HOME » NEWS » Coronavirus-latest-news » WHO CARES ABOUT THE STREET SELLERS IN BANGALORE BUSINESS IS NOT IMPROVING EVEN AFTER THE LOCKDOWN HK

ಬೆಂಗಳೂರಲ್ಲಿ ಬೀದಿ‌ ಬದಿ ವ್ಯಾಪಾರಿಗಳ ಗೋಳು ಕೇಳೋರ್‍ಯಾರು ; ಲಾಕ್ ಡೌನ್ ಬಳಿಕವೂ ಸುಧಾರಿಸುತ್ತಿಲ್ಲ ವ್ಯಾಪಾರ

ಕೊರೋನಾ ಮುಂಚೆ ಮೆಜೆಸ್ಟಿಕ್ ನಲ್ಲಂತೂ ಬೀದಿಬದಿ ವ್ಯಾಪಾರವೇ ದಿನವೊಂದಕ್ಕೆ ಕೋಟಿ ಮೀರುತ್ತಿತ್ತು. ಆದರೀಗ ಮೆಜೆಸ್ಟಿಕ್ ನಲ್ಲಿ ಕೋಟಿ ಮಾತಿರಲಿ, ಲಕ್ಷದ ಮಾತು ಇಲ್ಲ

news18-kannada
Updated:June 18, 2020, 7:26 AM IST
ಬೆಂಗಳೂರಲ್ಲಿ ಬೀದಿ‌ ಬದಿ ವ್ಯಾಪಾರಿಗಳ ಗೋಳು ಕೇಳೋರ್‍ಯಾರು ; ಲಾಕ್ ಡೌನ್ ಬಳಿಕವೂ ಸುಧಾರಿಸುತ್ತಿಲ್ಲ ವ್ಯಾಪಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.18): ಲಾಕ್ ಡೌನ್ ಸಡಲಿಕ ಬಳಿಕವೂ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಬದುಕು ಹಸನಾಗುತ್ತಿಲ್ಲ. ಸಡಲಿಕೆಯಾಗಿ ತಿಂಗಳೇ‌ ಕಳೆದರೂ ಬೃಹತ್‌ ಬೆಂಗಳೂರು ಮಹಾನಗರದಲ್ಲಿ‌ ಜನರು ಬೀದಿಬದಿ ವ್ಯಾಪಾರಿಗಳ ಬಳಿ ವ್ಯಾಪಾರ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಲಾಕ್ ಡೌನ್ ಸಡಲಿಕೆ ಬಳಿಕ ಜನಜೀವನ ಎಂದಿನಂತೆ ಮುಂದುವರೆಯಲು ರಾಜ್ಯ ಸರಕಾರ ಸರ್ವಪ್ರಯತ್ನ ಮಾಡುತ್ತಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸೂಚನೆ ನೀಡಿ ಆರ್ಥಿಕ‌ ಚಟುವಟಿಕೆಗೆ ಹೆಚ್ಚು ಮಹತ್ವ‌ ನೀಡಲಾಗುತ್ತಿದೆ. ಕಳೆದೆರಡು ತಿಂಗಳ ಲಾಕ್ ಡೌನ್‌ನಿಂದ ಕಂಗಲಾಗಿದ್ದ‌ ಬೀದಿ ಬದಿ ವ್ಯಾಪಾರಿಗಳು ನಿಯಮ ಸಡಲಿಕೆ ಬಳಿಕ ಸಾಕಷ್ಟು ಸಮಾಧಾನದಿಂದಿದ್ದರು. ಎಂದಿನಂತೆ ಬೀದಿ ಬದಿಯಲ್ಲಿ ಅಂಗಡಿ ಹಾಕಿ, ದೂಕು ಬಂಡಿಯಲ್ಲಿ ತರಕಾರಿ, ಹಣ್ಣುಹಂಪಲು, ವಸ್ತುಗಳು ಹೀಗೆ ಜನರಿಗೆ ಬೇಕಾದವನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಆದರೆ ಬೀದಿ ಬದಿ ವ್ಯಾಪಾರಿಗಳ ಬಳಿ ಕೊಳ್ಳುವವರ ಸಂಖ್ಯೆ ತುಂಬ ಕಡಿಮೆ. ಶೇ.40ರಷ್ಟು ವ್ಯಾಪಾರವಾಗುತ್ತಿದೆ. ಸಾಲ ಮಾಡಿ ತಂದ ವಸ್ತು ಕೊಳ್ಳುವವರೇ ಇಲ್ಲದಂತಾಗಿದೆ.

ಲಾಕ್ ಡೌನ್ ಸಡಲಿಕೆಯಾಗಿ ತಿಂಗಳೇ‌ ಕಳೆದಿದೆ. ಲಾಕ್ ಡೌನ್ ಮುಂಚಿನ ರೀತಿ ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಗ್ರಾಹಕರು ಮಾತ್ರ ಮುಂದೆ ಬರುತ್ತಿಲ್ಲ. ಕೊರೋನಾ ಗುಮ್ಮ ಹೆಚ್ಚು ಕಾಡುತ್ತಿದೆ. ಬೀದಿ ಬದಿಗೆ ಬಂದು ಕೊಳ್ಳುವವರು ಬಹಳ‌ ಕಡಿಮೆ. ಇಡೀ ದಿನ ತಿರುಗಿದರೂ ಮಾರಾಟವಾಗುತ್ತಿಲ್ಲ.‌ ಬೆಳಗ್ಗೆ ತಂದ ಮಾಲು ಅರ್ಧಕ್ಕರ್ದ ಹಾಗೇ ಇರುತ್ತದೆ. ಪ್ರತಿಷ್ಠಿತ ಬಡಾವಣೆ, ಸಣ್ಣಪುಟ್ಟ ಅಪಾರ್ಟೆಮೆಂಟ್ ಗಳ ಮುಂದೆ ಹೋದರೆ ಹೆಚ್ಚು ಜನರು ಹೊರಗಡೆ ಬರುವುದಿಲ್ಲ. ಈಗಂತೂ ಅಪಾರ್ಟೆಮೆಂಟ್ ನವರು ಮೊದಲೇ ಗುರುತು ಮಾಡಿದ ವ್ಯಾಪಾರಿಗಳ ವಾಹನದಲ್ಲಿ ತಂದ ವಸ್ತು ಖರೀದಿಸುತ್ತಾರೆ.

ಮೊದಲೆಲ್ಲ ಖರೀದಿಸುವವರು ಈಗ ಖರೀದಿಸುತ್ತಿಲ್ಲ. ಸ್ಲಂ, ಮಧ್ಯಮವರ್ಗಗಳು ಇರುವ ಏರಿಯಾಗಳಲ್ಲಿ ಸ್ವಲ್ಪಮಟ್ಟಿಗೆ ವ್ಯಾಪಾರವಾಗುತ್ತೆ ಎಂದು ಬೀದಿ ಬದಿ ತರಕಾರಿ ಮಾರುವ ಮಾರೇಶ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೊರೋನಾ ಮುಂಚೆ ಮೆಜೆಸ್ಟಿಕ್ ನಲ್ಲಂತೂ ಬೀದಿಬದಿ ವ್ಯಾಪಾರವೇ ದಿನವೊಂದಕ್ಕೆ ಕೋಟಿ ಮೀರುತ್ತಿತ್ತು. ಆದರೀಗ ಮೆಜೆಸ್ಟಿಕ್ ನಲ್ಲಿ ಕೋಟಿ ಮಾತಿರಲಿ, ಲಕ್ಷದ ಮಾತು ಇಲ್ಲ. ಬೆಳಗ್ಗೆಯಿಂದ‌ ರಾತ್ರಿಯವರೆಗೆ ಮಾಸ್ಕ್ ನಿಂದ ಹಿಡಿದು ಮಕ್ಕಳ, ಹಿರಿಯರ ವಸ್ತು, ಕನ್ನಡಕ, ಬ್ಯಾಗ್ ಹೀಗೆ‌ ದಿನಬಳಕೆ ವಸ್ತುಗಳ ಖರೀದಿಸುವವರೆ ಇಲ್ಲ. ಜನಸಂದಣಿಯಿರುವ ಕಾರಣಕ್ಕೆ ತುಸು ಹೊತ್ತು ನಿಂತು ತಮಗೆ ಬೇಕಾದ ವಸ್ತು ಗೊಡವೆಗೆ ಹೋಗದೆ ಹಾಗೆ ಬಸ್ ಹತ್ತಿಬಿಡುತ್ತಿದ್ದಾರೆ.

ಇದನ್ನೂ ಓದಿ :  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ; ಸಮುದ್ರದ ಭೋರ್ಗರೆತಕ್ಕೆ ಕಡಲ ಪಾಲಾದ ಮನೆ

ದಿನವೊಂದಕ್ಕೆ ಐವತ್ತು ಸಾವಿರ ದುಡಿಯುವವರು ಇದೀಗ ಎರಡು ಸಾವಿರ ಕಲೆಕ್ಷನ್ ಆದರೆ ದೊಡ್ಡ ಮಾತು ಆಗಿದೆ ಸರ್ ಎಂದು ಮೆಜೆಸ್ಟಿಕ್ ವ್ಯಾಪಾರಿ ರಸುಲ್ ಹೇಳುತ್ತಾರೆ.

ಬೆಂಗಳೂರು ನಗರದಲ್ಲಿ ಅಧಿಕೃತವಾಗಿ 24,650 ಬೀದಿ‌ಬದಿ ವ್ಯಾಪಾರಿಗಳಿದ್ದಾರೆ. ಆದರೆ, ತಮಗೆ ತೋಚಿದ ವಸ್ತು ತಂದು ಬೀದಿ ಬದಿ ವ್ಯಾಪಾರ ಮಾಡುವವರ ಸಂಖ್ಯೆ ಲಕ್ಷ‌ ಮೀರುತ್ತದೆ. ಸದ್ಯ ಕೊರೋನಾ ಸಂಕಷ್ಟದಲ್ಲಿ ಹೊರಗಡೆ ಜನರು ವೃಥಾ ಯಾವುದೇ ವಸ್ತು ಖರೀದಿಸುತ್ತಿಲ್ಲ. ಅನಿವಾರ್ಯ ಇದ್ದರೆ ಮಾತ್ರ ವ್ಯಾಪಾರ. ಇಲ್ಲವಾದಲ್ಲಿ ಇದರ ಗೊಡವೆಗೆ ಹೋಗುತ್ತಿಲ್ಲ. ದಿನದ ಹೊತ್ತು ತುಂಬಲು ಅಂದಿನ ವಸ್ತು ಮಾರಿ ಜೀವನ ನಡೆಸುವ ಬೀದಿಬದಿ ವ್ಯಾಪಾರಿಗಳ ಬದುಕು ಲಾಕ್ ಡೌನ್ ಸಡಲಿಕೆ ಬಳಿಕವೂ ಇನ್ನೂ ತಹಬದಿಗೆ ಬರುತ್ತಿಲ್ಲ.
First published: June 18, 2020, 7:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading