ಬಾಗಲಕೋಟೆ(ಮೇ.05): ಗಂಡನ ಕುಡಿತದ ಚಟಕ್ಕೆ ಹೆಂಡತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶಾರದಾ ಚವ್ಹಾಣ ಎಂದು ಗುರುತಿಸಲಾಗಿದೆ.
ಕೊರೋನಾದಿಂದ ಒಂದು ತಿಂಗಳು ಮದ್ಯ ಬಂದ್ ಆಗಿತ್ತು. ಮನೆಯಲ್ಲಿ ಮದ್ಯ ಸಿಗದಕ್ಕೆ ಹೆಂಡತಿಯೊಂದಿಗೆ ಕುಡುಕ ಗಂಡ ಪ್ರತಿ ದಿನ ಜಗಳವಾಡುತ್ತಿದ್ದ. ನಿನ್ನೆ ಮದ್ಯ ಮಾರಾಟ ಆರಂಭ ಹಿನ್ನೆಲೆಯಲ್ಲಿ ಹೆಂಡತಿ ಶಾರದಾ ಇಲಕಲ್ ನಗರದ ಜೋಸಿ ಗಲ್ಲಿಯಲ್ಲಿ ಬಾಂಡೆ ತಿಕ್ಕುವ ಕೆಲಸಕ್ಕೆ ಹೋಗಿ ಬರುವಾಗ ಕುಡಿಯಲು ಹಣ ಕೇಳಿದ ಎನ್ನಲಾಗಿದೆ.
ಹಣ ಕೊಡದಕ್ಕೆ ಸಿಟ್ಟಾಗಿ ಹೆಂಡತಿಗೆ ಹಿಂಬದಿ ಸ್ಕೂಟರ್ ಡಿಕ್ಕಿ ಹೊಡೆಸಿಕೊಂಡು ಹೋಗಿದ್ದಾನೆ. ಹೆಂಡತಿ ಶಾರದಾಗೆ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದವು. ನಿನ್ನೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಇಂದು ಸಾವನ್ನಪ್ಪಿದ್ದಳು.
ಇದನ್ನೂ ಓದಿ : ಕೊರೋನಾ ಹಾಟ್ಸ್ಪಾಟ್ ಆಗಿದ್ದ ಮೈಸೂರು ಈಗ ಕೋವಿಡ್ಮುಕ್ತ ಜಿಲ್ಲೆಯತ್ತ ಹೆಜ್ಜೆ; ಸಾಧ್ಯವಾಗಿದ್ದು ಹೇಗೆ?
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಬೈಕ್ನ್ನು ಜಪ್ತಿ ಮಾಡಿದ್ದಾರೆ. ಮಗ ರಾಮು ಪೊಲೀಸರಿಗೆ ದೂರನ್ನು ಕೊಟ್ಟಿದ್ದ. ಘಟನೆ ಬಗ್ಗೆ ಇಲಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ