ಕೊರೋನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್: ತಾತ್ಕಾಲಿಕವಾಗಿ ಪ್ರಯೋಗ ನಿಲ್ಲಿಸಿದ ಡಬ್ಲ್ಯೂಎಚ್ಒ

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಮಲೇರಿಯಾ ರೋಗಿಗಳ ಚಿಕಿತ್ಸೆಗೆ ಪ್ರಯೋಗಿಸಲಾಗುತ್ತದೆ. ಇದು ಕೋವಿಡ್ ರೋಗದ ನಿಯಂತ್ರಣಕ್ಕೆ ಸಹಾಯಕ ಎಂದು 2-3 ತಿಂಗಳ ಹಿಂದಿನ ಅಧ್ಯಯನಗಳು ತಿಳಿಸಿದ್ದವು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ(ಮೇ 26): ಹೈಡ್ರಅಕ್ಸಿಕ್ಲೋರೋಕ್ವಿನ್ ಔಷಧ ಒಂದೆರಡು ತಿಂಗಳಿನಿಂದ ಹೆಚ್ಚು ಸದ್ದು ಮಾಡುತ್ತಿದೆ. ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಭಾರತದ ವೈದ್ಯಕೀಯ ಪ್ರಾಧಿಕಾರ ಐಸಿಎಂಆರ್ ಶಿಫಾರಸು ಮಾಡಿರುವ ಔಷಧ ಇದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾ ಬರದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ನಿತ್ಯ ಸೇವಿಸುತ್ತಿರುವ ಔಷಧ ಇದು. ಈಗ ವಿಶ್ವ ಆರೋಗ್ಯ ಸಂಸ್ಥೆಯು ಈ ಔಷಧದ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಸೇವನೆಯಿಂದ ಸಾವು ಸಂಭವಿಸುವ ಮತ್ತು ಹೃದಯ ತೊಂದರೆ ಉದ್ಭವಿಸುವ ಅಪಾಯ ಹೆಚ್ಚಿದೆ ಎಂದು ಕೆಲ ಸಂಶೋಧನೆಗಳು ಹೇಳುತ್ತಿರುವ ಬೆನ್ನಲ್ಲೇ ಡಬ್ಲ್ಯೂಎಚ್​ಒ ಈ ನಿರ್ಧಾರಕ್ಕೆ ಬಂದಿದೆ.

ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ಡೆಸೆವಿರ್ ಸೇರಿದಂತೆ ವಿಶ್ವಾದ್ಯಂತ ಹಲವು ವಿಧದ ಔಷಧಗಳ ಪ್ರಸ್ತಾವ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಎಲ್ಲಾ ಔಷಧಗಳನ್ನ ಪರಿಶೀಲಿಸಲು ಪ್ರಯೋಗ ನಡೆಸುತ್ತಿದೆ. ಮನುಷ್ಯರ ಮೇಲೆ ಪ್ರಯೋಗ ಮಾಡಿ ಇದರ ಪರಿಣಾಮ ಮತ್ತು ಗುಣಮಟ್ಟವನ್ನು ಪರಿಶೀಲಿಸುತ್ತದೆ. ಇದಕ್ಕೆ ಸಾಲಿಡಾರಿಟಿ ಟ್ರಯಲ್ ಎನ್ನುತ್ತಾರೆ.

ಇದನ್ನೂ ಓದಿ: ಕೊರೋನಾ ಹೋರಾಟಕ್ಕೆ ಬ್ರಿಟನ್ ವಿಜ್ಞಾನಿಗಳಿಂದ 50:30 ಸೂತ್ರ – ಏನಿದು ಈ ಐವತ್ತು ಮೂವತ್ತು ಫಾರ್ಮುಲಾ?

ಇಂಥ ಸಾಲಿಟಾರಿಟಿ ಪ್ರಯೋಗ ನಡೆಸುತ್ತಿರುವ ಡಬ್ಲ್ಯೂಎಚ್​ಒನ ಅಧಿಕಾರಿಗಳು ಶನಿವಾರ ಸಭೆ ನಡೆಸಿದ್ದರು. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ತೀವ್ರ ಅಡ್ಡಪರಿಣಾಮ ಮತ್ತು ಕೊವಿಡ್ ಚಿಕಿತ್ಸೆಗೆ ಅದರ ನಿರುಪಯುಕ್ತತೆ ಬಗ್ಗೆ ಕೆಲ ಅಧ್ಯಯನ ವರದಿಗಳು ಬಂದ ಹಿನ್ನೆಲೆಯಲ್ಲಿ ಅದರ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿನ್ನೆ ನಿರ್ಧರಿಸಿದ್ದಾರೆ. ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕಲೆಹಾಕಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಆದರೆ, ಡಬ್ಲ್ಯೂಎಚ್​ಒದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಪ್ರಯೋಗದಲ್ಲಿ ಯಾವುದೇ ಸುರಕ್ಷಾ ಸಮಸ್ಯೆ ತಲೆದೋರಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಆ ಪ್ರಯೋಗ ನಿಲ್ಲಿಸಲಾಗಿದೆ. ಅಂಕಿಅಂಶ ತಜ್ಞರಿಂದ ಮಾಹಿತಿ ವಿಶ್ಲೇಷಣೆ ನಡೆಯುತ್ತಿದೆ ಎಂದು ಡಬ್ಲ್ಯೂಎಚ್​ಒ ಎಮರ್ಜೆನ್ಸೀಸ್ ವಿಭಾಗದ ಮುಖ್ಯಸ್ಥ ಡಾ. ಮೈಕೇಲ್ ರಯಾನ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೆದರದಿರಿ..! ಜ್ವರ ಇಲ್ಲದವರು, ಗುಣಮುಖರಾದವರಿಂದ ಕೊರೋನಾ ಸೋಂಕು ಹರಡೋದಿಲ್ಲ

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಮಲೇರಿಯಾ ರೋಗಿಗಳ ಚಿಕಿತ್ಸೆಗೆ ಪ್ರಯೋಗಿಸಲಾಗುತ್ತದೆ. ಇದು ಕೋವಿಡ್ ರೋಗದ ನಿಯಂತ್ರಣಕ್ಕೆ ಸಹಾಯಕ ಎಂದು 2-3 ತಿಂಗಳ ಹಿಂದಿನ ಅಧ್ಯಯನಗಳು ತಿಳಿಸಿದ್ದವು. ಭಾರತ ಸರ್ಕಾರ ಕೂಡ ಈ ಔಷಧದ ಬಳಕೆಗೆ ಮಾನ್ಯತೆ ಕೊಟ್ಟಿದೆ. ಭಾರತದಲ್ಲಿ ಈ ಔಷಧ ಹೇರಳವಾಗಿ ಲಭ್ಯವಿದೆ. ಅಮೆರಿಕ ದಂಬಾಲು ಬಿದ್ದು ಈ ಔಷಧವನ್ನು ಭಾರತದಿಂದ ತರಿಸಿಕೊಂಡಿದೆ. ಈ ಬೆಳವಣಿಗೆಗಳಾದ ಬೆನ್ನಲ್ಲೇ ಕೆಲ ಸಂಶೋಧನೆಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ನಿರುಪಯುಕ್ತತೆ ಬಗ್ಗೆ ಬೆಳಕು ಚೆಲ್ಲಿವೆ. ಸದ್ಯಕ್ಕೆ Remdesevir ಔಷಧ ಇದ್ದುದ್ದರಲ್ಲಿ ಹೆಚ್ಚು ಉಪಯುಕ್ತ ಎಂಬುದು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ತಿಳಿದುಬಂದಿದೆ.

First published: