ್ ಅಗಿರುವ ಎರಿಕಾ ಲಸ್ಟ್‌ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ದಿನಕ್ಕೆ 30 ನಿಮಿಷಗಳ ಕಾಲ ಹಸ್ತಮೈಥುನಕ್ಕಾಗಿ ವಿರಾಮವನ್ನು ನೀಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಅಲ್ಲದೇ ಎರಿಕಾ ಲಸ್ಟ್‌ನಲ್ಲಿರುವ ಉದ್ಯೋಗಿಗಳ ಸ್ವಯಂ-ಪ್ರೀತಿಯ ಅರ್ಥವನ್ನು ನಿಜವಾಗಿಯೂ ಗೌರವಿಸುತ್ತದೆ ಮತ್ತು ನಿಮ್ಮೆಲ್ಲರನ್ನು ಅನುಸರಿಸಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪುರುಷರ ವೀರ್ಯ ಕೆಲವೊಮ್ಮೆ ಬಣ್ಣ ಬದಲಾಗಬಹುದು; ಅದಕ್ಕೆ ಕಾರಣವೇನು ಗೊತ್ತೆ?

ಅಲ್ಲದೆ ದೈನಂದಿನ ವೇಳಾಪಟ್ಟಿಯಲ್ಲಿ ತಿಂಡಿ, ಟೀ ಜತೆಗೆ ಹಸ್ತಮೈಥುನದ ಬ್ರೇಕ್ ಅನ್ನು ಸಹ ಸೇರಿಸಿದ್ದಾರೆ! ಈ ಮೂಲಕ ಮೇ ತಿಂಗಳನ್ನು ಅಂತಾರಾಷ್ಟ್ರೀಯ ಹಸ್ತಮೈಥುನ ತಿಂಗಳನ್ನಾಗಿ ಆಚರಣೆ ಮಾಡಿಕೊಂಡು, ಮೇ 26ಕ್ಕೆ ಹಸ್ತಮೈಥುನ ದಿನದ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಸ್ತಮೈಥುನದಿಂದ ಒತ್ತಡ ಕಡಿಮೆ ಆಗುತ್ತದೆ ಎನ್ನುವುದನ್ನು ಸಂಶೋಧನೆಗಳು ಸಹ ಒಪ್ಪಿಕೊಂಡಿವೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: May 31, 2021, 11:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories