ಸಮಸ್ಯೆ ಸರಿಪಡಿಸದೆ ಇದ್ದರೆ ಯಡಿಯೂರಪ್ಪ ಯಾಕೆ ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು; ಸಿದ್ದರಾಮಯ್ಯ ಆಕ್ರೋಶ

ಮೊದಲ ಅಲೆ 60 ವರ್ಷ ಮೇಲ್ಪಟ್ಟವರಿಗೆ ಬಾಧಿಸಿತ್ತು. ಇದು ಯುವಜನರನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಇವರು ಸಿದ್ಧತೆ ಮಾಡಿಕೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಇವರು ಯಾವ ಸಿದ್ಧತೆಗಳನ್ನೂ ಮಾಡಿಕೊಳ್ಳಲಿಲ್ಲ. ಆಕ್ಸಿಜನ್ ರೆಡಿ ಇಟ್ಟುಕೊಳ್ಳಲಿಲ್ಲ. ಹಾಸಿಗೆ, ರೆಮಿಡಿಸಿವಿರ್ ಔಷಧಿ ಇಟ್ಟುಕೊಳ್ಳಲಿಲ್ಲ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನುವಂತೆ ಈಗ ಹೊರಟಿದ್ದಾರೆ ಎಂದು ಕೇಂದ್ರ, ರಾಜ್ಯದ ವಿರುದ್ಧ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು: ಇಂದು ನಾವು ಕಾಂಗ್ರೆಸ್ ಪಕ್ಷದ ಕಡೆಯಿಂದ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೋವಿಡ್ ತಡೆಗಟ್ಟುವ ಜವಾಬ್ದಾರಿ ಸರ್ಕಾರ ಮೇಲಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಈ ಕೋವಿಡ್ ಅನ್ನು ತಡೆದಿವೆ. ಕೋವಿಡ್ ಎರಡನೇ‌ ಅಲೆ ಬರುವ ಬಗ್ಗೆ ತಜ್ಞರು ಮೊದಲೇ ಹೇಳಿದ್ದರು. ಆದರು ಸರ್ಕಾರ ಅದನ್ನು ನಿರ್ಲಕ್ಷಿಸಿದೆ. ಈಗ ಎರಡನೇ ಅಲೆ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಕೋವಿಡ್ ನಿರ್ವಹಣೆಗೆ ಬೇಕಾಗಿದ್ದ ಉಪಕರಣಗಳನ್ನು ಸರ್ಕಾರದ ರೆಡಿ ಮಾಡಿಕೊಳ್ಳಬೇಕಿತ್ತು. ಆದರೆ ಯಾವುದೇ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಂಡಿರಲಿಲ್ಲ. ಮುಖ್ಯವಾಗಿ ಬೆಡ್, ಆಕ್ಸಿಜನ್, ಐಸಿಯು ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಸರ್ಕಾರದ ಇದ್ಯಾವುದನ್ನು ಮಾಡಿಕೊಳ್ಳಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. 

  ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಇಂದು ಕಾಂಗ್ರೆಸ್ ದಿಢೀರ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ವ್ಯಾಕ್ಸಿನ್ ಇಲ್ಲದೇ ಇದ್ದರೂ  ಏಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುತ್ತೇವೆ ಎಂದು ಹೇಳಿದರು. ಸಿಎಂ ಯಡಿಯೂರಪ್ಪ ವ್ಯಾಕ್ಸಿನ್ ಕೊಡುತ್ತೇವೆ ಅಂತ ಉದ್ಘಾಟನೆ ಮಾಡ್ತಾರೆ. ಆದರೆ ಆರೋಗ್ಯ ಮಂತ್ರಿ ವ್ಯಾಕ್ಸಿನ್ ಇಲ್ಲ. ಇನ್ನು ಬರಬೇಕು ಅಂತ ಹೇಳ್ತಾರೆ ಎಂದು ಸರ್ಕಾರದ ದ್ವಂದ್ವ ಹೇಳಿಕೆಗಳ ಬಗ್ಗೆ ಕಿಡಿಕಾರಿದರು.

  ಇದನ್ನು ಓದಿ: Congress Protest: ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರಿಂದ ದಿಢೀರ್ ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ

  ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ನಾಯಕರು, ಸಂಸದರು, ಶಾಸಕರು ಧರಣಿ ನಡೆಸಿದ್ದೇವೆ. ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ. ಬೇರೆ ದೇಶಗಳು ಸಮರ್ಥವಾಗಿ ತಡೆಗಟ್ಟುತ್ತಿವೆ. ಮೊದಲ ಅಲೆ ನವೆಂಬರ್, ಡಿಸೆಂಬರ್ ನಲ್ಲಿ ಬಂತು. ಎರಡನೇ ಅಲೆ ಈಗ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ತಜ್ಞರ ಸಲಹೆಗಳನ್ನು ಉದಾಸೀನ ಮಾಡಿತು. ಅದರ ಪರಿಣಾಮ ಇಂತಹ ಕೆಟ್ಟ ಪರಿಸ್ಥಿತಿ ಬಂತು.  ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಮೊದಲ ಅಲೆ 60 ವರ್ಷ ಮೇಲ್ಪಟ್ಟವರಿಗೆ ಬಾಧಿಸಿತ್ತು. ಇದು ಯುವಜನರನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಇವರು ಸಿದ್ಧತೆ ಮಾಡಿಕೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಇವರು ಯಾವ ಸಿದ್ಧತೆಗಳನ್ನೂ ಮಾಡಿಕೊಳ್ಳಲಿಲ್ಲ. ಆಕ್ಸಿಜನ್ ರೆಡಿ ಇಟ್ಟುಕೊಳ್ಳಲಿಲ್ಲ. ಹಾಸಿಗೆ, ರೆಮಿಡಿಸಿವಿರ್ ಔಷಧಿ ಇಟ್ಟುಕೊಳ್ಳಲಿಲ್ಲ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನುವಂತೆ ಈಗ ಹೊರಟಿದ್ದಾರೆ ಎಂದು ಕೇಂದ್ರ, ರಾಜ್ಯದ ವಿರುದ್ಧ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.

  ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 28 ಜನ ಸಾವನ್ನಪ್ಪಿದ್ದರು. ಇದನ್ನು ಅಲ್ಲಿನ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಬೇರೆ ಬೇರೆ ಕಡೆಗಳಲ್ಲೂ ಇದೇ ರೀತಿಯಾಗಿದೆ. ಈಗ ಲಾಕ್ ಡೌನ್ ಮಾಡಿದ್ದಾರೆ. ಅದು ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡಿಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರಿಗೆ ಯಾವ ಪರಿಹಾರವನ್ನು ಕೊಟ್ಟಿಲ್ಲ. ನಾನು ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದು ಒತ್ತಾಯಿಸಿದ್ದೇವೆ. ಆದರೂ ಸರ್ಕಾರ ವಿಶೇಷ ಪ್ಯಾಕೇಜ್ ಕೊಟ್ಟಿಲ್ಲ. ಯಡಿಯೂರಪ್ಪ ಯಾಕೆ ಸಿಎಂ ಆಗಿರಬೇಕು. ಸಚಿವರು ಯಾಕೆ ಮುಂದುವರಿಯಬೇಕು. ಸಮಸ್ಯೆ ಸರಿಮಾಡಲು ಆಗದೆ ಇದ್ದರೆ ಇವರು ಯಾಕೆ ಇರಬೇಕು.  ಹೆಲ್ತ್ ಮಿನಿಸ್ಟರ್ ರೆಕ್ಕೆಪುಕ್ಕ ಕತ್ತರಿಸಿದ್ದಾರೆ. ಜನರಿಗೆ ಔಷಧ ಕೊಡದೆ ಕೊಲೆ ಮಾಡಿದ್ದಾರೆ. ಅದಕ್ಕೆ ಇಂದು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. 144 ಸೆಕ್ಷನ್ ಇರೋದ್ರಿಂದ ಸಣ್ಣದಾಗಿ ಪ್ರತಿಭಟನೆ ಮಾಡಿದ್ದೇವೆ. ಇವರು ಅಧಿಕಾರದಲ್ಲಿ ಉಳಿಯಲು ನೈತಿಕತೆ ಇಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಂಯ್ಯ ಅವರು ವಾಗ್ದಾಳಿ ನಡೆಸಿದರು.
  Published by:HR Ramesh
  First published: