HOME » NEWS » Coronavirus-latest-news » WHO ARE STUCK IN GOA RETURN TO THEIR HOMETOWN AFTER 42 DAYS STATE WORKERS HK

ಗೋವಾ ರಾಜ್ಯದಲ್ಲಿ ಸಿಲುಕಿಕೊಂಡ ರಾಜ್ಯದ ಕಾರ್ಮಿಕರಿಗೆ ತವರು ಸೇರುವ ಭಾಗ್ಯ ; 42 ದಿನಗಳ ಬಳಿಕ ತಮ್ಮ ಊರಿಗೆ ತೆರಳಲು ಅವಕಾಶ

ಕಾರವಾರದ ಮಾಜಾಳಿಯಲ್ಲಿರುವ ಗೋವಾ ಹಾಗೂ ಕಾರವಾರ ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಬರುವ ಮತ್ತು ಹೋಗುವ ಎಲ್ಲ ಕಾರ್ಮಿಕರನ್ನ ತಪಾಸಣೆ ಮಾಡಿ ಜವಾಬ್ದಾರಿಯುತವಾಗಿ ಊರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

news18-kannada
Updated:May 6, 2020, 6:43 PM IST
ಗೋವಾ ರಾಜ್ಯದಲ್ಲಿ ಸಿಲುಕಿಕೊಂಡ ರಾಜ್ಯದ ಕಾರ್ಮಿಕರಿಗೆ ತವರು ಸೇರುವ ಭಾಗ್ಯ ; 42 ದಿನಗಳ ಬಳಿಕ ತಮ್ಮ ಊರಿಗೆ ತೆರಳಲು ಅವಕಾಶ
ಸಾಂದರ್ಭಿಕ ಚಿತ್ರ
  • Share this:
ಕಾರವಾರ ಮೇ.06): ಲಾಕ್ ಡೌನ್ ನಿಂದ ಗೋವಾ ರಾಜ್ಯದಲ್ಲಿ ಸಿಲುಕಿಕೊಂಡ ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿದ ಜಿಲ್ಲೆಯ ಕಾರ್ಮಿಕರಿಗೆ ಕೊನೆಗೂ ಅವರವರ ತವರು ಸೇರುವ ಭಾಗ್ಯ ಇಂದು ಒಲಿದಿದೆ. 42 ದಿನಗಳ ಬಳಿಕ ತಮ್ಮ ತಮ್ಮ ಊರು ಸೇರಿಕೊಳ್ಳಲಿರುವ ಕಾರ್ಮಿಕರಿಗೆ ಆಯಾ ಜಿಲ್ಲೆಯ ಜಿಲ್ಲಾಡಳಿತ ಇವತ್ತು ಅವಕಾಶ ಮಾಡಿಕೊಟ್ಟಿದೆ.

ಊರು ಸೇರಲಿರುವ ಕಾರ್ಮಿಕರು ಸೇವಾ ಸಿಂದು ತಂತ್ರಾಂಶದ ಮೂಲಕ ಆಯಾ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ ಆ ಅರ್ಜಿಗೆ ಅನುಮತಿ ಸಿಕ್ಕಿದ್ರೆ ಅವರೆಲ್ಲ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಆಗಲು ಅವಕಾಶ ಸಿಗಲಿದೆ. ಗೋವಾ ರಾಜ್ಯದವರು ಕೂಡಾ ರಾಜ್ಯದಲ್ಲಿ ಲಾಕ್ ಡೌನ್ ನಿಂದ ಸಿಲುಕಿಕೊಂಡಿದರು. ಅವರಿಗೂ ಕೂಡಾ ಗೋವಾ ಸರಕಾರ ತಮ್ಮೂರು ಸೇರಲು ಅನುವು ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಇವತ್ತು ಕಾರವಾರದ ಮಾಜಾಳಿಯಲ್ಲಿರುವ ಗೋವಾ ಹಾಗೂ ಕಾರವಾರ ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಬರುವ ಮತ್ತು ಹೋಗುವ ಎಲ್ಲ ಕಾರ್ಮಿಕರನ್ನ ತಪಾಸಣೆ ಮಾಡಿ ಜವಾಬ್ದಾರಿಯುತವಾಗಿ ಊರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ಇನ್ನೂ ಲಾಕ್ ಡೌನ್ ಘೋಷಣೆಯ ಮುಂಚಿತವಾಗಿ ರಾಜ್ಯದ ವಿವಿದ ಜಿಲ್ಲೆಯಿಂದ ಜನರು ಗೋವಾ ರಾಜ್ಯಕ್ಕೆ ತಮ್ಮ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಜರು ಗೋವಾ ರಾಜ್ಯದಲ್ಲಿ ಅವರವರ ಸಂಬಂಧಿಕರ ಮನೆಯಲ್ಲಿ ಸಿಲುಕಿಕೊಂಡಿದರು. ಇವತ್ತು ಅವರೆಲ್ಲ ಲಾಕ್ ಡೌನ್ ನಿಂದ ಮುಕ್ತಿಗೊಂಡರು.ಜತೆಗೆ ಇವರೆಲ್ಲ ಒಂದು ರೀತಿಯ ಸಮಸ್ಯೆ ಎದುರಿಸಿದ್ರೆ ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿದ ಜಿಲ್ಲೆಯಿಂದ ಕಾರ್ಮಿಕರು ಗೋವಾದಲ್ಲಿ ಉದ್ಯೋಗಕ್ಕಾಗಿ ತೆರಳಿದ್ದರು ಅವರು ಕೂಡಾ ಇವತ್ತು ತಮ್ಮ ತಮ್ಮ ಗೂಡು ಸೇರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್ ನಲ್ಲಿ ರೈತರ ಜೊತೆ ಬ್ಯಾಂಕ್ ಚೆಲ್ಲಾಟ ; ಅಕೌಂಟ್ ಸೀಜ್ ಮಾಡಿ ತೊಗರಿ ಹಣ ಕೊಡದೆ ಮೊಂಡುತನ

ಒಟ್ಟಾರೆ 42 ದಿನದ ಸುದೀರ್ಘ ದಿನಗಳ ಬಳಿಕ ಲಾಕ್ ಡೌನ್ ನಲ್ಲಿ ಸಿಲುಕಿದ ಜನರು ತಮ್ಮ ತಮ್ಮ ಗೂಡು ಸೇರುತ್ತಿರುವುದು ಖುಷಿ ಕೊಟ್ಟಿದೆ, ಜವಾಬ್ದಾರಿಯುತವಾಗಿ ಅವರನ್ನೆಲ್ಲ ಕಳುಹಿಸುವ ಕಾರ್ಯ ಜಿಲ್ಲಾಡಳಿತ ಮಾಡುತ್ತಿದ್ದು, ಬಂದವರೆಲ್ಲ ಹೋಂ ಕ್ವಾರಂಟೈನ್ ಆಗಲಿದ್ದಾರೆ.

(ವರದಿ : ದರ್ಶನ್​ ನಾಯ್ಕ)
First published: May 6, 2020, 6:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories