‘ನಿಮ್ಮ ಕೊನೆಯ ಗಿಫ್ಟ್ ಧರೆಗಿಳಿದಿದೆ; ಸ್ವರ್ಗದಿಂದ ಕಾಣುತ್ತಿದೆಯಾ?’: ಕರುಳು ಹಿಂಡಿದೆ ಚೀನೀ ಮಹಿಳೆ ಮಾತು

ಚೀನಾದಲ್ಲಿ ಕೊರೋನಾ ವೈರಸ್ ಸೋಂಕು ಬಂದಿರುವ ವಿಚಾರವನ್ನು ಮೊದಲಿಗೆ ಬಹಿರಂಗಪಡಿಸಿದವರೇ ಲೀ ವೆನ್​ಲಿಯಾಂಗ್. ಅದಾಗಿ ಒಂದು ತಿಂಗಳ ನಂತರ ಸಾವನ್ನಪ್ಪಿದ್ದರು. ಈಗ ಅವರ ಪತ್ನಿ ಗಂಡುಮಗು ಹೆತ್ತಿದ್ದಾರೆ.

ಲೀ ವೆನ್​ಲಿಯಾಂಗ್

ಲೀ ವೆನ್​ಲಿಯಾಂಗ್

  • News18
  • Last Updated :
  • Share this:
ಬೀಜಿಂಗ್(ಜೂನ್ 13): ಚೀನಾದಲ್ಲಿ ಕೊರೋನಾ ವೈರಸ್ ಸೋಂಕು ಹರಡಿರುವುದು ಪ್ರಪಂಚಕ್ಕೆ ಗೊತ್ತಾಗುವಂತೆ ಮಾಡಿದ್ದ ಎಂಟು ವೈದ್ಯರಲ್ಲಿ ಲೀ ವೆನ್​ಲಿಯಾಂಗ್ ಕೂಡ ಒಬ್ಬರು. ಈ ಕೆಲಸ ಮಾಡಿದ್ದಕ್ಕೆ ಬಂಧಿತರಾಗಿದ್ದ ಈ ವೈದ್ಯ ಫೆಬ್ರವರಿ ತಿಂಗಳಲ್ಲಿ ಅದೇ ವೈರಾಣು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಅದಾಗಿ ನಾಲ್ಕು ತಿಂಗಳಲ್ಲಿ ಅವರ ಪತ್ನಿ ಹೆರಿಗೆಯಾಗಿದೆ. ಫೂ ಕ್ಸೂಜೀ ಅವರು ಗಂಡುಮಗುವನ್ನು ಹೆತ್ತಿದ್ಧಾರೆ. ಈ ವಿಚಾರವನ್ನು ಅವರು ಚೀನಾದ ಸೋಷಿಯಲ್ ಮೀಡಿಯಾ ವೀಚ್ಯಾಟ್​ನಲ್ಲಿ ಹಂಚಿಕೊಂಡಿದ್ದಾರೆ ಎಂದು ಲಿಚ್ಚಿ ನ್ಯೂಸ್ ಎಂಬ ಪತ್ರಿಕೆ ವರದಿ ಮಾಡಿದೆ.

“ನೀವು ಸ್ವರ್ಗದಿಂದ ನೋಡಬಲ್ಲಿರಾ? ನೀವು ಕೊಟ್ಟ ಕೊನೆಯ ಗಿಫ್ಟ್ ಇವತ್ತು ಜನ್ಮತಾಳಿದೆ. ನಾನು ಖಂಡಿತವಾಗಿ ಚೆನ್ನಾಗಿ ಪಾಲನೆ ಮಾಡುತ್ತೇನೆ” ಎಂದು ಆಕೆ ವೀಚ್ಯಾಟ್​ನಲ್ಲಿ ಬರೆದಿದ್ದಾಳೆ. ತಮ್ಮ ಪತಿ ಕೊಟ್ಟ ಕೊನೆಯ ಉಡುಗರೆಯಾದ ನವಜಾತ ಮಗುವಿನ ಫೋಟೋವನ್ನು ಅವರು ಪೋಸ್ಟ್ ಮಾಡಿದ್ಧಾರೆ. ಇವರ ಈ ಪೋಸ್ಟ್​ಗೆ ಬಹಳಷ್ಟು ಮಂದಿ ಲೈಕ್ ಮಾಡಿದ್ದಾರೆ.

ಫೂ ಕ್ಸೂಜೀ ಅವರ ಪತಿಯ ಹೆಸರು ಈಗ ಜಾಗತಿಕವಾಗಿ ಪರಿಚಿತವಾಗಿದೆ. ಕೊರೋನಾ ವೈರಸ್ ಪಿಡುಗು ಪ್ರಾರಂಭವಾದಾಗ ಚೀನಾ ಈ ವಿಚಾರವನ್ನು ಬಹಳ ಗೌಪ್ಯವಾಗಿ ಇಟ್ಟಿತ್ತು. ಲೀ ವೆನ್​ಲಿಯಾಂಗ್ ಸೇರಿದಂತೆ 8 ವೈದ್ಯರು ಡಿಸೆಂಬರ್ ತಿಂಗಳಿನಲ್ಲಿ ಹೊಸ ವೈರಸ್ ವಿಚಾರವನ್ನು ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದರು. ಲೀ ವೆನ್​ಲಿಯಾಂಗ್ ಅವರು ವಾಸ್ತವ ಬಿಚ್ಚಿಟ್ಟ ಮೊದಲಿಗರು.

ಇದನ್ನೂ ಓದಿ: ಶನಿವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಒಂದು ವಾರದಲ್ಲಿ 4 ರೂ ಬೆಲೆ ಹೆಚ್ಚಳ

ಲೀ ವೆನ್​ಲಿಯಾಂಗ್ ಅವರು ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಸಾರ್ಸ್ ಮಾದರಿಯ ವೈರಸ್ ಸೋಂಕು ತಗುಲಿದ ಏಳು ರೋಗಿಗಳಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಮ್ಮ ವೈದ್ಯಕೀಯ ಶಾಲೆಯ ವಿಚ್ಯಾಟ್ ಗ್ರೂಪ್​ನಲ್ಲಿ ಪೋಸ್ಟ್ ಮಾಡಿದ್ದರು. ಇವರ ಈ ಪೋಸ್ಟ್ ಬಹಳ ವೈರಲ್ ಆಗಿಹೋಯಿತು. ಇವರ ಹೆಸರನ್ನ ಬ್ಲರ್ ಮಾಡದೆಯೇ ಎಲ್ಲಾ ಕಡೆ ಅದರ ಸ್ಕ್ರೀನ್​ಶಾಟ್ ಹರಡಿತು.

ಇದು ಆಡಳಿತದ ಗಮನಕ್ಕೆ ಬಂದು, ಲೀ ವೆನ್​ಲಿಯಾಂಗ್ ಅವರನ್ನ ಸುಳ್ಳು ಸುದ್ದಿ ಹರಡುತ್ತಿದ್ದಾರೆಂಬ ಆರೋಪದ ಮೇಲೆ ಬಂಧಿಸಲಾಯಿತು. ಫೆಬ್ರುವರಿ ತಿಂಗಳಲ್ಲಿ ಲೀ ವೆನ್​ಲಿಯಾಂಗ್ ಇದೇ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರನ್ನ ಸರಕಾರ ಉದ್ದೇಶಪೂರ್ವಕವಾಗಿಯೇ ಕೊಲೆಗೈದಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ಕಾಬೂಲ್​ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 4 ಜನ ಸಾವುಚೀನಾದ ಕಮ್ಯೂನಿಸ್ಟ್ ಸರ್ಕಾರ ಬಹಳಷ್ಟು ವಿಚಾರಗಳನ್ನ ಗೌಪ್ಯವಾಗಿಟ್ಟುಕೊಳ್ಳುತ್ತದೆ. ಸತ್ಯ ಹೇಳುವ (ವಿಶಲ್ ಬ್ಲೋಯರ್ಸ್) ಮತ್ತು ಸ್ವತಂತ್ರ ಪತ್ರಕರ್ತರನ್ನ ಶಿಕ್ಷೆಗೊಳಪಡಿಸುತ್ತದೆ ಎಂಬ ಆರೋಪ ಕೇಳಿಬರುತ್ತದೆ. ಕೊರೋನಾ ವೈರಸ್ ವಿಚಾರದಲ್ಲೂ ಅಮೆರಿಕ ಇದೇ ಆರೋಪ ಮಾಡುತ್ತಾ ಬಂದಿದೆ. ಈ ಪಿಡುಗಿನ ಬಗ್ಗೆ ಆರಂಭದಲ್ಲೇ ಚೀನಾ ಮಾಹಿತಿ ನೀಡಲಿಲ್ಲ. ಇದು ಬಹಳ ದೊಡ್ಡ ಪ್ರಮಾದ. ಇಡೀ ವಿಶ್ವವೇ ಈಗ ವೈರಾಣು ಸೋಂಕಿನಿಂದ ನಲುಗಿಹೋಗುವಂತಾಗಿದೆ ಎಂದು ಡೊನಾಲ್ಡ್ ಟ್ರಂಪ್ ಕುಟುಕುತ್ತಲೇ ಇರುತ್ತಾರೆ. ಈ ಆಕ್ರೋಶಕ್ಕೆ ಲೀ ವೆನ್​ಲಿಯಾಂಗ್ ಹೊಸ ಪ್ರತಿರೂಪವಾಗಿದ್ಧಾರೆ.
First published: