• Home
 • »
 • News
 • »
 • coronavirus-latest-news
 • »
 • ಕೊರೋನಾ ವೈರಸ್​ನಿಂದ ಜಾಗತಿಕ ಮರಣ ಪ್ರಮಾಣ ಶೇ.3.4ರಷ್ಟು ಹೆಚ್ಚಳ; ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಕೊರೋನಾ ವೈರಸ್​ನಿಂದ ಜಾಗತಿಕ ಮರಣ ಪ್ರಮಾಣ ಶೇ.3.4ರಷ್ಟು ಹೆಚ್ಚಳ; ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇರಾನ್​ನ 290 ಸಂಸದರಲ್ಲಿ ಶೇ.8ರಷ್ಟು ಸಂಸದರು ಮಾರಕ ಕೊರೋನಾ ವೈರಸ್​ಗೆ ತುತ್ತಾಗಿದ್ದಾರೆ. ಅಂದರೆ 23 ಮಂದಿ ಜನಪ್ರತಿನಿಧಿಗಳು ಸೋಂಕಿನಿಂದ ಬಳಲುತ್ತಿದ್ದಾರೆ. ಇದುವರೆಗೂ ಇರಾನ್​ನಲ್ಲಿ ಈ ಮಹಾಮಾರಿಗೆ ಕನಿಷ್ಠ 77 ಮಂದಿ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

 • Share this:

  ನವದೆಹಲಿ: ಜಗತ್ತಿನಾದ್ಯಂತ ಮರಣಮೃದಂಗಕ್ಕೆ ಕಾರಣವಾಗಿರುವ ಮಹಾಮಾರಿ ಕೊರೋನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟು ದೇಶದೆಲ್ಲೆಡೆ ಆತಂಕ ಸೃಷ್ಟಿಸಿದೆ. ಜಗತ್ತಿನಾದ್ಯಂತ ತೀವ್ರ ಗತಿಯಲ್ಲಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಅಷ್ಟೇ ವೇಗದಲ್ಲಿ ಜನರ ಪ್ರಾಣವನ್ನು ಕಸಿಯುತ್ತಿದೆ. ಜಾಗತಿಕವಾಗಿ ಕೊರೋನಾ ವೈರಸ್​ನಿಂದ ಮರಣ ಪ್ರಮಾಣ ಶೇ.3.4ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

  ಕೊರೋನಾ ವೈರಸ್​ನಿಂದ ಜಾಗತಿಕವಾಗಿ ಶೇ.3.4ರಷ್ಟು ಮರಣ ಪ್ರಮಾಣ ಹೆಚ್ಚಾಗಿರುವ ಆತಂಕಕಾರಿ ವಿಷಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

  ಶೇ.3.4ರ ಮರಣ ಪ್ರಮಾಣದಲ್ಲಿ ಚೀನಾದಲ್ಲಿಯೇ ಶೇ.2ರಷ್ಟಿದ್ದು, ಉಳಿದ ದೇಶಗಳಲ್ಲಿ ಮರಣ ಪ್ರಮಾಣ ಶೇ.0.7ರಷ್ಟಿದೆ. ಮಾರಕ ಕೊರೋನಾ ಸೋಂಕಿನಿಂದ ಅತಿ ಹೆಚ್ಚಿನ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

  ಇರಾನ್​ನ 290 ಸಂಸದರಲ್ಲಿ ಶೇ.8ರಷ್ಟು ಸಂಸದರು ಮಾರಕ ಕೊರೋನಾ ವೈರಸ್​ಗೆ ತುತ್ತಾಗಿದ್ದಾರೆ. ಅಂದರೆ 23 ಮಂದಿ ಜನಪ್ರತಿನಿಧಿಗಳು ಸೋಂಕಿನಿಂದ ಬಳಲುತ್ತಿದ್ದಾರೆ. ಇದುವರೆಗೂ ಇರಾನ್​ನಲ್ಲಿ ಈ ಮಹಾಮಾರಿಗೆ ಕನಿಷ್ಠ 77 ಮಂದಿ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

  ಇದನ್ನು ಓದಿ: ಮೋದಿ ಜೀ ಕೊರೋನಾ ವೈರಸ್​ನಿಂದ ಕಾಪಾಡಿ; ಮಾಸ್ಕ್​ಗಳಿಂದಲೂ ಪ್ರಚಾರಕ್ಕೆ ಮುಂದಾದ ಪಶ್ಚಿಮಬಂಗಾಳ ಬಿಜೆಪಿ

  First published: