HOME » NEWS » Coronavirus-latest-news » WHO WILL PLAY CARDS AT UGADI FESTIVAL TIME WE WILL TAKE LEGAL ACTION SAYS MANDYA DC RH

ಯುಗಾದಿಗೆ ಮಂಡ್ಯದಲ್ಲಿ ಇಸ್ಪೀಟ್ ಆಡುವುದು ಹೆಚ್ಚು, ಈ ಬಾರಿ ಜೂಜಾಡಿದರೆ ಕಠಿಣ ಕ್ರಮ; ಡಿಸಿ ಎಚ್ಚರಿಕೆ

ಜೂಜಾಟದಲ್ಲಿ ತೊಡಗಿದರೆ ಕೇಸು ದಾಖಲಿಸಲಾಗುವುದು. ಯುಗಾದಿ ಹಬ್ಬವನ್ನು ಸರಳವಾಗಿ ಮನೆಯಲ್ಲಿ ಆಚರಿಸಿ. ಯಾರು ಕೂಡ ಗುಂಪು ಗುಂಪಾಗಿ ಸೇರದೆ ಹಬ್ಬ ಆಚರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

news18-kannada
Updated:March 24, 2020, 4:25 PM IST
ಯುಗಾದಿಗೆ ಮಂಡ್ಯದಲ್ಲಿ ಇಸ್ಪೀಟ್ ಆಡುವುದು ಹೆಚ್ಚು, ಈ ಬಾರಿ ಜೂಜಾಡಿದರೆ ಕಠಿಣ ಕ್ರಮ; ಡಿಸಿ ಎಚ್ಚರಿಕೆ
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ
  • Share this:
ಮಂಡ್ಯ: ಮಂಡ್ಯದಲ್ಲಿ 116 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಹೊರ ಜಿಲ್ಲೆಯವರು ನಮ್ಮ ಜಿಲ್ಲೆಗೆ ಬರಲು ನಿರ್ಬಂಧ ಹೇರಲಾಗಿದೆ. ಮನೆಯಿಂದ ಯಾರು ಹೊರ ಬಾರದಂತೆ ಸೂಚನೆ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್, ಮಂಡ್ಯ ಜಿಲ್ಲೆಗೆ 16 ಮಂದಿ ಹೊರ ದೇಶದಿಂದ ಬಂದಿದ್ದರು. ಆ ಪೈಕಿ 14 ಮಂದಿ ತಮ್ಮ ದೇಶಕ್ಕೆ ವಾಪಸ್ ಹೋಗಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಜನ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಹಾಲು, ತರಕಾರಿ, ದಿನಸಿ ಮಾರಾಟಕ್ಕೆ ನಿರ್ಬಂಧ ಇಲ್ಲ. ನಾಳೆ ಯುಗಾದಿ ಹಬ್ಬ, ನಾಡಿದ್ದು ವರ್ಷದ ತೊಡುಕು ಇದೆ. ಹೊರಗಡೆಯಿಂದ ಹಬ್ಬಕ್ಕೆ ಯಾರು ಬರಬೇಡಿ, ಇದ್ದ ಕಡೆಯಲ್ಲೇ ಹಬ್ಬ ಆಚರಿಸಿ ಎಂದು ಸೂಚನೆ ನೀಡಿದರು.

ಯುಗಾದಿ ಸಂದರ್ಭದಲ್ಲಿ ಈ ಭಾಗದಲ್ಲಿ ಇಸ್ಪೀಟ್ ಆಡುವುದು ಹೆಚ್ಚು. ಹಾಗೆನಾದರೂ  ಜನರು ಇಸ್ಪೀಟ್, ಜೂಜಾಟದಲ್ಲಿ ತೊಡಗಿದರೆ ಕೇಸು ದಾಖಲಿಸಲಾಗುವುದು. ಯುಗಾದಿ ಹಬ್ಬವನ್ನು ಸರಳವಾಗಿ ಮನೆಯಲ್ಲಿ ಆಚರಿಸಿ. ಯಾರು ಕೂಡ ಗುಂಪು ಗುಂಪಾಗಿ ಸೇರದೆ ಹಬ್ಬ ಆಚರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: ‘ಕೊರೋನಾ ಎದುರಿಸಲು ಸರ್ಕಾರ ಸಿದ್ದ; ಸೋಂಕು ತಡೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ‘ - ಶ್ರೀರಾಮುಲು

ಜಿಲ್ಲೆಯಲ್ಲಿ 9 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಹೊರಗಡೆಯಿಂದ ಬರುವವರ ತಪಾಸಣೆ ನೆಡೆಯುತ್ತಿದೆ. ಎಲ್ಲರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಮಂಡ್ಯ ಜಿಲ್ಲೆಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸೋಣ. ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
First published: March 24, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading