HOME » NEWS » Coronavirus-latest-news » WHO AND AIIMS SAY THIRD WAVE OF CORONA VIRUS MAY NOT AFFECT KIDS AND THEY ARE STRONG SKTV

Coronavirus: ಮೂರನೇ ಅಲೆ ಮಕ್ಕಳನ್ನು ಬಾಧಿಸದೇ ಇರಬಹುದು, ಅವರು ಸ್ಟ್ರಾಂಗ್ ಇದ್ದಾರೆ !

Coronavirus: ಈ ವರದಿಯ ಆಧಾರದ ಮೇಲೆ ನಿಧಾನಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆಯೂ ಚಿಂತಿಸಬಹುದು ಎನ್ನಲಾಗಿದೆ. ಇನ್ನು ಈ ಸಂಶೋಧನೆಗೆ ನಗರ ಮತ್ತು ಗ್ರಾಮ ಎರಡೂ ಭಾಗಗಳಿಂದ ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು. ಹಾಗಾಗಿ ಇದು ನಾವು ಖಡಾಖಂಡಿತವಾಗಿ ನಂಬಬಹುದಾದ ಸಂಶೋಧನೆ ಎಂದು ತಜ್ಞರು ತಿಳಿಸಿದ್ದಾರೆ

news18-kannada
Updated:June 18, 2021, 8:50 AM IST
Coronavirus: ಮೂರನೇ ಅಲೆ ಮಕ್ಕಳನ್ನು ಬಾಧಿಸದೇ ಇರಬಹುದು, ಅವರು ಸ್ಟ್ರಾಂಗ್ ಇದ್ದಾರೆ !
ಪ್ರಾತಿನಿಧಿಕ ಚಿತ್ರ
  • Share this:
Coronavirus: ಕೊರೊನಾ ವೈರಸ್ ಹಾವಳಿಗೆ ಇದುವರಗೆ ಜಗತ್ತು ತತ್ತರಿಸಿದ್ದೇ ಒಂದು ತೂಕವಾದರೆ ಇನ್ನು ಮೂರನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆ ಎನ್ನುವ ಆತಂಕದ್ದೇ ಮತ್ತೊಂದು ತೂಕ. ಆದರೆ ಪೋಷಕರೆಲ್ಲಾ ಸಮಾಧಾನದ ನಿಟ್ಟುಸಿರು ಬಿಡುವಂಥಾ ಸುದ್ದಿಯೊಂದನ್ನು ತಜ್ಞರು ನೀಡಿದ್ದಾರೆ. ಮೂರನೇ ಅಲೆ ಅದೆಷ್ಟೇ ರಭಸವಾಗಿದ್ದರೂ ಮಕ್ಕಳನ್ನು ಅದು ಹೆಚ್ಚು ಬಾಧಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ದೆಹಲಿ ಏಮ್ಸ್ ಜಂಟಿಯಾಗಿ ಸಂಶೋಧನೆ ನಡೆಸಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ತಪಾಸಣೆ ಮಾಡಲಾಗಿದೆ.

ಮಕ್ಕಳಲ್ಲಿ ದೊಡ್ಡವರಿಗಿಂತ ಉತ್ತಮವಾದ ರೋಗನಿರೋಧಕ ಶಕ್ತಿ ಇರುವುದು ಕಂಡಿಬಂದಿದೆ. ಹಾಗಾಗಿ ಅವರನ್ನು ಸೋಂಕು ಬಾಧಿಸುವ ಅಪಾಯವೂ ಕಡಿಮೆ ಎಂದಿದೆ ತಜ್ಞರ ತಂಡ. ಅತೀ ಹೆಚ್ಚು ಜನಸಂದಣಿ ಇರುವ ದೆಹಲಿ ಕೆಲ ಪ್ರದೇಶಗಳನ್ನೂ ಸೇರಿದಂತೆ ಒಟ್ಟು 4 ರಾಜ್ಯಗಳಿಂದ ಮಾಹಿತಿ ಕಲೆಹಾಕಿ ಈ ಸರ್ವೆ ಮಾಡಲಾಗಿದೆ. ಈಗ ಬಂದಿರುವುದು ಮಧ್ಯಂತರ ವರದಿಯಾಗಿದೆ. ಇನ್ನೂ ಕೆಲ ದಿನಗಳಲ್ಲಿ ಸಂಪೂರ್ಣ ವರದಿ ಬರಲಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.

ಇದನ್ನೂ ಓದಿ: Oral Health: ನೀವು ಬಳಸುವ ಟೂತ್​ ಬ್ರಶ್ ಹೇಗಿರಬೇಕು ಗೊತ್ತಾ? ಸರಿಯಾದ ಬ್ರಶ್ ಆಯ್ಕೆ ಮಾಡೋದು ಹೀಗೆ !

ಈ ವರದಿಯ ಆಧಾರದ ಮೇಲೆ ನಿಧಾನಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆಯೂ ಚಿಂತಿಸಬಹುದು ಎನ್ನಲಾಗಿದೆ. ಇನ್ನು ಈ ಸಂಶೋಧನೆಗೆ ನಗರ ಮತ್ತು ಗ್ರಾಮ ಎರಡೂ ಭಾಗಗಳಿಂದ ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು. ಹಾಗಾಗಿ ಇದು ನಾವು ಖಡಾಖಂಡಿತವಾಗಿ ನಂಬಬಹುದಾದ ಸಂಶೋಧನೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನೇನು ಒಂದೆರಡು ತಿಂಗಳೊಳಗೆ ಮೂರನೇ ಅಲೆ ಅಪ್ಪಳಿಸುವ ಅಪಾಯ ಇರುವುದರಿಂದ ಈ ಸಂಶೋಧನೆ ಬಹಳ ಮುಖ್ಯವಾಗಿದೆ.

ಈಗಾಗಲೇ ದೇಶದ ನಾನಾ ಕಡೆ ಲಾಕ್ ಡೌನ್ ತೆರವಾಗುತ್ತಾ ಇರುವುದರಿಂದ ಸೋಂಕು ಮತ್ತಷ್ಟು ಹರಡುವ ಅಪಾಯ ಇದ್ದೇ ಇದೆ. ಬೇರೆಲ್ಲಕ್ಕಿಂತ ಮಕ್ಕಳನ್ನು ಕೋವಿಡ್ ಬಾಧಿಸುತ್ತೆ ಎನ್ನುವ ವಿಚಾರ ತಿಳಿದಾಗಿನಿಂದ ಎಲ್ಲಾ ರಾಜ್ಯಗಳು ಮಕ್ಕಳ ಚಿಕಿತ್ಸೆಗೆ ಬೇಕಾದ ಸೌಕರ್ಯಗಳನ್ನು ರೆಡಿ ಇಟ್ಟುಕೊಳ್ಳುತ್ತಿವೆ. ಇನ್ನು ಡೆಲ್ಟಾ ಪ್ಲಸ್ ರೂಪಾಂತರಿ ಕೂಡಾ ಆ ವೇಳೆಗೆ ತನ್ನ ಆರ್ಭಟ ಹೆಚ್ಚಿಸುತ್ತದೆ ಎಂದು ತಿಳಿದ ಮೇಲೆ ಆತಂಕ ಹೆಚ್ಚೇ ಆಗಿತ್ತು. ಈಗ ಮಕ್ಕಳನ್ನು ಮೂರನೇ ಅಲೆ ಹೆಚ್ಚು ಬಾಧಿಸುವುದಿಲ್ಲ ಎಂದು ತಿಳಿದು ಪೋಷಕರಂತೂ ಸಮಾಧಾನಗೊಂಡಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by: Soumya KN
First published: June 18, 2021, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories