HOME » NEWS » Coronavirus-latest-news » WHY ONLY 7 5 LAKH VACCINES WHEN WE HAVE 50000 CASES SAYS MAHARASHTRA HEALTH MINISTER RAJESH RHHSN

50 ಸಾವಿರ ಸಕ್ರಿಯ ಪ್ರಕರಣಗಳಿರುವಾಗ 7.5 ಲಕ್ಷ ಲಸಿಕೆ ಹಂಚಿಕೆ ನ್ಯಾಯವೇ: ಕೇಂದ್ರದ ವಿರುದ್ಧ ಮಹಾರಾಷ್ಟ್ರ ವಾಗ್ದಾಳಿ

ಕೇಂದ್ರವು ಕೋವಿಡ್ -19 ಲಸಿಕೆ ಪ್ರಮಾಣವನ್ನು 7 ಲಕ್ಷದಿಂದ 17 ಲಕ್ಷಕ್ಕೆ ಹೆಚ್ಚಿಸಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಆದರೆ ಇದು ಕೂಡ ಕಡಿಮೆ. ಏಕೆಂದರೆ ನಮಗೆ ವಾರಕ್ಕೆ 40 ಲಕ್ಷ ಲಸಿಕೆ ಪ್ರಮಾಣಗಳು ಬೇಕು. 17 ಲಕ್ಷ ಪ್ರಮಾಣ ಸಾಕಾಗುವುದಿಲ್ಲ, ಎಂದು ಅವರು ಹೇಳಿದರು.

news18-kannada
Updated:April 8, 2021, 3:55 PM IST
50 ಸಾವಿರ ಸಕ್ರಿಯ ಪ್ರಕರಣಗಳಿರುವಾಗ 7.5 ಲಕ್ಷ ಲಸಿಕೆ ಹಂಚಿಕೆ ನ್ಯಾಯವೇ: ಕೇಂದ್ರದ ವಿರುದ್ಧ ಮಹಾರಾಷ್ಟ್ರ ವಾಗ್ದಾಳಿ
ಕೋವಿಡ್ ಲಸಿಕೆ
  • Share this:
ಮುಂಬೈ: ಕೊರೋನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಗಳ ಮುಂದುವರೆದಿದೆ. ಈ ವಿಷಯವಾಗಿ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಅವರು ರಾಜ್ಯಕ್ಕೆ ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದಲ್ಲಿ ಕೊರೋನಾ ಲಸಿಕೆ ಹಂಚಿಕೆ ಮಾಡಿದೆ ಎಂದು ಗುರುವಾರ ಆರೋಪಿಸಿದ್ದಾರೆ. ದೇಶದಲ್ಲಿ ಅತಿಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಕ್ಕೆ ಕಡಿಮೆ ಪ್ರಮಾಣದಲ್ಲಿ ಕೊರೋನಾ ಲಸಿಕೆ ನೀಡುವ ಮೂಲಕ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಹಾರಾಷ್ಟ್ರದಲ್ಲಿ 50,000 ಸಕ್ರಿಯ ಪ್ರಕರಣಗಳಿವೆ. ಆದರೆ, ನಮ್ಮ ರಾಜ್ಯಕ್ಕೆ ಕೇವಲ 7.5 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್​ ರಾಜ್ಯಗಳಿಗಿಂತ ಕಡಿಮೆ ಪ್ರಮಾಣದ ಡೋಸ್​ಗಳನ್ನು ನಮಗೆ ಹಂಚಿಕೆ ಮಾಡಿ ತಾರತಮ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಿಂದ ಹೊಸದಾಗಿ ಹಂಚಿಕೆ ಮಾಡಲಾದ ಲಸಿಕೆ ಆದೇಶದ ಪ್ರಕಾರ, ಮಹಾರಾಷ್ಟ್ರಕ್ಕೆ ಕೇವಲ 7.5 ಲಕ್ಷ ಲಸಿಕೆ ಡೋಸೆಜ್ ನೀಡಲಾಗಿದೆ. ಹಾಗೆಯೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಹರಿಯಾಣ ಇತರೆ ರಾಜ್ಯಗಳಿಗೂ ಡೋಸೆಜ್ ಹಂಚಿಕೆ ಮಾಡಲಾಗಿದೆ. ಆದರೆ, ಆ ರಾಜ್ಯಗಳಿಗಿಂತ ಮಹಾರಾಷ್ಟ್ರಕ್ಕೆ ಕಡಿಮೆ ಡೋಸೆಜ್ ನೀಡಲಾಗಿದೆ. ಇದನ್ನು ನೋಡಿದ ತಕ್ಷಣ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ ಅವರೊಂದಿಗೆ ಮಾತನಾಡಿದೆ. ಶರದ್ ಪವಾರ್ ಅವರು ಸಹ ಹರ್ಷವರ್ದನ್ ಅವರೊಂದಿಗೆ ಮಾತನಾಡಿದ್ದಾರೆ. ನಮಗೆ ಮಾಡಿದ ತಾರತಮ್ಯದ ವಿಷಯವನ್ನು ಪ್ರಸ್ತಾಪಿಸಿದ್ದೇನೆ.  ನಮ್ಮ ಅತಿಹೆಚ್ಚಿನ ಸಕ್ರಿಯ ಪ್ರಕರಣಗಳಿವೆ. 12 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ಪಾಸಿಟಿವ್ ರೇಟ್ ಹೆಚ್ಚಿದೆ. ಆದರು ನಮಗೆ ಕಡಿಮೆ ಲಸಿಕೆ ನೋಡಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರವು ಶೇಕಡಾ 70 ರಷ್ಟು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮತ್ತು 30 ಪ್ರತಿಶತ ಆಂಟಿಜೆನ್ ಪರೀಕ್ಷೆಗಳನ್ನು ನಡೆಸುತ್ತಿದ್ದರೆ, ಯುಪಿಯಲ್ಲಿ ಇದು ತದ್ವಿರುದ್ಧವಾಗಿದೆ ಎಂದು ಅವರು ಹೇಳಿದರು, ರಾಜ್ಯದಲ್ಲಿ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು.


ಇದನ್ನು ಓದಿ: ಕೋವಿಶೀಲ್ಡ್ ಲಸಿಕೆ ಪೂರೈಕೆಯಲ್ಲಿ ವಿಳಂಬ – ಸೀರಂ ಇನ್ಸ್​ಟಿಟ್ಯೂಟ್​ಗೆ AstraZeneca ನೋಟೀಸ್

ಕಡಿಮೆ ಪ್ರಮಾಣದ ಲಸಿಕೆ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಾಣಿಜ್ಯ ರಾಜಧಾನಿಗೆ ಪ್ರತಿವಾರ ಕನಿಷ್ಠ 40 ಲಕ್ಷ ಲಸಿಕೆ ಡೋಸ್​ಗಳ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡುತ್ತಿದೆ. ಆದರೆ, ಇದು ಸಹಾಯ ಮಾಡುವ ದಾರಿಯಲ್ಲ. ಗುಜರಾತ್ ರಾಜ್ಯ ಮಹಾರಾಷ್ಟ್ರದ ಅರ್ಧದಷ್ಟು ಜನಸಂಖ್ಯೆ ಇದೆ. ಆದರು ಆ ರಾಜ್ಯಕ್ಕೆ ಈವರೆಗೂ 1 ಕೋಟಿ ಲಸಿಕೆ ನೀಡಲಾಗಿದೆ. ಮತ್ತು ನಾವು ಈವರೆಗೂ ಕೇವಲ 1.04 ಲಕ್ಷ ಲಸಿಕೆ ಡೋಸೆಜ್ ಪಡೆದುಕೊಂಡಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

"ಕೇಂದ್ರವು ಕೋವಿಡ್ -19 ಲಸಿಕೆ ಪ್ರಮಾಣವನ್ನು 7 ಲಕ್ಷದಿಂದ 17 ಲಕ್ಷಕ್ಕೆ ಹೆಚ್ಚಿಸಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಆದರೆ ಇದು ಕೂಡ ಕಡಿಮೆ. ಏಕೆಂದರೆ ನಮಗೆ ವಾರಕ್ಕೆ 40 ಲಕ್ಷ ಲಸಿಕೆ ಪ್ರಮಾಣಗಳು ಬೇಕು. 17 ಲಕ್ಷ ಪ್ರಮಾಣ ಸಾಕಾಗುವುದಿಲ್ಲ," ಎಂದು ಅವರು ಹೇಳಿದರು.
Published by: HR Ramesh
First published: April 8, 2021, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories