ಮುಂಬೈ ಯುವತಿ ಪ್ರಕರಣ: ಡಿಎಸ್​​​ಪಿ ಪೊಲೀಸ್​​ ಸಾಹೇಬ್ರ ಪಾತ್ರವೇನು ಗೊತ್ತೇ?

ಎಸ್​​ಪಿಯವರು ನಡೆ ಸರಿ ಎನಿಸಿದರೂ ಆರೋಪಿಯೊಬ್ಬ ಪಾಸ್ ಕೇಳುವಷ್ಟು ಸಡಿಲ ಬೇಡವಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಕ್ರಮಗಳಿಗೆ ಸಾಥ್ ನೀಡುತ್ತಿದೆಯಾ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

news18-kannada
Updated:July 19, 2020, 4:36 PM IST
ಮುಂಬೈ ಯುವತಿ ಪ್ರಕರಣ: ಡಿಎಸ್​​​ಪಿ ಪೊಲೀಸ್​​ ಸಾಹೇಬ್ರ ಪಾತ್ರವೇನು ಗೊತ್ತೇ?
ಪ್ರಾತಿನಿಧಿಕ ಚಿತ್ರ
  • Share this:
ಕೊಪ್ಪಳ(ಜು.19): ಮುಂಬೈ ಮೂಲದ ಯುವತಿ ಭಾಗ್ಯನಗರದಲ್ಲಿ ತಂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಸುಳಿವು ಸಿಕ್ಕಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿಖಾ ಶೇಖ್ ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಬಂದಿದ್ದು, ಪೊಲೀಸರು ಬಳಸಿದ ವಾಹನದಲ್ಲೇ ಎಂಬುದು ದೃಢಪಟ್ಟಿದೆ. ಅಚ್ಚರಿ ಎಂದರೆ ಈ ವಾಹನದಲ್ಲಿ ಪ್ರಕರಣದ ಪ್ರಮುಖ ಆರೋಪಿ ಗುರು ಬಸವರಾಜ ಹೊಳಗುಂದಿ ಜತೆ ಡಿಎಆರ್ ಡಿಎಸ್​​​ಪಿ ಸಾಹೇಬ್ರು ಸಹ ಜೊತೆಗಿದ್ದರು ಎಂಬುದು.

ಅದು ಏಪ್ರಿಲ್ ತಿಂಗಳು. ದೇಶ ಹಾಗೂ ರಾಜ್ಯದ ವಿವಿಧೆಡೆ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲೇ ಪತ್ತೆಯಾಗುತ್ತಿದ್ದವು. ಆದರೂ, ಕೊಪ್ಪಳ ಜಿಲ್ಲೆ ಗ್ರೀನ್ ಜೋನ್​​ನಲ್ಲೇ ಇತ್ತು. ರಾಜ್ಯ ಸೇರಿದಂತೆ ದೇಶದಲ್ಲಿ ಲಾಕ್ಡೌನ್​​ ಕೂಡ ಜಾರಿಯಲ್ಲಿತ್ತು. ಎಲ್ಲೆಡೆ ಚೆಕ್​​ ಪೋಸ್ಟ್​​ಗಳು ಕೂಡ ಹಾಕಲಾಗಿತ್ತು. ಅಂಥ ಸಮಯದಲ್ಲಿ ಕೋವಿಡ್-19 ದೃಢಪಟ್ಟಿರುವ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮುಂಬೈ ಮೂಲದ ಯುವತಿ ಶಿಖಾಳನ್ನು ಕೊಪ್ಪಳಕ್ಕೆ ಕರೆ ತಂದಿದ್ದ ಗುರು ಬಸವರಾಜ ಹೊಳಗುಂದಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ.

ಜಿಲ್ಲಾಧಿಕಾರಿಯಾಗಿದ್ದ ಸುನೀಲ್​​ ಕುಮಾರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ತಹಶೀಲ್ದಾರ್ ಮಜ್ಜಗಿಯವರ ಮೂಲಕ ಪ್ರಕರಣ ದಾಖಲಿಸಿದ್ದರು. ಶಿಖಾ ಶೇಖ್​​ ಕೋವಿಡ್-19 ವರದಿ ನೆಗೆಟಿವ್ ಎಂಬುದು ದೃಢಪಟ್ಟಾಗ ಜಿಲ್ಲೆ ನಿಟ್ಟುಸಿರು ಬಿಟ್ಟಿತ್ತು.

ಒಟ್ಟಾರೆ ಪ್ರಕರಣವನ್ನು ಗಮನಿಸಿದರೆ ಗುರು ಬಸವರಾಜ ಹೊಳಗುಂದಿ ಆರೋಪಿ ಎಂಬುದು ಸತ್ಯ. ಆದರೆ ಆರೋಪಿಗೆ ನೆರೆವು ನೀಡಿದ್ದ ಡಿಎಆರ್ ಡಿಎಸ್​​ಪಿ ಸಾಹೇಬ್ರು ಚಿತ್ರಣದಲ್ಲೇ ಏಕೆ ಬರಲಿಲ್ಲ ಎಂಬುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ.

ಪ್ರಕರಣದ ಕುರಿತು ಆರೋಪಿಗಳ ಹಾಗೂ ಪ್ರತ್ಯಕ್ಷದರ್ಶಿಯ ಹೇಳಿಕೆಗಳು ಲಭ್ಯವಾಗಿವೆ. ಸದ್ಯ ಈ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಇಲಾಖೆ ಖಚಿತಪಡಿಸಬೇಕು. ಲಭ್ಯವಾಗಿರುವ ಹೇಳಿಕೆಗಳ ಪ್ರಕಾರ ಡಿಎಆರ್ ಡಿಎಸ್​​​ಪಿಯವರ ವಾಹನದ ಚಾಲಕ ಪ್ರತ್ಯಕ್ಷದರ್ಶಿ ಆಗಿದ್ದರು.

ಗುರು ಬಸವರಾಜ ಹೊಳಗುಂದಿ ಮತ್ತು ಶಿಖಾ ಶೇಖ್ ಆರೋಪಿಗಳಾಗಿದ್ದಾರೆ. ಮೂವರ ಹೇಳಿಕೆಗಳನ್ನು ನಗರ ಠಾಣೆಯ ಪಿಎಸ್ಐ ಚಂದ್ರಪ್ಪ ಕಂಪ್ಯೂಟರ್ ಮೂಲಕ ದಾಖಲಿಸಿದ್ದಾರೆ. ಮೂವರ ಹೇಳಿಕೆಗಳಲ್ಲೂ ಕೊಂಚ ಮಟ್ಟಿಗೆ ವ್ಯತ್ಯಾಸಗಳಿವೆ.

ಶಿಖಾ ಶೇಖ್ ಮುಂಬೈನಿಂದ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಕಾಲ ತಂಗಿದ್ದು, ನಂತರ ಗುರು ಬಸವರಾಜ ಹೊಳಗುಂದಿ ಮೂಲಕ ಪೊಲೀಸರು ಬಳಸುತ್ತಿದ್ದ ವಾಹನದಲ್ಲೇ ಚೆಕ್​​ ಪೋಸ್ಟ್​​​ಗಳನ್ನು ದಾಟಿ ಭಾಗ್ಯ ನಗರಕ್ಕೆ ಬಂದದ್ದು ಮಾತ್ರ ಹೇಳಿಕೆಗಳ ಸಾರಾಂಶದಲ್ಲಿದೆ.ಇಡೀ ಪ್ರಕರಣದಲ್ಲಿ ಡಿಎಆರ್ ಡಿಎಸ್​​​ಪಿಯವರು ಇದ್ದರೂ ಎಲ್ಲೂ ಸಹ ಚಿತ್ರದಲ್ಲಿ ಬಂದಿರಲಿಲ್ಲ. ಮಾರನೇ ದಿನವೇ ಎಸ್ಪಿಯವರನ್ನು ಭೇಟಿಯಾಗಿ ಮುಂಬೈಗೆ ಪಾಸ್ ಕೇಳಲಾಗಿದೆ. ಎಸ್​​ಪಿಯವರು ಮೊದಲು ಯುವತಿಯನ್ನು ಕ್ವಾರಂಟೈನ್​​ಗೆ ಒಳಪಡಿಸುವಂತೆ ತಾಖೀತು ಮಾಡಿದ್ದಾರೆ.

ಇದನ್ನೂ ಓದಿ: ಜು. 21ರಂದು ರೈತ ಸಂಘ, ಹಸಿರು ಸೇನೆ ಸದಸ್ಯರಿಂದ ಹಾವೇರಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

ಎಸ್​​ಪಿಯವರು ನಡೆ ಸರಿ ಎನಿಸಿದರೂ ಆರೋಪಿಯೊಬ್ಬ ಪಾಸ್ ಕೇಳುವಷ್ಟು ಸಡಿಲ ಬೇಡವಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಕ್ರಮಗಳಿಗೆ ಸಾಥ್ ನೀಡುತ್ತಿದೆಯಾ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
Published by: Ganesh Nachikethu
First published: July 19, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading