ಕೊರೋನಾ ರೋಗಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ - ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶವೇನು?

ಅತ್ಯಗತ್ಯವಿರುವ ರೋಗಿಗಳಿಗೆ ಅಗತ್ಯ ಸೌಕರ್ಯ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಿಪರೀತ ಅನಾರೋಗ್ಯದಲ್ಲಿರುವ ಅನೇಕ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಟ ಪಡುವಂತಾಗಿದೆ. ಇದನ್ನು ತಪ್ಪಿಸಲು ಮುಂಬೈ ಮತ್ತು ದೆಹಲಿಯ ಮಾರ್ಗ ಅನುಸರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

news18-kannada
Updated:July 3, 2020, 3:51 PM IST
ಕೊರೋನಾ ರೋಗಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ - ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶವೇನು?
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಜು.03): ರಾಜ್ಯದಲ್ಲಿ ಏ-ಸಿಂಪ್ಟಮ್ಯಾಟಿಕ್ ರೋಗಿಗಳಗೆ ಮನೆಯಲ್ಲೇ ಚಿಕಿತ್ಸೆ ಕೊಡಲು ಸರ್ಕಾರ ನಿರ್ಧರಿಸಿದೆ. ಬುಧವಾರ ಸಿಎಂ ಜೊತೆ ನಡೆದ ತಜ್ಞರ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯ್ತು. ಈಗಾಗಲೇ ಈ ಬಗ್ಗೆ ಸೂಕ್ತ ನಿಯಮಾವಳಿ ಬಿಡುಗಡೆ ಮಾಡಲಾಗಿದೆ.

ಅತ್ಯಗತ್ಯವಿರುವ ರೋಗಿಗಳಿಗೆ ಅಗತ್ಯ ಸೌಕರ್ಯ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಿಪರೀತ ಅನಾರೋಗ್ಯದಲ್ಲಿರುವ ಅನೇಕ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಟ ಪಡುವಂತಾಗಿದೆ. ಇದನ್ನು ತಪ್ಪಿಸಲು ಮುಂಬೈ ಮತ್ತು ದೆಹಲಿಯ ಮಾರ್ಗ ಅನುಸರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರಮುಖವಾಗಿ ಕೋವಿಡ್ ಸೋಂಕಿತರಲ್ಲಿ 4 ಬಗೆಯ ರೋಗಿಗಳಿರುತ್ತಾರೆ.‌

ಮೊದಲನೇ ವರ್ಗ ಏ-ಸಿಂಪ್ಟಮ್ಯಾಟಿಕ್- ಯಾವುದೇ ರೋಗಲಕ್ಷಣ ಇಲ್ಲದ ಸೋಂಕಿತರು ಬೆಂಗಳೂರಿನ ಒಟ್ಟಾರೆ ಆಸ್ಪತ್ರೆಗಳ ಶೇಕಡಾ 60ರಷ್ಟು ಹಾಸಿಗೆಗಳಲ್ಲಿ ಇವರೇ ಇದ್ದಾರೆ. ಉದಾಹರಣೆಗೆ ವಿಕ್ರಂ ಆಸ್ಪತ್ರೆಯ 45 ಕೋವಿಡ್ ಹಾಸಿಗೆಗಳಲ್ಲಿ 42ರಲ್ಲಿ ಏ-ಸಿಂಪ್ಟಮ್ಯಾಟಿಕ್ ರೋಗಿಗಳಿದ್ದಾರೆ. ಇವರಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ, ದಿನನಿತ್ಯ ವೈದ್ಯರ ಅವಶ್ಯಕತೆಯೂ ಇಲ್ಲ. ಇವರಿಗೆ ಆಸ್ಪತ್ರೆವಾಸದ ಅವಶ್ಯಕತೆ ಕೂಡಾ ಇಲ್ಲ. ಇವರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ತೆಗೆದುಕೊಳ್ಳಬೇಕು. ಇವರು ನಿರಂತರವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ/ಆಶಾ ಕಾರ್ಯಕರ್ತೆಯರ ಜೊತೆಗೆ ಸಂಪರ್ಕದಲ್ಲಿದ್ದು, ಆರೋಗ್ಯದ ಮಾಹಿತಿ ನೀಡಬೇಕು

ಇವರನ್ನು ಹೊರರೋಗಿಗಳ ವಿಭಾಗದಲ್ಲೇ ನೋಡಿದರೆ ಸಾಕಾಗುತ್ತದೆ. ಇವರಿಗೆ ಎಲ್ಲಾ ನಿಯಮಗಳನ್ನು ಸರಿಯಾಗಿ ತಿಳಿಸಿ ಅವುಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗುತ್ತದೆ. ಒಂದು ವೇಳೆ ರೋಗಲಕ್ಷಣ ಕಂಡುಬಂದಾಗ ಮಾತ್ರ ಇವ್ರು ಆಸ್ಪತ್ರೆಗೆ ಬರಬೇಕು. ಇವರನ್ನು ಮನೆಯಲ್ಲೇ ಇರಿಸಿ ಆರೈಕೆ ಮಾಡುವುದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಐಸಿಎಂಆರ್ ನಿಯಮಗಳಿವೆ. ಮನೆಯಲ್ಲಿ ಪ್ರತ್ಯೇಕ ಕೋಣೆ ವ್ಯವಸ್ಥೆ ಇಲ್ಲದ ಈ ವರ್ಗದವರಿಗೆ ಓಪನ್ ಹಾಸ್ಪಿಟಲ್ ಅಥವಾ ಹೋಟೆಲ್/ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

ಎರಡನೇ ವರ್ಗದ ರೋಗಿಗಳು ಮೈಲ್ಡ್ ಸಿಂಪ್ಟಮ್ಯಾಟಿಕ್- ಇವರಿಗೆ ಸ್ವಲ್ಪಮಟ್ಟಿಗೆ ಜ್ವರ, ಕೆಮ್ಮು, ಗಂಟಲು ನೋವು ಇತ್ಯಾದಿ ಇರುತ್ತದೆ. ಇವರು ಕೂಡಾ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣವಾಗಬಹುದು. ಆದರೆ ಸದ್ಯ ನಮ್ಮ ರಾಜ್ಯದಲ್ಲಿ ಇವರನ್ನೂ ಆಸ್ಪತ್ರೆಗಳಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ವೇಳೆ ಇವರಿಗೆ ಮನೆಯಲ್ಲೇ ಪ್ರತ್ಯೇಕ ಕೊಠಡಿ ಇದ್ದು, ತಿಳುವಳಿಕೆ ಇದ್ದು, ಜವಾಭ್ದಾರಿ ತೆಗೆದುಕೊಂಡರೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆದರೆ ಇವರೂ ನಿಯಮಿತವಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಮ್ಮ ಆರೋಗ್ಯದ ಮಾಹಿತಿ ನಿತ್ಯ ನೀಡಬೇಕು.
ಇದನ್ನೂ ಓದಿ: ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ರಾಜ್ಯ ಸರ್ಕಾರ 2,200 ಕೋಟಿ ಲೂಟಿ ಹೊಡೆದಿದೆ: ಸಿದ್ದರಾಮಯ್ಯ ಗಂಭೀರ ಆರೋಪ

ಮೂರನೇ ವರ್ಗ ಮಾಡರೇಟ್ ರೋಗಿಗಳದ್ದು- ಇವರು 60 ವರ್ಷಕ್ಕಿಂತ ಹೆಚ್ಚಿನವರು, ಅಥವಾ ಪುಟ್ಟ ಮಕ್ಕಳು ಅಥವಾ ಬೇರೆ ಅನಾರೋಗ್ಯ ಸಮಸ್ಯೆ ಇರುವವರು. ಇವರಲ್ಲಿ ಅನೇಕರಿಗೆ ಉಸಿರಾಟದ ಸಮಸ್ಯೆ ಕೂಡಾ ಇರಬಹುದು. ಈ ವರ್ಷದವರಿಗೆ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಿಸಬೇಕು. ವೈದ್ಯರ ಮುಂದಾಳತ್ವದಲ್ಲೇ ಇವರಿಗೆ ಚಿಕಿತ್ಸೆ ನೀಡಬೇಕು.

ನಾಲ್ಕನೆಯ ವರ್ಗ ಅತಿಸೂಕ್ಷ್ಮ ರೋಗಿಗಳದ್ದು- ಇವರಿಗೆ ಕೃತಕ ಉಸಿರಾಟದ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್, ಪ್ಲಾಸ್ಮಾ ಥೆರಪಿ ಅವಶ್ಯಕತೆ ಇರುವಂಥಾ ವರ್ಗವಿದು. ಇವರಿಗೆ ಅತ್ಯಗತ್ಯವಾಗಿ ಆಸ್ಪತ್ರೆಗಳ ಅವಶ್ಯಕತೆ ಇರುತ್ತದೆ. ಏಸಿಂಪ್ಟಮ್ಯಾಟಿಕ್ ರೋಗಿಗಳೇ ಹೆಚ್ಚಾಗಿ ಆಸ್ಪತ್ರೆಗಳನ್ನು ಆಕ್ರಮಿಸಿಕೊಂಡಿದ್ದಾರೆ.

ಇದರಿಂದ ಅತಿಸೂಕ್ಷ್ಮ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೌಕರ್ಯ ಸಿಗದಂತಾಗಿದೆ. ಆದ್ದರಿಂದ ಏಸಿಂಪ್ಟಮ್ಯಾಟಿಕ್ ಎಲ್ಲರನ್ನೂ ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧಾರ ತೆಗೆದುಕೊಂಡಿದೆ ರಾಜ್ಯ ಸರ್ಕಾರ. ಈ ಕ್ರಮದಿಂದ ತುರ್ತಾಗಿ ಬೇಕಾದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಾಗುತ್ತದೆ. ಇದರಿಂದ ರೋಗಿಗಳು ಹಾಸಿಗೆಗಳ ಲಭ್ಯತೆ ಹುಡುಕಿಕೊಂಡು ಒಂದು ಆಸ್ಪತ್ರೆಯಿಂದ ಮತ್ತೊಂದಕ್ಕೆ ಅಲೆಯುವುದು ತಪ್ಪುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.
First published: July 3, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading