ಇವರಷ್ಟು ಖುಷಿಯಾಗಿರುವ ಸೋಂಕಿತೆಯನ್ನು ನೋಡೇ ಇಲ್ಲ; ವಿಡಿಯೋ ವೈರಲ್ ಬೆನ್ನಲ್ಲೇ ಶಾಕಿಂಗ್ ನ್ಯೂಸ್!

ಈ ಸೋಂಕು ಇನ್ನೆಷ್ಟು ಭಯಾನಕ? ಪರಿಸ್ಥಿತಿ ನಾನು ಅಂದಾಜಿಸುತ್ತಿರುವಷ್ಟು ಸಾಧಾರಣವಾಗಿಲ್ಲ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ವೈರಲ್​​ ವಿಡಿಯೋದಲ್ಲಿ ಸೋಂಕಿತೆ

ವೈರಲ್​​ ವಿಡಿಯೋದಲ್ಲಿ ಸೋಂಕಿತೆ

  • Share this:
ನವದೆಹಲಿ: ದೇಶ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲೆಲ್ಲೂ ಸೋಂಕಿತರು, ಕೊರೋನಾ ಸಾವುಗಳೇ ಕಿವಿಗೆ ಬೀಳುತ್ತಿದೆ. ಆಸ್ಪತ್ರೆಗಳ ಬೆಡ್​ ಮೇಲೆ ಕೊರೋನಾ ವಿರುದ್ಧ ಲಕ್ಷಾಂತರ ಭಾರತೀಯರು ಹೋರಾಡುತ್ತಿದ್ದಾರೆ. ಸೂಕ್ತ ಚಿಕಿತ್ಸೆಯೊಂದಿಗೆ ಮುಷ್ಠಿಯಷ್ಟು ಆತ್ಮಸ್ಥೈಯ, ಪ್ರೋತ್ಸಾಹವೂ ಸೋಂಕಿತರಿಗೆ ಬೇಕಿದೆ. ದೆಹಲಿಯ ವೈದ್ಯರೊಬ್ಬರು ಎರಡು ದಿನಗಳ ಹಿಂದೆ ಮಂಗಳವಾರ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಸೋಂಕಿತ ಮಹಿಳೆಯೊಬ್ಬರು ವೆಂಟಿಲೇಟರ್​ನಲ್ಲಿದ್ದರೂ ಹೇಗೆ ಖುಷಿಯಿಂದ, ಧೈರ್ಯದಿಂದ ಇದ್ದಾರೆ. ನಾನು ಎಂದೂ ಇಷ್ಟೊಂದು ಖುಷಿಯಾಗಿರುವ ರೋಗಿಯನ್ನು ನೋಡಿಲ್ಲ ಎಂದು ವೈದ್ಯೆ ಸಂತಸ ಹಂಚಿಕೊಂಡಿದ್ದರು.

30 ವರ್ಷ ಈ ಸೋಂಕಿತೆ ಕೊರೋನಾ ವಿರುದ್ಧ ಮಂದಹಾಸದಿಂದಲೇ ಹೋರಾಡುತ್ತಿದ್ದಾರೆ. ಈಕೆಗಾಗಿ ಮನೆಯಲ್ಲಿ ಪುಟ್ಟ ಕಂದಮ್ಮ ಕಾಯುತ್ತಿದೆ. ಈಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ವೈದ್ಯೆ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋಗೆ ಹಿಂದಿ ಸಿನಿಮಾದ ಲವ್​​ ಯೂ ಜಿಂದಗಿ ಹಾಡನ್ನು ಸೇರಿಸಲಾಗಿತ್ತು. ಸೋಂಕಿತೆ ನೋವಿನ ಮಧ್ಯೆಯೂ ನಗುತ್ತಾ ಚಿಕಿತ್ಸೆ ಪಡೆಯುವ ವಿಡಿಯೋ ಲಕ್ಷಾಂತರ ನೆಟ್ಟಿಗರ ಹೃದಯ ಗೆದ್ದಿತ್ತು. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್​ ಆಗಿತ್ತು. ಈಕೆಯ ಧೈರ್ಯ ಹಲವರಿಗೆ ಸ್ಫೂರ್ತಿ ಎಂದು ಹಲವರು ಕಮೆಂಟ್​ ಮಾಡಿದ್ದರು. ಆದರೆ ಇಂದು ಭಯಾನಕ ಸುದ್ದಿಯೊಂದು ನೆಟ್ಟಿಗರನ್ನು ಅಪ್ಪಳಿಸಿದೆ.

2 ದಿನಗಳ ಹಿಂದೆಯಷ್ಟೇ ಲವಲವಿಕೆಯಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಸೋಂಕಿತೆ ಕೊನೆಯುಸಿರೆಳೆದಿದ್ದಾರೆ. ಕರುಣೆ ಇಲ್ಲದ ಕೊರೋನಾ ಆಕೆಯನ್ನು ನಗುಮುಖವನ್ನು ಕಸಿದು, ಸಾವಿನ ಮನೆ ಸೇರಿಸಿದೆ. 2 ದಿನಗಳ ಹಿಂದೆಯಷ್ಟೇ ವಿಡಿಯೋ ಶೇರ್​ ಮಾಡಿದ್ದ ವೈದ್ಯೆ ಮೋನಿಕಾ ಲಾಂಗೆ ಈ ಕಹಿ ಸುದ್ದಿಯನ್ನು ತಿಳಿಸಿದ್ದಾರೆ. ನನ್ನನ್ನು ಕ್ಷಮಿಸಿ ಧೈರ್ಯವಂತ ಆತ್ಮವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 30 ವರ್ಷದ ಸೋಂಕಿತೆ ಕೊರೋನಾಗೆ ಬಲಿಯಾಗಿದ್ದಾರೆ. ಈಕೆಗೆ ಸೋಂಕಿತೆಗೆ ಪುಟ್ಟ ಮಗುವೂ ಇದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ನೆಟ್ಟಿಗರಿಗೆ ಆಘಾತವಾಗಿದೆ.

ಚಿಕಿತ್ಸೆ ಪಡೆಯುತ್ತಿದ್ದ ಎಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದಾಕೆ ಕೇವಲ 2 ದಿನಗಳಲ್ಲಿ ಕೊರೋನಾಗೆ ಬಲಿಯಾಗಿದ್ದು, ನೆಟ್ಟಿಗರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ಸೋಂಕು ಇನ್ನೆಷ್ಟು ಭಯಾನಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಾನು ಅಂದಾಜಿಸುತ್ತಿರುವಷ್ಟು ಸಾಧಾರಣವಾಗಿಲ್ಲ ಎಂಬುವುದಕ್ಕೆ ಆಕೆಯ ಸಾವೇ ಸಾಕ್ಷಿ ಎಂದೂ ಕೆಲವರು ಕಮೆಂಟ್​ ಮಾಡಿದ್ದಾರೆ. ಸೋಂಕಿತೆಯ ಪುಟ್ಟ ಮಗುವನ್ನು ನೆನೆದು ಹಲವರು ಮರುಕ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 3,43,144  ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,44,776 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,40,46,809ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಗುರುವಾರ  4,000 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,62,317ಕ್ಕೆ ಏರಿಕೆ ಆಗಿದೆ.
Published by:Kavya V
First published: