Coronavirus: ಭಾರತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆ; 649 ಮಂದಿಗೆ ಕೊರೋನಾ ದೃಢ

Coronavirus Pandemic LIVE Updates: ಭಾರತದಲ್ಲಿ ಕೊರೋನಾ ವೈರಸ್​ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದೆ.  

news18-kannada
Updated:March 26, 2020, 11:14 AM IST
Coronavirus: ಭಾರತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆ; 649 ಮಂದಿಗೆ ಕೊರೋನಾ ದೃಢ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ.26): ಕೊರೋನಾ ವೈರಸ್​ ಅಟ್ಟಹಾಸಕ್ಕೆ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಕೋರೋನಾ ವೈರಸ್​ನಿಂದಾಗಿ ಮತ್ತೆರಡು ಸಾವು ಸಂಭವಿಸಿದ್ದು, ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ 649 ಆಗಿದೆ.

65 ವರ್ಷದ ಶ್ರೀನಗರದ ವೃದ್ಧೆಗೆ ಕೊರೋನಾ ವೈರಸ್​ ಇರುವುದು ದೃಢಪಟ್ಟಿತ್ತು. ಈ ವೃದ್ಧೆ ಇಂದು ಮುಂಜಾನೆ ಸಾವನಪ್ಪಿದ್ದಾರೆ. ಈ ಮೂಲಕ ಶ್ರೀನಗರದಲ್ಲಿ ಇದೇ ಮೊದಲ ಸಾವು ಸಂಭವಿಸಿದೆ. ಇನ್ನು, ನವಿ ಮುಂಬೈನ ವ್ಯಕ್ತಿ ಕೂಡ ಕೊರೋನಾ ವೈರಸ್​ಗೆ ಬಲಿಯಾಗಿದ್ದಾನೆ.ಭಾರತದಲ್ಲಿ ಈಗಾಗಲೇ 649 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈವರೆಗೆ ವಿಶ್ವದಲ್ಲಿ ಒಟ್ಟು 21,363 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಯುರೋಪ್​ ರಾಷ್ಟ್ರವೊಂದರಲ್ಲೇ 14 ಸಾವಿರಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಸದ್ಯ, ಕೊರೋನಾ ವೈರಸ್​ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಚೀನಾದಲ್ಲಿ 3,281 ಜನರು ಬಲಿಯಾಗಿದ್ದಾರೆ.

ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರು ಲಕ್ಷಣ ಗೋಚರವಾಗುತ್ತಿಲ್ಲ. ಈಗಾಗಲೇ ಇಟಲಿಯಲ್ಲಿ ಕೊರೋನಾ ವೈರಸ್​ಗೆ 7,503 ಜನರು ಬಲಿಯಾಗಿದ್ದಾರೆ. ಒಟ್ಟು 74 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್​ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್​ನಲ್ಲಿ ಈವರೆಗೆ 3,647 ಸಾವುಗಳು ಸಂಭವಿಸಿವೆ. ಇನ್ನು, ಕೊರೋನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿ ಸಮೀಪಿಸಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading