ಕೊರೋನಾ ಸೋಂಕಿನಂಥ ಆಪತ್ಕಾಲದಲ್ಲೂ ಪ್ರಾದೇಶಿಕ ಭಾಷೆ ಬಗ್ಗೆ ಕೇಂದ್ರದ ತಿರಸ್ಕಾರ ಧೋರಣೆಗೆ ಎಲ್ಲೆಡೆ ಆಕ್ರೋಶ

ಮೆಕ್ಸಿಕೋ ದೇಶದಲ್ಲಿ ಕೊರೋನಾ ವೈರಸ್ ಬಗ್ಗೆ 35 ಭಾಷೆಗಳಲ್ಲಿ ಅಡ್ವೈಸರಿ ನೀಡಲಾಗುತ್ತಿದೆ. ಭಾರತದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಮಾಹಿತಿ ದೊರಕುತ್ತಿದೆ.

ಕೊರೋನಾ ಬಗ್ಗೆ ಕೇಂದ್ರ ಇಲಾಖೆಗಳ ಅಡ್ವೈಸರಿಗಳು

ಕೊರೋನಾ ಬಗ್ಗೆ ಕೇಂದ್ರ ಇಲಾಖೆಗಳ ಅಡ್ವೈಸರಿಗಳು

  • News18
  • Last Updated :
  • Share this:
ನವದೆಹಲಿ(ಮಾ. 17): ಪ್ರಾದೇಶಿಕ ಭಾಷೆಗಳ ಬಗ್ಗೆ ಕೇಂದ್ರ ಸರ್ಕಾರದ ಅಸಡ್ಡೆತನ ಗೊತ್ತಿರುವಂಥದ್ದೇ. ಸಂದರ್ಭ ಸಿಕ್ಕಾಗೆಲ್ಲಾ ಹಿಂದಿ ಹೇರಿಕೆಗೆ ಮುಂದಾಗುತ್ತದೆ. ಆದರೆ, ಅತೀ ಕೆಳ ಸ್ತರದ ವ್ಯಕ್ತಿಯನ್ನೂ ಬಾಧಿಸುವ ಕೊರೋನಾ ವೈರಸ್ ಬಗ್ಗೆ ಮಾಹಿತಿ ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ ತನ್ನ ಪ್ರಾದೇಶಿಕ ವಿರೋಧಿ ಮನೋಭಾವವನ್ನು ತೋರುತ್ತಿದೆ. ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವ ಅಡ್ವೈಸರಿ ಅಥವಾ ಸಲಹೆಗಳನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲೇ ನೀಡಲಾಗುತ್ತಿದೆ. ಎಲ್ಲಿಯೂ ಇತರ ಪ್ರಾದೇಶಿಕ ಭಾಷೆಗಳಲ್ಲಿ ಸಲಹೆ ನೀಡುವ ಮನಸು ಮಾಡಿಲ್ಲ.

ದೇಶದ ಬಹು ಸಂಖ್ಯೆಯ ಮಂದಿ ಹಿಂದಿ ಮತ್ತು ಇಂಗ್ಲೀಷೇತರ ಭಾಷಿಕರೇ ಆಗಿದ್ದಾರೆ. ಕೊರೋನಾ ವೈರಸ್ ಬಗ್ಗೆ ಅವರಿಗೆ ಜಾಗೃತಿ ಮೂಡಿಸಬೇಕಾದರೆ ಅವರ ಭಾಷೆಯಲ್ಲೇ ವಿವರ ನೀಡಬೇಕೆಂಬ ಸಾಮಾನ್ಯ ಜ್ಞಾನ ಮತ್ತು ವಿವೇಚನೆ ಸರ್ಕಾರಕ್ಕಿಲ್ಲ ಎಂದು ಅನೇಕರು ಕಿಡಿಕಾರಿದ್ಧಾರೆ.ಇದನ್ನೂ ಓದಿ: ಬ್ರಿಟಿಷರ ಆಡಳಿತವೇ ಚೆನ್ನಾಗಿತ್ತು ಎಂದ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್; ವಿಧಾನಪರಿಷತ್​ನಲ್ಲಿ ಬಿಸಿಬಿಸಿ ಚರ್ಚೆ

ಹಿಂದಿಯೇತರ ಭಾಷಿಕರು ಇರುವ ಪ್ರದೇಶಗಳಲ್ಲಿ ಜನರಿಗೆ ಮೊಬೈಲ್​ಗಳಲ್ಲಿ ಹಿಂದಿ ಭಾಷೆಯಲ್ಲಿ ಸಲಹೆಗಳಿರುವ ಮೆಸೇಜ್ ಕಳುಹಿಸಲಾಗುತ್ತಿದೆ. ಗಾರ್ಗ ಚಟರ್ಜಿ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಹಿಂದಿ ಹೇರಿಕೆ ಎಂದು ಆಪಾದಿಸಿದ್ಧಾರೆ. ಹಿಂದಿಯೇತರ ವ್ಯಕ್ತಿಗಳ ಪ್ರಾಣಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂಬಂತೆ ಕೇಂದ್ರದ ಧೋರಣೆ ಇದೆ ಎಂದವರು ಕೋಪ ವ್ಯಕ್ತಪಡಿಸಿದ್ಧಾರೆ.

ಮೆಕ್ಸಿಕೋ ದೇಶದಲ್ಲಿ ಕೊರೋನಾ ವೈರಸ್ ಬಗ್ಗೆ ಅದರ ನಾಗರಿಕರಿಗೆ 35 ಭಾಷೆಗಳಲ್ಲಿ ಅಡ್ವೈಸರಿ ಕಳುಹಿಸಲಾಗುತ್ತಿದೆ. ಭಾರತದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಮಾಹಿತಿ ದೊರಕುತ್ತಿದೆ. ಕೊರೋನಾ ವೈರಸ್ ಬಗ್ಗೆ ಭಾರತ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಮತ್ತೊಬ್ಬರು ಖೇದ ಪಟ್ಟಿದ್ದಾರೆ.ಇದನ್ನೂ ಓದಿ: ಬಸವನಾಡಿನಲ್ಲಿ ಕೊರೋನಾ ವೈರಸ್ ಬಗ್ಗೆ ವಿನೂತನ ಜಾಗೃತಿ; ಜಿಲ್ಲಾಡಳಿತದ ಕ್ರಮಕ್ಕೆ ಪ್ರಶಂಸೆ


ಕೇರಳದ ಪಿಣಾರಯಿ ವಿಜಯನ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರವು ಇಂಗ್ಲೀಷ್ ಮತ್ತು ಮಲಯಾಳಂನಲ್ಲಷ್ಟೇ ಅಲ್ಲ ಹಿಂದಿ ಹಾಗೂ ಬಂಗಾಳಿಯಲ್ಲೂ ನಿರ್ದೇಶನಗಳನ್ನು ನೀಡುತ್ತಿದೆ. ವಲಸಿಗ ಕಾರ್ಮಿಕರ ದೃಷ್ಟಿಯಿಂದ ಕೇರಳ ಸರ್ಕಾರ ಕೈಗೊಂಡ ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಬಹುತೇಕ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.2011ರ ಜನಗಣತಿ ಪ್ರಕಾರ ಭಾರತದಲ್ಲಿ ಶೇ. 25 ಮಂದಿ ಮಾತ್ರ ಹಿಂದಿ ಭಾಷಿಕರಾಗಿದ್ಧಾರೆ. ಮುಕ್ಕಾಲು ಪಾಲು ಜನರು ಹಿಂದಿಯೇತರ ಭಾಷಿಕರಾಗಿದ್ಧಾರೆ. ಆದರೂ ಕೂಡ ಕೇಂದ್ರ ಸರ್ಕಾರ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯನ್ನೇ ಕಡೆಗಣಿಸಿ ಹಿಂದಿಗೆ ಉತ್ತೇಜನ ನೀಡುತ್ತಿದೆ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಜನಜಾಗೃತಿ ಮೂಡುತ್ತಿದೆ. ಕೇಂದ್ರದ ಕ್ರಮಗಳಿಗೆ ಇಲ್ಲಿ ತೀವ್ರ ಪ್ರತಿರೋಧಗಳು ಬರುತ್ತವೆ.

First published: