• Home
 • »
 • News
 • »
 • coronavirus-latest-news
 • »
 • ಕಬಾಬ್​ ತಿನ್ನಲು ಲಾಕ್​ಡೌನ್​ ನಿಯಮ ಮುರಿದು 75 ಕಿಮೀ ಸಂಚರಿಸಿದ ಮಹಿಳೆ: ಕಟ್ಟಿದ ಫೈನ್​ ಬರೋಬ್ಬರಿ 1 ಲಕ್ಷ

ಕಬಾಬ್​ ತಿನ್ನಲು ಲಾಕ್​ಡೌನ್​ ನಿಯಮ ಮುರಿದು 75 ಕಿಮೀ ಸಂಚರಿಸಿದ ಮಹಿಳೆ: ಕಟ್ಟಿದ ಫೈನ್​ ಬರೋಬ್ಬರಿ 1 ಲಕ್ಷ

ಕಬಾಬ್

ಕಬಾಬ್

ಯುವತಿಯೋರ್ವಳು ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಕಬಾಬ್​ಗಾಗಿ ಸುಮಾರು ತಮ್ಮ ಮನೆಯಿಂದ 75 ಕಿಲೋ ಮೀಟರ್​ ದೂರ ಕಾರ್​ ಡ್ರೈವ್​ ಮಾಡಿಕೊಂಡು ಹೋಗಿದ್ದಾರೆ. ಕಬಾಬ್​​ ತಿಂದು ವಾಪಸ್​​ ಬರುವಾಗ ಪೊಲೀಸರು ಈಕೆ ಕಾರು ಅಡ್ಡಗಟ್ಟಿ ಫೈನ್​ ಹಾಕಿದ್ಧಾರೆ.

 • Share this:

  ನವದೆಹಲಿ(ಸೆ.09): ಮಾರಕ ಕೊರೋನಾ ವೈರಸ್​​ ಲಾಕ್​ಡೌನ್​​ನಿಂದ ಯಾರು ಮನೆಯಿಂದ ಹೊರಗೇ ಹೋಗಿಲ್ಲ. ಒಂದು ವೇಳೆ ಮನೆಯಿಂದ ಹೊರಗೆ ಹೋದಲ್ಲಿ ಎಲ್ಲಿ ಕೊರೋನಾ ಸೋಂಕು ತಗುಲಿ ಹಾಸಿಗೆ ಇಡಿಬೇಕಾಗುತ್ತದೋ ಎಂದು ಎಲ್ಲರೂ ಮನೆಯಲ್ಲೇ ಉಳಿದುಕೊಂಡಿದ್ದರು. ಇದರಿಂದ ಮಾಲ್​​, ಪಾರ್ಕ್​​, ರೆಸ್ಟೋರೆಂಟ್​​​, ಬಾರ್​​ ಸೇರಿದಂತೆ ಹಲವನ್ನು ಮಿಸ್​ ಮಾಡಿಕೊಳ್ಳಬೇಕಾಯತ್ತು. ಕೆಲವರಂತೂ ನಾನ್​​ ವೆಜ್​​ ತಿನ್ನಲೇಬೇಕು ಎನ್ನುವರು ತಮ್ಮಿಷ್ಟದ ಹೋಟೆಲ್​​ ಮತ್ತು ಫುಡ್​ ಮಿಸ್ ಮಾಡಿಕೊಳ್ಳುತ್ತಿದ್ದರು. ಹಲವರು ಮನೆಯಲ್ಲೇ ತಮಗೆ ಬೇಕಾದ ರುಚಿಕರ ತಿಂಡಿಗಳನ್ನು ಮಾಡಿಕೊಂಡು ತಿನ್ನುತ್ತಿದ್ದರು. ಇನ್ನಲವರು ಆನ್​ಲೈನ್​ ಮೂಲಕ ಹೋಟೆಲ್​​ ಫುಡ್​ ಆರ್ಡರ್​ ಮಾಡಿ ತಮ್ಮ ಬಾಯಿ ಚಪ್ಪಲ ತೀರಿಸಿಕೊಳ್ಳುತ್ತಿದ್ದರು. ಆದರೆ, ಆಸ್ಟ್ರೇಲಿಯಾದಲ್ಲಿ ಮಾತ್ರ ಯುವತಿಯೋರ್ವಳು ಕಬಾಬ್​​ ತಿನ್ನಲು ಲಾಕ್​ಡೌನ್​​​ ನಿಯಮ ಉಲ್ಲಂಘಿಸಿ ದುಬಾರಿ ಫೈನ್​ ಕಟ್ಟಿದ್ಧಾಳೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. 


  ಆಸ್ಟ್ರೇಲಿಯಾದಲ್ಲಿ ನಾಲ್ಕನೇ ಹಂತದ ಲಾಕ್ ‌ಡೌನ್ ಜಾರಿಯಲ್ಲಿದೆ. ಹೀಗಿರುವಾಗಲೇ ಯುವತಿಯೋರ್ವಳು ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಕಬಾಬ್​ಗಾಗಿ ಸುಮಾರು ತಮ್ಮ ಮನೆಯಿಂದ 75 ಕಿಲೋ ಮೀಟರ್​ ದೂರ ಕಾರ್​ ಡ್ರೈವ್​ ಮಾಡಿಕೊಂಡು ಹೋಗಿದ್ದಾರೆ. ಕಬಾಬ್​​ ತಿಂದು ವಾಪಸ್​​ ಬರುವಾಗ ಪೊಲೀಸರು ಈಕೆ ಕಾರು ಅಡ್ಡಗಟ್ಟಿ ಫೈನ್​ ಹಾಕಿದ್ಧಾರೆ.


  ಇದನ್ನೂ ಓದಿ: EPF Interest Rate: ಭವಿಷ್ಯ ನಿಧಿ ಹೂಡಿಕೆ ಮೇಲೆ ಎರಡು ಕಂತುಗಳಲ್ಲಿ ಶೇ.8.5 ಬಡ್ಡಿ ನೀಡಲು ತೀರ್ಮಾನ


  ನಾನು ಇಲ್ಲಿನ ಗೀಲಾಂಗ್‌ ಏರಿಯಾದವಳು. ಕಬಾಬ್‌ ತಿನ್ನಲು ಮೆಲ್ಬರ್ನ್‌ನತ್ತ ಸಾಗುತ್ತಿದ್ದೆ. ಹೀಗೆ ಸಾಗುತ್ತಾ ನನ್ನ ಬಾಯ್​ ಫ್ರೆಂಡ್​​​ ಮನೆ ಇರುವ ವೆರ‍್ರಿಬೀ ಪ್ರದೇಶಕ್ಕೆ ಬಂದೆ. ಕಬಾಬ್​​ ತಿಂದು ನನ್ನ ಹಾಗೆಯೇ ನನ್ನ ಬಾಯ್​ ಫ್ರೆಂಡ್​ ಭೇಟಿಯಾಗಿ ಹೋಗುತ್ತಿರುವುದಾಗಿ ಪೊಲೀಸರ ಬಳಿ ಯುವತಿ ಹೇಳಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪೊಲೀಸರು ಲಾಕ್​ಡೌನ್​​ ಮಾಡಿದ್ದಕ್ಕಾಗಿ ಯುವತಿಗೆ $1652 ದಂಡ ಹಾಕಿದ್ದಾರೆ. ಅಂದರೆ ಯುವತಿ ಕಬಾಬ್​ ತಿನ್ನುವುದಕ್ಕಾಗಿ ಒಂದು ಲಕ್ಷ ರೂ. ಫೈನ್​ ಕಟ್ಟುವಂತಾಗಿದೆ.

  Published by:Ganesh Nachikethu
  First published: