Priyanka Gandhi: ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಲಸಿಕೆ ತಯಾರಿಸುವ ಭಾರತದಲ್ಲೇ ಕೊರತೆ ಏಕೆ?ಪ್ರಿಯಾಂಕಾ ಗಾಂಧಿ ಪ್ರಶ್ನೆ

ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳ ತಯಾರಕರಲ್ಲಿ ಒಂದಾದ ಭಾರತ ಇಂದು ಏಕೆ ಲಸಿಕೆಗಳ ಕೊರತೆಯನ್ನು ಎದುರಿಸುತ್ತಿದೆ? ಇದಕ್ಕೆ ಭಾರತ ಸರ್ಕಾರವು ದೇಶದ ಜನರಿಗೆ ಉತ್ತರಿಸಬೇಕಿದೆ ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಗಾಂಧಿ.

ಪ್ರಿಯಾಂಕಾ ಗಾಂಧಿ.

 • Share this:
  ನವ ದೆಹಲಿ (ಮೇ 27); ಭಾರತದಲ್ಲಿ ಕೊರೋನಾ ಸೋಂಕು ಲಾಕ್​ಡೌನ್ ನಡುವೆಯೂ ಈ ವರೆಗೆ ನಿಯಂತ್ರಣಕ್ಕೆ ಬಂದಿಲ್ಲ. ಕೊರೋನಾವನ್ನು ಸೋಲಿಸಲು ಲಸಿಕೆ ನೀಡುವುದೊಂದೆ ದಾರಿ ಎಂದು ಎಲ್ಲಾ ತಜ್ಞರು ಹಾಗೂ ವಿರೋಧ ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿ ಸುತ್ತಿದ್ದಾರೆ. ಆದರೆ, ಕೋವಿಡ್​ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೂ ಸಹ ಈ ವರೆಗೆ ದೇಶದಲ್ಲಿರುವ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಕಾರಣ ಭಾರತ ಲಸಿಕೆಯ ಕೊರತೆಯನ್ನು ಅನುಭವಿಸುತ್ತಿದೆ. ಇದನ್ನು ಖಂಡಿಸಿರುವ ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ವಿಶ್ವದಲ್ಲೇ ಅತಿಹೆಚ್ಚು ಲಸಿಕೆಗಳನ್ನು ತಯಾರಿಸುವ ದೇಶಗಳಲ್ಲಿ ಒಂದಾದ ಭಾರತ ಇಂದು ಲಸಿಕೆ ಕೊರತೆ ಅನುಭವಿಸುತ್ತಿರುವುದು ಏಕೆ?ಕೊರೋನಾ ಲಸಿಕೆ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸೋತಿದೆ. ಇದಕ್ಕೆ ಅವರು ಜನರ ಬಳಿ ಉತ್ತರ ನೀಡಲೇಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  "ಕೇಂದ್ರ ಸರ್ಕಾರವು ಭಾರತೀಯರಿಗೆ ಉತ್ತರಿಸಬೇಕಿದೆ" ಎಂಬ ಶೀರ್ಷಿಕೆಯ ವೀಡಿಯೊ ಒಂದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, " ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳ ತಯಾರಕರಲ್ಲಿ ಒಂದಾದ ಭಾರತ ಇಂದು ಏಕೆ ಲಸಿಕೆಗಳ ಕೊರತೆಯನ್ನು ಎದುರಿಸುತ್ತಿದೆ? 2020 ರ ಬೇಸಿಗೆಯ ಸಮಯದಲ್ಲಿ ಇತರ ದೇಶಗಳು ಲಸಿಕೆಗಾಗಿ ತಮ್ಮ ಆದೇಶಗಳನ್ನು ನೀಡಲು ಪ್ರಾರಂಭಿಸಿದಾಗ, ಭಾರತ ಸರ್ಕಾರವು ತನಗೆ ಲಸಿಕೆ ಬೇಕೆಂದು ಮೊದಲ ಆದೇಶವನ್ನು 2021 ರ ಜನವರಿಯಲ್ಲಿ ನೀಡಿದ್ದು ಯಾಕೆ?" ಎಂದು ಪ್ರಶ್ನಿಸಿದ್ದಾರೆ.

  "ಭಾರತದದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಸಮಯದಲ್ಲೇ ಕೇಂದ್ರ ಸರ್ಕಾರ 2021 ರ ಜನವರಿ ಮತ್ತು ಮಾರ್ಚ್ ನಡುವೆ ಆರು ಕೋಟಿ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಆದರೆ, ಈ ಸಮಯದಲ್ಲಿ, ಭಾರತೀಯರಿಗೆ ಕೇವಲ 3.5 ಕೋಟಿ ಲಸಿಕೆಯನ್ನು ಮಾತ್ರ ನೀಡಿದೆ. ಇದಕ್ಕೆ ಭಾರತ ಸರ್ಕಾರವು ದೇಶದ ಜನರಿಗೆ ಉತ್ತರಿಸಬೇಕಿದೆ. ನಾವು ಅವರಿಗೆ ಪ್ರಶ್ನೆಗಳನ್ನು ಕೇಳಬೇಕಾಗಿದ್ದು, ಅದಕ್ಕೆ ಅವರು ಉತ್ತರಿಸಲೇಬೇಕಾದ ಕರ್ತವ್ಯ ಕೇಂದ್ರದ ಮುಂದಿದೆ" ಎಂದು ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: ಪ್ರಾಚೀನ ಕಾಲದ 1.ರೂ ನಾಣ್ಯ ನಿಮ್ಮಲ್ಲಿ ಇದೆಯೇ?; ಹಾಗಾದರೆ ನೀವು ಗಳಿಸಬಹುದು 1.5 ಲಕ್ಷ ರೂ; ಹೇಗೆ ಗೊತ್ತಾ?

  ಪ್ರಿಯಾಂಕ ಗಾಂಧಿ ಈ ಹಿಂದೆ ಕೂಡಾ ದೇಶದಲ್ಲಿ ಕೊರೋನಾ ಲಸಿಕೆಗಳ ಕೊರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿದ್ದರು. ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಲಸಿಕೆ ಕೊರತೆಯಾಗಿರುವುದಕ್ಕೆ ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಪಂಜಾಬ್, ಕೇರಳ, ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಕೊರೋನಾ ಲಸಿಕೆಗಳಿಗಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯುವ ಹಾದಿಯಲ್ಲಿದೆ.

  ಇದನ್ನೂ ಓದಿ: ದಾಂಪತ್ಯದ ರಸಘಳಿಗೆಗೆ ಮತ್ತಷ್ಟು ಜೀವ ತುಂಬುತ್ತದೆ ಕೊಹಿನೂರ್ ಪಾನ್.. ಆದರೆ ಒಂದು ಕಂಡೀಷನ್!

  ಲಸಿಕೆ ತಯಾರಕ ಸಂಸ್ಥೆಯಾದ ಮೊಡೆರ್ನಾ ನೇರವಾಗಿ ಲಸಿಕೆಗಳನ್ನು ಪಂಜಾಬ್ ಸರ್ಕಾರಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಳೆದ ವಾರ ಮಾಹಿತಿ ನೀಡಿದ್ದರು. ದೆಹಲಿಗೆ ಕೂಡಾ ಫಿಜರ್ ಮತ್ತು ಮಾಡರ್ನಾ ಸಂಸ್ಥೆಗಳು ಅದೇ ಪ್ರತಿಕ್ರಿಯೆ ನೀಡಿದೆ.

  ದೆಹಲಿಗೆ ಲಸಿಕೆಗಳನ್ನು ಪೂರೈಸಲು ಸ್ಪುಟ್ನಿಕ್ ವಿ ತಯಾರಕರು ಒಪ್ಪಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಮಾಹಿತಿ ನೀಡಿದ್ದಾರೆ. ಕೇಂದ್ರ ಮಟ್ಟದಲ್ಲಿ ಟೆಂಡರ್ ಕರೆಯುವಂತೆ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: