Corona 3rd Wave: ಕೊರೋನಾ ಮೂರನೇ ಅಲೆ 2ನೇ ಅಲೆಯಷ್ಟು ಭೀಕರವಾಗಿರುವುದಿಲ್ಲ; ತಜ್ಞರ ಅಭಿಪ್ರಾಯ

ತಜ್ಞರು ಮೂರನೇ ಅಲೆಯು ಎರಡನೇ ಅಲೆಯಂತೆ ಅಷ್ಟೊಂದು ಭೀಕರವಾಗಿರುವುದಿಲ್ಲ ಎಂಬ ಆಶಾಕಿರಣವನ್ನು ನೀಡಿದ್ದು ವೈರಸ್ ಕಾಲಕ್ರಮೇಣ ಸಾಮರ್ಥ್ಯ ಕಳೆದುಕೊಳ್ಳಲಿದೆ ಎಂಬ ಸಮಾಧಾನ ನೀಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಮುಂಬರುವ ಕೋವಿಡ್ ಸಾಂಕ್ರಾಮಿಕ ಅಲೆ ಎರಡನೆಯ ಅಲೆಯಷ್ಟು ಭೀಕರವಾಗಿರುವುದಿಲ್ಲ ಎಂಬ ಅಂಕಿ ಅಂಶವನ್ನು ತಜ್ಞರ ಸಮಿತಿ ನೀಡಿದೆ.ಇತ್ತೀಚೆಗೆ ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಮಥುಕುಮಳ್ಳಿ ವಿದ್ಯಾಸಾಗರ್ ಹಾಗೂ ಮಣೀಂದ್ರ ಅಗರ್‌ವಾಲ್ ತಂಡದ ನೇತೃತ್ವದಲ್ಲಿ ಕೋವಿಡ್ ಸಾಂಕ್ರಾಮಿಕದ ಕುರಿತು ಅಧ್ಯಯನ ನಡೆಸಲಾಗಿದ್ದು, ಆಗಸ್ಟ್ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೆ ಏರಲಿದೆ ಎಂಬುದು ತಿಳಿದು ಬಂದಿದೆ. ಈ ಪ್ರಕರಣಗಳು ಕಡಿಮೆ ಎಂದರೆ 100,000 ಸಂಖ್ಯೆಯನ್ನು ತಲುಪಲಿದ್ದು ಗರಿಷ್ಠ ಎಂದರೆ 150,000 ತಲುಪುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.


ಅಕ್ಟೋಬರ್‌ನಲ್ಲಿ ಕೊರೋನಾದ ಮೂರನೇ ಅಲೆ ತಾರಕಕ್ಕೆ ಏರಲಿದೆ ಎಂಬುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಂತಸದ ವಿಷಯವೆಂದರೆ ಮೂರನೇ ಅಲೆ ಅಷ್ಟೊಂದು ಭಯಾನಕವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. ಎರಡನೇ ಅಲೆಗೆ ಹೋಲಿಸಿದರೆ ಇದು ತೀವ್ರವಾದ ನಷ್ಟವನ್ನುಂಟು ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


ಗಣಿತ ಶಾಸ್ತ್ರದ ಮಾದರಿಯನ್ನು ಆಧರಿಸಿ ತಜ್ಞರು ಈ ವಿಚಾರವನ್ನು ತಿಳಿಸಿದ್ದು ಮೂರನೇ ಅಲೆಯಲ್ಲಿ ಮಹತ್ತರ ಬದಲಾವಣೆಯನ್ನುಂಟು ಮಾಡಲು ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳು ಕಾರಣವಾಗಬಹುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:Health Tips: ಬಾದಾಮಿ ತಿಂದರೆ ನಿಜಕ್ಕೂ ನೆನಪಿನ ಶಕ್ತಿ ಹೆಚ್ಚುತ್ತಾ? ಅಧ್ಯಯನ ಏನ್ ಹೇಳುತ್ತೆ ನೋಡಿ..!

ಮೇ ತಿಂಗಳಿನಲ್ಲಿ ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕರಾದ ವಿದ್ಯಾಸಾಗರ್ ಗಣಿತದ ಮಾದರಿಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಭಾರತದ ಕೊರೊನಾ ವೈರಸ್ ಸಾಂಕ್ರಾಮಿಕ ಉತ್ತುಂಗಕ್ಕೇರಬಹುದು ಎಂದು ಊಹಿಸಿದ್ದರು. ಅದರೆ, ಕಳೆದ ತಿಂಗಳ ಮಧ್ಯದ ವೇಳೆಯಲ್ಲಿ ಅಲೆ ಉತ್ತುಂಗಕ್ಕೇರಬಹುದೆಂಬ ಏಪ್ರಿಲ್‌ನ ಊಹೆ ತಪ್ಪಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಸಮಜಾಯಿಷಿಕೆ ನೀಡಿರುವ ತಂಡವು ಸಾಂಕ್ರಾಮಿಕ ಒಂದು ವಾರದವರೆಗೂ ವೇಗವಾಗಿ ಬದಲಾಗುತ್ತಿದ್ದುದರಿಂದ ತಪ್ಪಾದ ಮಾನದಂಡಗಳನ್ನು ನಿರ್ಧರಿಸಲಾಯಿತು ಎಂದು ತಿಳಿಸಿವೆ.


ಕೋವಿಡ್‌ ಮೂರನೇ ಅಲೆಯ ಆರಂಭದೊಂದಿಗೆ ಚಿಕನ್‌ಪಾಕ್ಸ್‌ನಂತೆ ಸುಲಭವಾಗಿ ಹರಡುವ ಹಾಗೂ ಲಸಿಕೆ ಹಾಕಲಾದ ಜನರಿಂದ ಹರಡುವ ಡೆಲ್ಟಾ ರೂಪಾಂತರವು ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಸಿದ್ದಾರೆ. Indian Sars-CoV-2 ಜೀನೋಮಿಕ್ ಕನ್ಸೋರ್ಟಿಯಂ (INSACOG) ಪ್ರಕಾರ ಮೇ, ಜೂನ್ ಹಾಗೂ ಜುಲೈನಲ್ಲಿ ಪ್ರತಿ 10 ಕೋವಿಡ್ – 19 ಪ್ರಕರಣಗಳಲ್ಲಿ ಸರಿಸುಮಾರು 8 ಪ್ರಕರಣಗಳು ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರದಿಂದ ಉಂಟಾಗಿದೆ ಎಂದು ತಿಳಿಸಿದ್ದಾರೆ.


ಭಾರತದಲ್ಲಿ ಭಾನುವಾರ 41,831 ಕೋವಿಡ್ -19 ಪ್ರಕರಣಗಳು ಮತ್ತು 541 ಸಾವುಗಳು ವರದಿಯಾಗಿದ್ದು. ಕೇಂದ್ರವು ಪ್ರಸ್ತುತ ಕೇರಳ, ಮಹಾರಾಷ್ಟ್ರ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ 10 ರಾಜ್ಯಗಳಿಗೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಒಟ್ಟಿನಲ್ಲಿ ತಜ್ಞರು ಮೂರನೇ ಅಲೆಯು ಎರಡನೇ ಅಲೆಯಂತೆ ಅಷ್ಟೊಂದು ಭೀಕರವಾಗಿರುವುದಿಲ್ಲ ಎಂಬ ಆಶಾಕಿರಣವನ್ನು ನೀಡಿದ್ದು ವೈರಸ್ ಕಾಲಕ್ರಮೇಣ ಸಾಮರ್ಥ್ಯ ಕಳೆದುಕೊಳ್ಳಲಿದೆ ಎಂಬ ಸಮಾಧಾನ ನೀಡುತ್ತಿದೆ. ಹೊರದೇಶಗಳಲ್ಲಿ ಡೆಲ್ಟಾ ರೂಪಾಂತರವು ಹೆಚ್ಚಿನ ಸಾವು ನೋವುಗಳನ್ನುಂಟು ಮಾಡುತ್ತಿದ್ದು ಕೋವಿಡ್ ನಿಯಮಗಳನ್ನು ಸಡಿಲಿಸಿದ್ದ ಅನೇಕ ರಾಷ್ಟ್ರಗಳು ಈ ಹಿಂದಿನಂತೆ ನಿಯಮಗಳನ್ನು ಜಾರಿಗೆ ತಂದಿವೆ ಹಾಗೂ ಕಟ್ಟುನಿಟ್ಟಿನ ಭದ್ರತೆ ಸೂಚಿಸಿವೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Published by:Latha CG
First published: