ಭಾರತದಲ್ಲಿ ಹೆಚ್ಚು ಕೊರೋನಾ ಪ್ರಕರಣಗಳಿಲ್ಲ; ಆದರೆ, ಸೋಂಕು ಸ್ಫೋಟಗೊಳ್ಳುವ ಭೀತಿ ಇದೆ: WHO ತಜ್ಞರ ಅನಿಸಿಕೆ

ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಭಾರತದ ನಗರ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಬಹಳ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಜನರು ಮಾಸ್ಕ್ನಂಥ ರಕ್ಷಣಾ ಪರಿಕರಗಳನ್ನ ಕಟ್ಟುನಿಟ್ಟಾಗಿ ಬಳಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಜೂನ್ 06): ಭಾರತದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ನಂತರ ಜನಜೀವನ ತುಸು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಕೊರೋನಾ ಪ್ರಕರಣಗಳಿಗೆ ಮಾತ್ರ ಎಗ್ಗಿಲ್ಲದಂತಾಗಿದೆ. ದಿನವೊಂದಕ್ಕೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಐದಂಕಿ ಗಡಿ ಸಮೀಪ ಬರುತ್ತಿವೆ. ಈವರೆಗೆ ಭಾರತದಲ್ಲಿ ದಾಖಲಾಗಿರುವ ಕೊರೋನಾ ಪ್ರಕರಣಗಳು 2 ಲಕ್ಷ ಗಡಿದಾಟಿ ಹೋಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಪ್ರಕಾರ, 1.30 ಶತಕೋಟಿ ಜನಸಂಖ್ಯೆಯ ಭಾರತದಲ್ಲಿ 2 ಲಕ್ಷ ಸೋಂಕು ಪ್ರಕರಣ ದೊಡ್ಡದೆಂದನಿಸುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸೋಂಕು ಸ್ಫೋಟಗೊಂಡು ತಾರಕಕ್ಕೇರುವ ಸಾಧ್ಯತೆಯಂತೂ ಇದ್ದೇ ಇದೆ ಎನ್ನುತ್ತಾರೆ ತಜ್ಞರು.

  ಡಬ್ಲ್ಯೂಎಚ್​ಒ ಹೆಲ್ತ್ ಎಮರ್ಜೆನ್ಸೀಸ್ ಯೋಜನೆಯ ಕಾರ್ಯವಾಹಕ ನಿರ್ದೇಶಕ ಮೈಕೇಲ್ ರಯಾನ್ ಪ್ರಕಾರ ಭಾರತದಲ್ಲಿ ಸೋಂಕು ಇನ್ನೂ ದ್ವಿಗುಣಗೊಳ್ಳುತ್ತಿಲ್ಲ. ದ್ವಿಗುಣಗೊಳ್ಳುವ ಅವಧಿ ಈ ಹಂತದಲ್ಲಿ 3 ವಾರಗಳಾಗಿದೆ. ಆದರೆ, ಪ್ರಕರಣಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ. ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದ ಇತರ ದೇಶಗಳಲ್ಲೂ ಇದೇ ಸ್ಥಿತಿ ಇದೆ. ಆದರೆ, ಸಮುದಾಯದ ಮಟ್ಟದಲ್ಲಿ ಈ ವೈರಾಣು ಬೇರು ಬಿಟ್ಟರೆ ಯಾವುದೇ ಸಂದರ್ಭದಲ್ಲಾದರೂ ಸೋಂಕು ಪಸರುವಿಕೆಯ ವೇಗ ತೀವ್ರಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

  ಭಾರತದಲ್ಲಿ ತೆಗೆದುಕೊಳ್ಳಲಾದ ದೇಶವ್ಯಾಪಿ ಲಾಕ್​ಡೌನ್​ನಿಂದ ಸೋಂಕು ಹರಡುವಿಕೆ ನಿಧಾನಗೊಂಡಿರಬಹುದು. ಆದರೆ, ಲಾಕ್​ಡೌನ್ ಸಡಿಲಗೊಂಡಿರುವುದರಿಂದ ಜನರ ಓಡಾಟ ಹೆಚ್ಚಾಗಿ ಪ್ರಕರಣಗಳು ಹೆಚ್ಚಾಗುವ ಅಪಾಯ ಇದೆ ಎಂದು ಮೈಕೇಲ್ ರಯಾನ್ ಹೇಳುತ್ತಾರೆ.

  ಇದನ್ನೂ ಓದಿ: Dawood Ibrahim - ದಾವೂದ್ ಇಬ್ರಾಹಿಂಗೆ ಕೊರೋನಾ ಸೋಂಕು ನಿಜವಾ? ಅವರ ಸಹೋದರ ಏನಂತಾರೆ?

  ಇನ್ನು ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಭಾರತದ ನಗರ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಬಹಳ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಜನರು ಮಾಸ್ಕ್​ನಂಥ ರಕ್ಷಣಾ ಪರಿಕರಗಳನ್ನ ಕಟ್ಟುನಿಟ್ಟಾಗಿ ಬಳಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

  ಕಂಪನಿಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸುರಕ್ಷತೆಗೆ ಸರಿಯಾದ ವ್ಯವಸ್ಥೆ ಮತ್ತು ನಿಯಮಗಳನ್ನ ರೂಪಿಸಬೇಕು. ಮಾರುಕಟ್ಟೆ ಪ್ರದೇಶಗಳಲ್ಲಿ ಯಾವ ರೀತಿ ಇರಬೇಕೆಂದು ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಕೊರೋನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದು ಸೌಮ್ಯಾ ಸ್ವಾಮಿನಾಥನ್ ತಿಳಿಸುತ್ತಾರೆ.

  First published: