ಕೋವಿಡ್ -19 ನಿಂದ ಚೇತರಿಸಿಕೊಂಡ ಮಧುಮೇಹಿಗಳ ಆಹಾರ ಪದ್ಧತಿ ಹೇಗಿರಬೇಕು?

ಕೋವಿಡ್ -19 ನಿಂದ ಗುಣಮುಖರಾಗುವುದು ಒಂದು ದೀರ್ಘ ಅವಧಿಯ ಪ್ರಕ್ರಿಯೆ. ಆಹಾರ ತಜ್ಞರು ಶಿಫಾರಸ್ಸು ಮಾಡಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕವಾದುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  “ಒಂದು ಸರಿಯಾದ ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುವುದರಿಂದ ಅವರು ಬೇಗ ಚೇತರಿಸಿಕೊಳ್ಳಬಹುದು ಮತ್ತು ಇತರೇ ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ಆಹಾರ ತಜ್ಞೆ ಸುಜಾತ ಶರ್ಮಾ.


  ಕೋವಿಡ್ -19 ನಿಂದ ಗುಣಮುಖರಾಗುವುದು ಒಂದು ದೀರ್ಘ ಅವಧಿಯ ಪ್ರಕ್ರಿಯೆ. ಆಹಾರ ತಜ್ಞರು ಶಿಫಾರಸ್ಸು ಮಾಡಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕವಾದುದು.“ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ಮಧುಮೇಹಿಗಳು ಸರಿಯಾದ ಆಹಾರ ಕ್ರಮವನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ ಒಂದು ಸರಿಯಾದ ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುವುದರಿಂದ ಅವರು ಬೇಗ ಚೇತರಿಸಿಕೊಳ್ಳಬಹುದು ಮತ್ತು ಇತರ ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ಬೀಟ್ ಓ ನ ಆಹಾರ ತಜ್ಞೆ ಸುಜಾತ ಶರ್ಮಾ.


  ಬೆಳಗ್ಗಿನ ತಿಂಡಿ
  ಬೆಳಗ್ಗಿನ ತಿಂಡಿ ನಮ್ಮ ಆಹಾರ ಕ್ರಮದ ಮುಖ್ಯ ಭಾಗ. ಬೆಳಗ್ಗೆದ್ದ ಎರಡು ಗಂಟೆಯ ಒಳಗೆ, ಅಂದರೆ 8 ರಿಂದ 9 ಗಂಟೆಯ ಒಳಗೆ ತಿಂಡಿ ತಿನ್ನಿ. ಇದು ಗ್ಲುಕೋಸ್ ಪ್ರಮಾಣವನ್ನು ಸಮವಾಗಿಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಮ್ಮ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಕೋವಿಡ್‍ನಿಂದ ಗುಣಮುಖರಾಗುತ್ತಿರುವ ಮಧುಮೇಹಿಗಳು ಬೆಳಗ್ಗಿನ ಉಪಹಾರಕ್ಕಾಗಿ ಈ ಕೆಳಗಿನ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು: ತರಕಾರಿ ಹಾಕಿದ ಕಡಲೇ ಹಿಟ್ಟಿನ ದೋಸೆ ಅಥವಾ ತರಕಾರಿ ಹೆಸರು ಕಾಳಿನ ದೋಸೆ ಅಥವಾ ಬಹು ಧಾನ್ಯಗಳಿಂದ ಮಾಡಿದ ತುಂಡು ದೋಸೆ ಮತ್ತು ಒಂದು ಬೌಲ್ ಕಿನೋವಾ ಅಥವಾ ಬೇಯಿಸಿದ ಕಡಲೆ ಮತ್ತು ತರಕಾರಿಗಳುಳ್ಳ ಹೆಸರು ಕಾಳಿನ ಚಾಟ್ ಅಥವಾ ಎರಡು ಮೊಟ್ಟೆಯ ಬಿಳಿ ಭಾಗದ ಆಮ್ಲೆಟ್. ಇವುಗಳ ಜೊತೆಗೆ ಮಜ್ಜಿಗೆಯನ್ನು ಕೂಡ ಕುಡಿಯಬಹುದು.


  ಬೆಳಗ್ಗೆ 11 .30 ಗೆ ಉಪಹಾರ
  ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಉಪಹಾರದ ನಡುವಿನ ನಡುವೆ 11.30 ಗಂಟೆಗೆ ಏನಾದರು ಪೋಷಕಾಂಶಯುಕ್ತ ಆಹಾರ ತಿನ್ನಿ. ಸುಮಾರು 100 ಗ್ರಾಂ ನಷ್ಟು ಹಣ್ಣುಗಳು (ಸೇಬು/ಪೇರಳೆ/ಸ್ಟ್ರಾಬೆರಿಗಳು/ಪಪ್ಪಾಯ/ಕಲ್ಲಂಗಡಿ ಹಣ್ಣು) ಅಥವಾ ನಟ್ಸ್ ತಿನ್ನುವುದು ಉತ್ತಮ.
  .
  ಮಧ್ಯಾಹ್ನ ಉಪಹಾರ
  ಮಧ್ಯಾಹ್ನ ಸುಮಾರು 1.30 -2.30 ಗಂಟೆಯ ಸುಮಾರಿಗೆ ಊಟ ಸೇವಿಸಿ. ಒಂದು ಪ್ಲೇಟ್ ಸಲಾಡ್, ಒಂದು ಬೌಲ್ ಹಸಿರು ತರಕಾರಿ/ದಾಲ್ ಅಥವಾ ಮನೆಯಲ್ಲೇ ಮಾಡಿದ ಚಿಕನ್ , ಕಡಿಮೆ ಕೊಬ್ಬುಯುಕ್ತ ಮೊಸರು ಅಥವಾ ಸೌತೆಕಾಯಿ ಮೊಸರು ಬಜ್ಜಿ ಮತ್ತು ಬಹು ಧಾನ್ಯ ಚಪಾತಿ(1 ಅಥವಾ 2) ಅಥವಾ ಒಂದು ಬೌಲ್ ಕೆಂಪಕ್ಕಿ ಅನ್ನ.


  ಸಂಜೆಯ ಉಪಹಾರ
  ಸಂಜೆ 4.30 ರಿಂದ 5.30 ರ ನಡುವೆ ಸಂಜೆಯ ಉಪಹಾರ ಸೇವಿಸುವ ಮೂಲಕ ದೇಹಕ್ಕೆ ಒಂದಿಷ್ಟು ಶಕ್ತಿ ನೀಡಬೇಕು. ಒಂದು ಲೋಟ ಸಕ್ಕರೆ ಇಲ್ಲದ ಚಹಾ /ಮಜ್ಜಿಗೆ ಅಥವಾ ಹುರಿದ ತಾವರೆ ಬೀಜಗಳು ಅಥವಾ ಕಡಲೆ ಅಥವಾ ಹುರಿದ/ಗ್ರಿಲ್ ಮಾಡಿದ/ಟೋಸ್ಟ್ ಮಾಡಿದ ಪನೀರ್ ತುಂಡುಗಳು ಅಥವಾ ಚಿಕನ್ ಸೂಪ್ ಅಥವಾ ಬಹುಧಾನ್ಯದ ಬಿಸ್ಕಿಟ್  ಹಾಕಿದ ಮೊಸರನ್ನು ಸೇವಿಸಬಹುದು.


  ರಾತ್ರಿಯ ಊಟ
  ರಾತ್ರಿಯ ಊಟ ತುಂಬಾ ಅಗತ್ಯ. ರಾತ್ರಿಯ ಊಟ 7.30 ರಿಂದ 8.30ರ ಒಳಗೆ ಮುಗಿದರೆ ಒಳ್ಳೆಯದು. ಒಂದು ಪ್ಲೇಟ್ ಸಲಾಡ್, ಒಂದು ಬೌಲ್ ಹಸಿರು ತರಕಾರಿ ಪಲ್ಯ/ಪನೀರ್ ಪಲ್ಯ/ ಮನೆಯಲ್ಲೇ ತಯಾರಿಸಿದ ಚಿಕನ್/ ಮೀನಿನ ಸಾಂಬಾರು ಮತ್ತು 50-100 ಗ್ರಾಂ ಮೊಸರು, ಹೆಸರು ಕಾಳಿನ ಕಿಚಡಿ/ತರಕಾರಿ ಓಟ್ಸ್ ಕಿಚಡಿ ಅಥವಾ ಒಂದೆರಡು ತುಂಡು ಬಹು ಧಾನ್ಯದ ಚಪಾತಿ/ಜೋಳದ ಚಪಾತಿ/ ಸಜ್ಜೆ ಚಪಾತಿ ರಾತ್ರಿಯ ಊಟಕ್ಕೆ ಉತ್ತಮ.


  ಇದನ್ನೂ ಓದಿ: ವಿಜ್ಞಾನಿ ನಂಬಿ ನಾರಾಯಣನ್ ಪ್ರಕರಣ: ಡಿ ಕೆ ಜೈನ್ ಸಮಿತಿ ವಿಸರ್ಜಿಸಿದ ಸುಪ್ರೀಂಕೋರ್ಟ್

  ರಾತ್ರಿ ಊಟದ ನಂತರದ ತಿನಿಸು
  ರಾತ್ರಿಯ ಊಟದ ನಂತರ ಹಸಿವಾದರೆ ಒಂದು ಲೋಟ ಸ್ಕಿಮ್‍ಡ್ / ಟೋನ್‍ಡ್ ಹಾಲು ಕುಡಿಯಬಹುದು.ಔಷಧಿ ಮತ್ತು ವ್ಯಾಯಾಮದ ಜೊತೆಗೆ ಈ ಆಹಾರ ಕ್ರಮವನ್ನು ಅನುಸರಿಸುವುದರಿಂದ ಕೋವಿಡ್ -19 ನಿಂದ ಚೇತರಿಸಿಕೊಳ್ಳುವ ಮಧುಮೇಹಿಗಳಿಗೆ ವಿವಿಧ ಆರೋಗ್ಯದ ಆಪಾಯಗಳನ್ನು ಕಡಿಮೆ ಮಾಡಬಹುದು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: