Covid Cases: ಮುಂಬರುವ ದಿನಗಳಲ್ಲಿ ಕೋವಿಡ್‌-19 ವೈರಸ್‌ ಹರಡುವಿಕೆ ಹೆಚ್ಚಾಗುವ ಸಾಧ್ಯತೆ: WHO ಎಚ್ಚರಿಕೆ

ಸತತವಾಗಿ ಎರಡು ವರ್ಷಗಳ ದೀರ್ಘ ಕಾಲ ಜಗತ್ತನ್ನು ಕಾಡಿದ ಕೋವಿಡ್‌-19 ವೈರಸ್‌ ಹರಡುವಿಕೆ ಈಗ ಮತ್ತಷ್ಟು ಹೆಚ್ಚಾಗುವ ಸಂಭವವಿದೆ, ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕಕಾರಿ ಹೇಳಿಕೆಯನ್ನು ಗುರುವಾರದಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದೆ.

ಕೋವಿಡ್-‌19

ಕೋವಿಡ್-‌19

  • Share this:
ಸತತವಾಗಿ ಎರಡು ವರ್ಷಗಳ ದೀರ್ಘ ಕಾಲ ಜಗತ್ತನ್ನು ಕಾಡಿದ ಕೋವಿಡ್‌-19 (Covid-19) ವೈರಸ್‌ ಹರಡುವಿಕೆ ಈಗ ಮತ್ತಷ್ಟು ಹೆಚ್ಚಾಗುವ ಸಂಭವವಿದೆ, ಇದರಿಂದ ಆಸ್ಪತ್ರೆಗೆ (Hospital) ದಾಖಲಾಗುವ ರೋಗಿಗಳ ಸಂಖ್ಯೆಯು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕಕಾರಿ ಹೇಳಿಕೆಯನ್ನು ಗುರುವಾರದಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದೆ. ಜಗತ್ತಿನ ಹಲವು ಕಡೆ ಈಗ ಮುಂಗಾರಿನ ಸಮಯ ಆಗಿರುವುದರಿಂದ ಜನರೆಲ್ಲರೂ ಒಂದೇ ಕಡೆ ಇರುವ ಸಂಭವ ಹೆಚ್ಚು. ಇದರಿಂದ ಒಬ್ಬರಿಂದ ಒಬ್ಬರಿಗೆ ಈ ವೈರಸ್‌ (Virus) ಬೇಗನೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು. ಈ ವೈರಸ್‌ ಹೆಚ್ಚು ಹರಡುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ (Patient) ಸಂಖ್ಯೆಯು ಹೆಚ್ಚುತ್ತದೆ.

WHO ನಿಂದ ಕೋವಿಡ್ ಹರಡುವಿಕೆಯ ಬಗ್ಗೆ ಆಘಾತದ ವಿಷಯ ಬಯಲು
ಇದರ ಕುರಿತು “ಕಳೆದ ಕೆಲವು ವಾರಗಳಲ್ಲಿ, ಜಗತ್ತಿನಾದ್ಯಂತ 15,000 ಜನರು ಕೋವಿಡ್‌-19 ವೈರಸ್‌ನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ 4 ವಾರಗಳಲ್ಲಿ, ಕೋವಿಡ್‌-ಸಂಬಂಧಿತ ಸಾವುಗಳು 35% ರಷ್ಟು ಹೆಚ್ಚಾಗಿವೆ. ಕೆಲವು ವಾರಗಳಲ್ಲೆ 15,000 ಜನರು ಈ ಕೋವಿಡ್‌ ಎಂಬ ಮಾರಕ ರೋಗದಿಂದ ಸಾವನ್ನಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ. ಆಸ್ಪತ್ರೆಗಳಿಗೆ ದಾಖಲಾಗುವವರು ಹೆಚ್ಚುತ್ತಿದ್ದಾರೆ ಹಾಗೂ ಸಾವನ್ನಪ್ಪುವವರು ಕೂಡ ಹೆಚ್ಚಾಗುತ್ತಿದ್ದು ಇದು ನಿಜಕ್ಕೂ ಆತಂಕ ಮೂಡಿಸುವ ವಿಚಾರ ಆಗಿದೆ” ಎಂದು WHO ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಆಘಾತದ ವಿಷಯ ಹೊರಹಾಕಿದ್ದಾರೆ."ಸೋಂಕುಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ನಾವು ಎಲ್ಲಾ ಸಾಧನಗಳನ್ನು ಹೊಂದಿರುವಾಗ ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಕೋವಿಡ್‌, ಮಂಕಿಪಾಕ್ಸ್ ಮತ್ತು ಇತರ ಆರೋಗ್ಯ ಸಮಸ್ಯೆಗಳ ಕುರಿತು ಗುರುವಾರದಂದು ನಡೆದ ವಾರದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದರು.

ಈಗ ಕೋವಿಡ್‌-19 ಅನ್ನು ಹೇಗೆ ನಿಯಂತ್ರಿಸಬಹುದು?
ಇಂತಹ ತುರ್ತು ಸಮಯದಲ್ಲಿ ಯಾವ ರೀತಿಯ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ಪ್ರಾಣಾಪಾಯದಿಂದ ದೂರ ಇರಬಹುದು ಎಂಬುದನ್ನು ಸೂಚಿಸುತ್ತಾ, WHO ಮುಖ್ಯಸ್ಥರು “ ಇಂದು ನಮ್ಮಲ್ಲಿ ಎಲ್ಲರಿಗೂ ಕೋವಿಡ್‌ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ತಿಳಿದಿರುವುದರಿಂದ, ಕೋವಿಡ್‌ನ ಆರಂಭಿಕ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಸಲಹೆ ಮೇರೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪಾಸಿಟಿವ್‌ ಎಂದು ವರದಿ ಬಂದರೆ ಕೂಡಲೇ ಕೋವಿಡ್‌ ಲಸಿಕೆ ಪಡೆಯಿರಿ. ಜನಸಂದಣಿಯಿಂದ ದೂರವಿರಲು ಸಾಧ್ಯವಿಲ್ಲದ ಸಮಯದಲ್ಲಿ ಮುಖಕ್ಕೆ ಮಾಸ್ಕ್‌ ಅನ್ನು ಧರಿಸಿ. ಜನಸಂದಣಿಯಿಂದ ದೂರವಿರಲು ಪ್ರಯತ್ನಿಸಿ” ಎಂದು ಹೇಳಿದರು.

ಇದನ್ನೂ ಓದಿ:  Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

“ಕೋವಿಡ್-‌19 ನೊಂದಿಗೆ ಜೀವನ ನಡೆಸುವುದು ಅತಿ ಮುಖ್ಯ. ಆ ರೀತಿಯ ಜೀವನ ನಡೆಸಲು ನಮ್ಮಿಂದ ಆಗದು ಎಂದರೆ ನಾವು ನಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದಾದ ಸಂದರ್ಭಗಳು ದೂರವೇನು ಇಲ್ಲ. ಇದರರ್ಥ ನಾವು ನಮ್ಮನ್ನು ರಕ್ಷಿಸಿಕೊಳ್ಳಲೇಬೇಕಾದ ತುರ್ತು ಸಮಯ ಇದಾಗಿದೆ. ನಮ್ಮ ರಕ್ಷಣೆಗೆ ಬೇಕಾಗುವ ಸಾಧನಗಳಿಂದ ನಮ್ಮ ಆರೋಗ್ಯ ಮತ್ತು ಸಾವಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯ ಕ್ರಮವನ್ನು ಪ್ರತಿಯೊಬ್ಬರು ಕೈಗೊಳ್ಳಲೇಬೇಕಾದ ಅನಿವಾರ್ಯತೆ ನಮಗೆ ಬಂದಿದೆ” ಎಂದು WHO ಮುಖ್ಯಸ್ಥರು ಹೇಳಿದರು.

ಕೋವಿಡ್‌-19 ವೈರಸ್‌ನ ಹೊಸ ರೂಪಾಂತರಗಳು:
“ಕೋವಿಡ್‌-19 ವೈರಸ್‌ ರೂಪಾಂತರ ಯಾವೆಲ್ಲ ರೂಪ ಪಡೆಯುತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಕೋವಿಡ್‌ನ ರೂಪಾಂತರವಾಗಿ ಓಮಿಕ್ರಾನ್ ಪ್ರಬಲ ವೈರಸ್‌ ಆಗಿ ನಮ್ಮನ್ನೆಲ್ಲ ಕಾಡುತ್ತಿದೆ. ಇಲ್ಲಿವರೆಗೂ ಆಸ್ಪತ್ರೆಗೆ ದಾಖಲಾದ 90% ಜನರು ಈ ಓಮ್ರಿಕಾನ್‌ ವೈರಸ್‌ನ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ನಾವು ಈ ವೈರಸ್‌ನಿಂದ ಸಾಕಷ್ಟು ಸಾವು-ನೋವು ಅನುಭವಿಸದ್ದೇವೆ ಆದರೆ ಆ ವೈರಸ್‌ ಮಾನವ ಕುಲದಲ್ಲಿ ಇನ್ನು ಹೆಚ್ಚು ಸಾವು-ನೋವನ್ನು ಉಂಟು ಮಾಡಲೇಬೇಕೆಂಬ ಹಠ ಹಿಡಿದಂತಿದ್ದು ನಾವೆಲ್ಲ ಇಂದು ಈ ವೈರಸ್‌ನ ಅವಾಂತರದಿಂದಾಗಿ ಭಯದ ಜೀವನ ಸಾಗಿಸುವ ಹಾಗಾಗಿದೆ” ಎಂದು WHO ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ: Monkeypox ನಿಮ್ಮನ್ನು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕಾಡುತ್ತದೆಯಂತೆ!

"ಈ ವರ್ಷದ ಆರಂಭದಿಂದ ವಾರಕ್ಕೊಮ್ಮೆ ವರದಿಯಾಗುವ ಕೋವಿಡ್‌ ಸಂಖ್ಯೆಯು 90% ರಷ್ಟು ಕುಸಿದಿದೆ ಏಕೆಂದರೆ ಈ ವೈರಸ್‌ ದಿನದಿಂದ ದಿನಕ್ಕೆ ಹೇಗೆ ಬದಲಾಗುತ್ತದೆ ಎಂಬುದನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿದೆ” ಎಂದು ಟೆಡ್ರೊಸ್‌ ಹೇಳಿದರು.
Published by:Ashwini Prabhu
First published: