LockDown: ಕರ್ನಾಟಕದಲ್ಲಿ ಮುಂದುವರೆಯಲಿದೆಯೇ ಲಾಕ್​ಡೌನ್?; ನಾಳೆಯ ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ!

ರಾಜ್ಯದಲ್ಲಿ ಸೋಂಕು ಪ್ರಕರಣಗಳು ಅಧಿಕವಾಗಲು ಲಾಕ್​ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿದೆ ತರದೆ ಇದ್ದದ್ದೇ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಅಂತಿಮವಾಗಿ ಮತ್ತೆ ಲಾಕ್​ಡೌನ್ ವಿಸ್ತರಿಸುವ ನಿರ್ಧಾರವನ್ನೇ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿ.ಎಸ್​. ಯಡಿಯೂರಪ್ಪ.

ಬಿ.ಎಸ್​. ಯಡಿಯೂರಪ್ಪ.

 • Share this:
  ಬೆಂಗಳೂರು (ಜೂನ್​ 01); ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಿಸುವ ಕುರಿತು ತಜ್ಞರು ನೀಡಿರುವ ವರದಿಯ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನಾಳೆ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ 6 ಗಂಟೆಗೆ ನಡೆಲಿರುವ ಸಭೆಯಲ್ಲಿ ಜೂನ್​.07ರ ನಂತರ ಲಾಕ್​ಡೌನ್​ ವಿಸ್ತರಣೆ ಮಾಡಬೇಕೆ? ಅಥವಾ ಲಾಕ್​ಡೌನ್​ ಅನ್ನು ಹಂತಹಂತವಾಗಿ ಅನ್​ಲಾಕ್​ ಮಾಡಬೇಕೆ? ಎಂಬ ಕುರಿತು ಸಿಎಂ ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಕರ್ನಾಟಕದಲ್ಲಿ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆ ಒಂದೇ ದಿನ 16,604 ಪ್ರಕರಣಗಳು ಕಂಡುಬಂದಿದ್ದು ತುಸು ಆಶಾವಾದ ಮೂಡಿದೆ. ಈ ನಡುವೆ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ. ನಿನ್ನೆ ಒಂದೇ ದಿನ ಬರೋಬ್ಬರಿ 411 ಜನ ಕೊರೋನಾಗೆ ಬಲಿ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಇನ್ನೂ ಶೇಕಡಾ 13.57ರಷ್ಟಿದೆ. ಆದರೂ ಕರ್ನಾಟಕ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂವ ವಿರೋಧಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳ ಕಾರಣದಿಂದಾಗಿ ನಾಳೆ ಸಿಎಂ ಸಚಿವರ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. 

  ಹಲವು ತಜ್ಞರು ಈವರೆಗೆ ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸಲು ಇವರು ಏಕೈಕ ಮಾರ್ಗ ಲಾಕ್​ಡೌನ್ ಮಾತ್ರ. ಹೀಗಾಗಿ ಲಾಕ್​ಡೌನ್​ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ, ಜೂನ್​ ಕೊನೆಯವರೆಗೆ ಲಾಕ್​ಡೌನ್ ಇದ್ದರೆ ಒಳ್ಳೆಯದು ಎನ್ನಲಾಗುತ್ತಿದೆ. ಆದರೆ, ಸರ್ಕಾರ ಈವರೆಗೆ ಲಾಕ್​ಡೌನ್ ಜೂನ್​.07ರ ವರೆಗೆ ವಿಸ್ತರಣೆ ಮಾಡಿದೆಯೇ ಹೊರತು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ.

  ಸೋಂಕು ಪ್ರಕರಣಗಳು ಅಧಿಕವಾಗಲು ಲಾಕ್​ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿದೆ ತರದೆ ಇದ್ದದ್ದೇ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಅಂತಿಮವಾಗಿ ಮತ್ತೆ ಲಾಕ್​ಡೌನ್ ವಿಸ್ತರಿಸುವ ನಿರ್ಧಾರವನ್ನೇ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಸಾಧ್ಯವಾದರೆ ಬಹುತೇಕ ಈ ತಿಂಗಳ ಅಂತ್ಯದವರೆಗೆ ಲಾಕ್​ಡೌನ್ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: LPG Price Today: ಗ್ರಾಹಕರಿಗೆ ಗುಡ್ ನ್ಯೂಸ್, ಪ್ರತಿ ಸಿಲಿಂಡರ್ ಮೇಲೆ ರೂ 122 ಕಡಿತ !

  ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ ವಿಸ್ತರಣೆ:

  ದೇಶದ ಚಿತ್ರಣವನ್ನು ನೋಡುವುದಾದರೆ ಹಲವಾರು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದ್ದರೂ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.‌ ಪಾಸಿಟಿವಿಟಿ ದರ ಕಡಿಮೆ ಆಗಿದ್ದರೂ ಅನ್​ಲಾಕ್ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಉದಾಹರಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇಕಡಾ 1.25ಕ್ಕೆ ಕುಸಿದರೂ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿಲ್ಲ. ಜೂನ್ 7 ವರೆಗೂ ಲಾಕ್ಡೌನ್ ಮುಂದುವರಿಸಲಾಗುತ್ತಿದೆ. ಆರು ವಾರಗಳಿಂದ ದೆಹಲಿಯಲ್ಲಿ ಲಾಕ್​ಡೌನ್ ಮುಂದುವರೆದಿದೆ.

  ಇದನ್ನೂ ಓದಿ: ಕೋವಿಡ್​ ನರ್ವಹಣೆಯಲ್ಲಿ ಎಡವಿದ ಯೋಗಿ ಆದಿತ್ಯನಾಥ್ ವಿರುದ್ಧ ಜನಾಕ್ರೋಶ; ಮುಂದಿನ ವರ್ಷದ ಚುನಾವಣೆ ಬಗ್ಗೆ ಚರ್ಚೆ

  ದೇಶದಲ್ಲಿ ಎರಡನೇ ಅಲೆಯ ಕೊರೋನಾ ಶುರುವಾದ ಬಳಿಕ ಮೊದಲು ಲಾಕ್ಡೌನ್ ಘೋಷಿಸಿದ ಮಹಾರಾಷ್ಟ್ರದಲ್ಲಿ ಮತ್ತೆ 15 ದಿನ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ. 16.5ರಷ್ಟಿದ್ದರೂ ನಿಯಮಗಳನ್ನು ಸಡಿಲಿಸಿಲ್ಲ. ಒಡಿಶಾದಲ್ಲಿ ಜೂನ್ 17ರವರೆಗೂ ಲಾಕ್ಡೌನ್ ಮುಂದುವರೆಸಲಾಗಿದೆ. ಪಶ್ಚಿಮ ಬಂಗಾಳ, ಆಂಧ್ರಗಳಲ್ಲಿ ಜೂನ್ 15ರವರೆಗೆ, ತೆಲಂಗಾಣ, ಕೇರಳದಲ್ಲಿ ಜೂನ್ 9ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಗುಜರಾತಿನ 36 ನಗರಗಳಲ್ಲಿ ಜೂನ್ 4 ವರೆಗೂ ಲಾಕ್ಡೌನ್ ಇರಲಿದೆ. ಇದೇ ರೀತಿ ಹರಿಯಾಣ, ಸಿಕ್ಕಿಂ, ಪುದುಚೇರಿ, ಮೇಘಾಲಯ, ಗೋವಾ ಮತ್ತು ಮಿಜೋರಾಂಗಳಲ್ಲೂ ಲಾಕ್‌ಡೌನ್ ವಿಸ್ತರಣೆ ಆಗಿದೆ.

  ಅನ್​ಲಾಕ್ ಪ್ರಕ್ರಿಯೆ ಶುರು ಮಾಡಿರುವ ರಾಜ್ಯಗಳೆಂದರೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾತ್ರ. ಅಲ್ಲೂ ಕೂಡ ಅನ್ಲಾಕ್ ನಡುವೆ ವಿಕೇಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಮುಂದುವರೆಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಪಾಸಿಟಿವಿಟಿ ದರ ಶೇಕಡಾ 0.8ಕ್ಕೆ ಇಳಿದ ಹಿನ್ನಲೆಯಲ್ಲಿ ಅನ್ಲಾಕ್ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಪಾಸಿಟಿವಿಟಿ ದರ ಶೇಕಡಾ 2.1ಕ್ಕೆ ಇಳಿಕೆ ಆಗಿದೆ. ಪಾಸಿಟಿವಿಟಿ ಪ್ರಮಾಣ ಕುಸಿಯುತ್ತಿದ್ದರೂ ಬೇರೆ ರಾಜ್ಯಗಳು ಅನ್ಲಾಕ್‌ ಮಾಡಲು ಮುಂದಾಗುತ್ತಿಲ್ಲ. ಆದರೆ ಕರ್ನಾಟಕ ಅನ್​ಲಾಕ್​ ಮಾಡಲು ಆತುರ ಪಡುತ್ತಿರುವುದು ಏಕೆ? ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.
  Published by:MAshok Kumar
  First published: