ರಷ್ಯಾದ Sputnik V ಲಸಿಕೆ ಭಾರತದಲ್ಲಿ ಇನ್ನೂ ಯಾಕೆ ಸರಿಯಾಗಿ ಸಿಗುತ್ತಿಲ್ಲ? ಇಲ್ಲಿದೆ ಕಾರಣ

Sputnik V problems in India- ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲೇ ಅನುಮೋದನೆ ಸಿಕ್ಕರೂ ದೇಶಾದ್ಯಂತ ಕೆಲವೇ ಲಕ್ಷದಷ್ಟು ಅದರ ಡೋಸ್​ಗಳು ಬಳಕೆ ಆಗಿವೆ. ಇಷ್ಟು ಕಡಿಮೆ ವ್ಯಾಕ್ಸಿನ್ ವಿತರಣೆ ಕಾರಣ ಏನು?

ಸ್ಪುಟ್ನಿಕ್​​ ಲೈಟ್​ ಲಸಿಕೆ.

ಸ್ಪುಟ್ನಿಕ್​​ ಲೈಟ್​ ಲಸಿಕೆ.

 • News18
 • Last Updated :
 • Share this:
  ನವದೆಹಲಿ, ನ. 21: ಭಾರತದಲ್ಲಿ ಕೋವಿಡ್ ಲಸಿಕೆ ಅಭಿಯಾನ (Vaccine Campaign) ಒಳ್ಳೆಯ ವೇಗದಲ್ಲಿ ನಡೆಯುತ್ತಿದೆ. ಕೋವಿಶೀಲ್ಡ್​ನಿಂದ (Covishield) ಮೊದಲುಗೊಂಡ ಲಸಿಕೆ ಅಭಿಯಾನದಲ್ಲಿ ಕೋವ್ಯಾಕ್ಸಿನ್ (Covaxin), ಸ್ಪುಟ್ನಿಕ್ ವಿ (Sputnik V) ಲಸಿಕೆಗಳೂ ಸೇರಿಕೊಂಡಿವೆ. ಆದರೆ, ಸದ್ಯ ನಮಗೆ ಭಾರತದಾದ್ಯಂತ ಬಹುತೇಕ ಕಾಣಸಿಗುವುದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಮಾತ್ರವೇ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನ ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ. ಆರು ತಿಂಗಳ ಹಿಂದೆಯೇ ರಷ್ಯಾದ ಈ ವ್ಯಾಕ್ಸಿನ್​ಗೆ ಭಾರತದ ಪ್ರಾಧಿಕಾರ ಅನುಮೋದನೆ ಕೊಟ್ಟಿದೆ. ಆದರೂ ಕೂಡ ಸ್ಪುಟ್ನಿಕ್ ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತದೆ.

  ಲೆಕ್ಕದ ಪ್ರಕಾರ, ಭಾರತದಲ್ಲಿ ಇದೂವರೆಗೆ 116 ಕೋಟಿ ಡೋಸ್ ಲಸಿಕೆಗಳನ್ನ ಜನರಿಗೆ ಹಾಕಲಾಗಿದೆ. ಇದರಲ್ಲಿ ಸ್ಪುಟ್ನಿಕ್ ವಿ ಲಸಿಕೆಗಳ ಸಂಖ್ಯೆ 11.13 ಲಕ್ಷ. ಅಂದರೆ ಒಟ್ಟಾರೆ ಲಸಿಕೆಯಲ್ಲಿ ಸ್ಪುಟ್ನಿಕ್ ಬಳಕೆಯಾಗಿರುವುದು ಶೇ. 0.1 ಮಾತ್ರ. ಏಪ್ರಿಲ್ ಎರಡನೆ ವಾರದಲ್ಲೇ ರಷ್ಯನ್ ಲಸಿಕೆಗೆ ಭಾರತದಲ್ಲಿ ಅನುಮೋದನೆ ಸಿಕ್ಕಿತ್ತು. ಅದಾಗಿ ಎರಡು ವಾರದಲ್ಲಿ, ಅಂದರೆ ಮೇ 1ರಂದು ಸ್ಪುಟ್ನಿಕ್ ವಿ ಲಸಿಕೆ ಬಿಡುಗಡೆ ಆಯಿತು. ಮಾಸ್ಕೋದ ಗಮಲೆಯಾ ನ್ಯಾಷನಲ್ ರೀಸರ್ಚ್ ಸಂಸ್ಥೆ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ಸೀರಂ ಸಂಸ್ಥೆಗಳು ಉತ್ಪಾದನೆ ಮಾಡುತ್ತಿವೆ. ಆದರೂ ಕೂಡ ಇಷ್ಟು ರಷ್ಯಾದ ಈ ಲಸಿಕೆ ಇಷ್ಟು ಕಡಿಮೆ ಸಂಖ್ಯೆಯಲ್ಲಿ ಸೇಲ್ ಆಗಿರುವುದು ಯಾಕೆ?

  ಸ್ಪುಟ್ನಿಕ್ ವಿ ಲಸಿಕೆ ಹಿಂದುಳಿಯಲು ಕಾರಣಗಳಿವು:

  1) ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಡೋಸ್​ನ ಉತ್ಪಾದನೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.

  2) ಲಸಿಕೆ ಸಂಗ್ರಹಿಸಲು ಕಡು ಶೈತ್ಯಾಗಾರದ (Cold Storage) ಅಗತ್ಯತೆ ಇದೆ.

  3) ವಿಶ್ವ ಆರೋಗ್ಯ ಸಂಸ್ಥೆಯಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ.

  4) ಭಾರತದಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ಲಸಿಕೆಗಳಿಗೆ ಬೇಡಿಕೆ ಇಲ್ಲದಿರುವುದು.

  ಇದನ್ನೂ ಓದಿ: COVID-19 Variant: 2022ರಲ್ಲಿ ಮತ್ತೆ ಜಗತ್ತನ್ನು ಬಾಧಿಸಲಿದೆ COVID-19 ರೂಪಾಂತರ, ಹೇಗೆ ಅಂತೀರಾ? ಇಲ್ಲಿದೆ ವಿವರ

  ಇವಿಷ್ಟು ಮೇಲ್ನೋಟಕ್ಕೆ ಸ್ಪುಟ್ನಿಕ್ ವಿ ಲಸಿಕೆಯ ಕಡಿಮೆ ಸಂಖ್ಯೆಗೆ ಕಾರಣ ಎಂದು ಭಾವಿಸಲಾಗಿದೆ. ರಷ್ಯಾದಲ್ಲಿ ಅಭಿವೃದ್ಧಿಯಾದ ಲಸಿಕೆಯನ್ನ ಭಾರತದ ಕಂಪನಿಗಳು ತಯಾರಿಸುತ್ತವೆ. ಆದರೆ, ಲಸಿಕೆಯ ಕಚ್ಛಾ ಭಾಗಗಳು ರಷ್ಯಾದ ಲ್ಯಾಬ್​ನಿಂದಲೇ ಬರಬೇಕು. ಮೇ ಒಂದರಂದೇ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಬಿಡುಗಡೆ ಅಗಿದ್ದರೂ ಸೆಪ್ಟೆಂಬರ್​ವರೆಗೂ ರಷ್ಯಾ ದೇಶದಿಂದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ಗೆ ಸಿಕ್ಕ ಕಚ್ಛಾ ಲಸಿಕೆ 31 ಲಕ್ಷ. ಆದರೆ ಕಚ್ಛಾ ಲಸಿಕೆಯ ಸೆಕೆಂಡ್ ಡೋಸ್ ಕಾಂಪೊನೆಂಟ್ ಬಂದಿದ್ದು ಕೇವಲ 4.5 ಲಕ್ಷ ಮಾತ್ರವಂತೆ. ಎರಡೂ ಡೋಸ್​ಗಳ ಪ್ರಮಾಣದಲ್ಲಿ ಇರುವ ಭಾರೀ ವ್ಯತ್ಯಾಸದಿಂದಾಗಿ ಭಾರತದಲ್ಲಿ ಇದರ ಹಂಚಿಕೆ ಸ್ಥಗಿತಗೊಂಡಿತು ಎಂದು ಹೇಳಲಾಗುತ್ತಿದೆ.

  ಸ್ಟುಟ್ನಿಕ್ ವಿ ಲಸಿಕೆಯ ಎರಡನೇ ಡೋಸ್ ಅನ್ನು ತಯಾರಿಸುವುದು ತುಸು ಸಂಕೀರ್ಣ ಎಂದು ಹೇಳಲಾಗುತ್ತಿದೆ. ಆದರೆ, ಡಾ. ರೆಡ್ಡೀಸ್ ಲ್ಯಾಬ್​ನಿಂದ ಬಂದಿರುವ ಮಾಹಿತಿ ಪ್ರಕಾರ, ಖಾಸಗಿ ಮಾರುಕಟ್ಟೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಎಕೆ ಕಡಿಮೆ ಇದೆ. ಹೀಗಾಗಿ, ಇದರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗಿಲ್ಲವೆನ್ನಲಾಗಿದೆ.

  ಇದನ್ನೂ ಓದಿ: Pulwama Attackನಲ್ಲಿ ಬಳಸಿದ ಸ್ಫೋಟಕಗಳ ತಯಾರಿಕೆಗೆ Amazon ಮೂಲಕ ಕೆಮಿಕಲ್​​ಗಳ ಖರೀದಿ!

  ಕೋಲ್ಡ್ ಸ್ಟೋರೇಜ್ ಸಮಸ್ಯೆ:

  ಸ್ಪುಟ್ನಿಕ್ ವಿ ಲಸಿಕೆಯನ್ನ ಫ್ರೀಜಿಂಗ್ ಟೆಂಪರೇಚರ್​ನಲ್ಲಿ ಶೇಖರಿಸಿಡುವುದು ಅಗತ್ಯ ಇದೆ. ಮೈನಸ್ 18 ಡಿಗ್ರಿ ಸೆಲ್ಷಿಯಸ್ ಶೀತದಲ್ಲಿ ರಷ್ಯನ್ ಲಸಿಕೆಯನ್ನ ಸಂಗ್ರಹಿಸಬೇಕಾಗುತ್ತದೆ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್​ಗೆ ಹೋಲಿಸಿದರೆ ಸ್ಟುಟ್ನಿಕ್ ವಿ ಮುಳುವಾಗಿರುವ ಅಂಶದಲ್ಲಿ ಇದೂ ಒಂದು. ಹಾಗೆಯೇ, ಕೋಲ್ಡ್ ಸ್ಟೋರೇಜ್​ನಿಂದ ಸ್ಪುಟ್ನಿಕ್ ಲಸಿಕೆಯನ್ನ ಹೊರತೆಗೆದ ಕೂಡಲೇ ಬಳಕೆ ಮಾಡಲು ಬರುವುದಿಲ್ಲ. ಅದು ವಾತಾವರಣದ ಉಷ್ಣಾಂಶಕ್ಕೆ ಬರುವವರೆಗೂ ಕಾಯಬೇಕಾಗುತ್ತದೆ. ಜೊತೆಗೆ, ಕೋಲ್ಡ್ ಸ್ಟೋರೇಜ್​ನಿಂದ ಹೊರತೆಗೆದ 30 ನಿಮಿಷದವರೆಗೆ ಮಾತ್ರ ಅದರ ಅವಧಿ ಇರುವುದು. ಅಷ್ಟರೊಳಗೆ ಅದರ ಬಳಕೆ ಆಗಬೇಕು.

  ಈ ಮೇಲಿನ ಅಂಶವು ಖಾಸಗಿ ಮಾರುಕಟ್ಟೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಕೆ ಇಲ್ಲದಿರಲು ಕಾರಣ ಆಗಿದ್ದಿರಬಹುದು.
  Published by:Vijayasarthy SN
  First published: