ಅಮೆರಿಕಕ್ಕೆ ಕೊರೋನಾ ನಿಯಂತ್ರಣ ಮಾಡಲು ಇರುವ ಕೊನೆಯ ಅವಕಾಶವೂ ಕೈತಪ್ಪುತಿದೆ; ಆರೋಗ್ಯ ಇಲಾಖೆ ಎಚ್ಚರಿಕೆ

ಅಮೆರಿಕದಲ್ಲಿ ಈಗಾಗಲೇ 26.37 ಲಕ್ಷ ಜನರಿಗೆ ಕೊರೋನಾ ವೈರಸ್​ ಅಂಟಿದೆ. 1.26 ಲಕ್ಷ ಜನರು ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ಮಧ್ಯೆ ನಿತ್ಯ 25-30 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

news18-kannada
Updated:June 29, 2020, 10:16 AM IST
ಅಮೆರಿಕಕ್ಕೆ ಕೊರೋನಾ ನಿಯಂತ್ರಣ ಮಾಡಲು ಇರುವ ಕೊನೆಯ ಅವಕಾಶವೂ ಕೈತಪ್ಪುತಿದೆ; ಆರೋಗ್ಯ ಇಲಾಖೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ವಾಷಿಂಗ್ಟನ್ (ಜೂ.29)​: ಕೊರೋನಾ ವೈರಸ್​ ಅಮೆರಿಕದಲ್ಲಿ ರೌದ್ರನರ್ತನವನ್ನೇ ತಾಳುತ್ತಿದೆ. ಏನೆ ಮಾಡಿದರೂ ಕೊರೋನಾ ವೈರಸ್​ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಅಲ್ಲಿನ ಆರೋಗ್ಯ ಇಲಾಖೆ ಹೊಸ ಎಚ್ಚರಿಕೆ ಒಂದನ್ನು ನೀಡಿದ್ದು, ಕೊರೋನಾ ವೈರಸ್​ ನಿಯಂತ್ರಣಕ್ಕೆ ಇರುವ ಕೊನೆಯ ಅವಕಾಶವೂ ಕೈತಪ್ಪುತಿದೆ ಎಂದಿದೆ.

ಅಮೆರಿಕದಲ್ಲಿ ಈಗಾಗಲೇ 26.37 ಲಕ್ಷ ಜನರಿಗೆ ಕೊರೋನಾ ವೈರಸ್​ ಅಂಟಿದೆ. 1.26 ಲಕ್ಷ ಜನರು ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ಮಧ್ಯೆ ನಿತ್ಯ 25-30 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

"ಎರಡು ತಿಂಗಳ ಹಿಂದೆ ಇದ್ದ ಪರಿಸ್ಥಿತಿಗೂ ಈಗಿರುವ ಪರಿಸ್ಥಿತಿಗೂ ತುಂಬಾನೇ ವ್ಯತ್ಯಾಸವಿದೆ. ಸದ್ಯದ ಪರಿಸ್ಥಿತಿ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೊರೋನಾ ನಿಯಂತ್ರಣಕ್ಕೆ ತರಲು ಕೊನೆಯ ಅವಕಾಶವೂ ಕೈತಪ್ಪುತ್ತಿದೆ," ಎಂದು ಅಮೆರಿಕ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಅಲೆಕ್ಸ್​ ಅಜರ್​ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣ; ಇಂದು ಸಚಿವರಿಂದ ತುರ್ತು ಜಂಟಿ ಸುದ್ದಿಗೋಷ್ಠಿ

"ಸದ್ಯದ ಸಂಕಷ್ಟದಿಂದ ಹೊರಬರಬೇಕಾದರೆ, ಕೊರೋನಾ ಟೆಸ್ಟ್​ ಹೆಚ್ಚಿಸಬೇಕು. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚಿ ಕ್ವಾರಂಟೈನ್​ ಮಾಡಬೇಕು, ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಬೇಕು. ಹೀಗೆ ಮಾಡಿದರೆ ಕೊರೋನಾ ನಿಯಂತ್ರಣಕ್ಕೆ ಬರಹುದು," ಎಂದು ಅವರು ಸೂಚನೆ ನೀಡಿದ್ದಾರೆ.

ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಕೆಲವು ಕಡೆಗಳಲ್ಲಿ ಲಾಕ್​ಡೌನ್​ ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ಕೊರೋನಾ ವೈರಸ್​ ಪ್ರಕರಣಗಳ ಸಂಖ್ಯೆ ಅಲ್ಲಿ ಹೆಚ್ಚುತ್ತಲೇ ಇದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading