ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇಂದು ನಿನ್ನೆಯದಲ್ಲ. ಶತ ಶತಮಾನಗಳಿಂದಲೂ ಭಾರತವನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಲೇ ಇದೆ. ಎಷ್ಟೇಷ್ಟೋ ಯೋಜನೆಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನ ನಡೆದೇ ಇದೆ.
ಇದೀಗ ಒಂದು ವರದಿಯ ಪ್ರಕಾರ ಭಾರತದಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಜುಲೈ 25ರೊಳಗೆ ನಿರುದ್ಯೋಗ ಪ್ರಮಾಣ ಶೇಕಡಾ 6.75ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ಆರ್ಥಿಕ ಮೇಲ್ವಿಚಾರಣಾ ಕೇಂದ್ರ (ಸಿಎಮ್ಐಇ) ವರದಿ ಮಾಡಿದೆ.
ಒಂದು ವಾರದ ಕೆಳಗೆ ನಿರುದ್ಯೋಗ ಪ್ರಮಾಣ ಗ್ರಾಮಾಂತರ ಪ್ರದೇಶಗಳಲ್ಲಿ ಶೇಕಡಾ 5.1ರಷ್ಟಿದೆ ಎಂದು ಹೇಳಿದೆ. ಹೋಲಿಸಿದರೆ, ಅದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಉದ್ಯೋಗ ಪ್ರಮಾಣದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಜುಲೈ 25ರ ಕೊನೆಗೊಂಡ ವಾರದಲ್ಲಿ ನಗರ ಪ್ರದೇಶದ ನಿರುದ್ಯೋಗವು ಶೇಕಡಾ 8.01 ಕ್ಕೆ ಏರಿಕೆಯಾಗಿದ್ದು, ವಾರದ ಹಿಂದೆ ಶೇಕಡಾ 7.94 ರಷ್ಟಿತ್ತು.
ಆದಾಗ್ಯೂ, ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳ ಹೊರತಾಗಿಯೂ ನಗರ ನಿರುದ್ಯೋಗ ದರವು ಗ್ರಾಮೀಣ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಈ ಸಮಯದಲ್ಲಿ, ರಾಷ್ಟ್ರೀಯ ನಿರುದ್ಯೋಗ ದರವು ಶೇಕಡಾ 7.14 ರಷ್ಟಿದೆ, ಇದು ಹಿಂದಿನ ವಾರದ ಅವಧಿಯಲ್ಲಿ 5.98 ರಷ್ಟಿತ್ತು.
ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ ಒಟ್ಟಾರೆ ನಿರುದ್ಯೋಗ ದರವು ಹೆಚ್ಚಾಗಿದ್ದರೆ, ಕೋವಿಡ್ -19 ರ ಎರಡನೇ ಅಲೆಯ ಮಧ್ಯೆ ನಿರುದ್ಯೋಗ ತೀವ್ರವಾಗಿ ಹೆಚ್ಚಳ ಕಂಡಿತ್ತು. ಇದೀಗ ಹಿಂದಿನ ಮೂರು ತಿಂಗಳುಗಳಿಗಿಂತ ಪರಿಸ್ಥಿತಿ ಉತ್ತಮವಾಗಿದೆ.
ಭಾರತದ ನಗರ ಪ್ರದೇಶದಲ್ಲಿ ಜುಲೈ ತಿಂಗಳ ಪ್ರಾರಂಭದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡಾ 9ಕ್ಕಿಂತ ಕಡಿಮೆ ಇತ್ತು. ಇನ್ನು ರಾಷ್ಟ್ರಮಟ್ಟದಲ್ಲಿ ಶೇಕಡಾ 8ಕ್ಕಿಂತಲೂ ಕಡಿಮೆಯಾಗಿದೆ.
ಜೂನ್ನಲ್ಲಿ ಮಾಸಿಕ ರಾಷ್ಟ್ರೀಯ ನಿರುದ್ಯೋಗ ದರವು ಶೇಕಡಾ 9.17 ರಷ್ಟಿದ್ದರೆ, ನಗರ ಭಾರತದಲ್ಲಿ ಇದು 10.07 ಮತ್ತು ಗ್ರಾಮೀಣ ಭಾರತದಲ್ಲಿ ಶೇಕಡಾ 8.75 ರಷ್ಟಿತ್ತು. ಮುಂಗಾರು ಪ್ರಗತಿಯೊಂದಿಗೆ ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾದ ಕಾರಣ ನಗರ ಮತ್ತು ಗ್ರಾಮೀಣ ಉದ್ಯೋಗವನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ ಎಂದು ಗಮನಿಸಬಹುದು.
ಮೇ ತಿಂಗಳಿನಿಂದ ಜಾರಿಯಲ್ಲಿರುವ ಲಾಕ್ಡೌನ್ನ ನೇರ ಹೊಡೆತ ಬಿದ್ದಿರುವುದು ಅಸಂಘಟಿತ ವಲಯಗಳ ಮೇಲೆ. ಮೇ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇಕಡಾ 5.3ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇಕಡಾ 2ರಷ್ಟು ಇತ್ತು. ಇದೀಗ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್ಡೌನ್ ಆದ ಕಾರಣ ನಿರುದ್ಯೋಗ ಪ್ರಮಾಣ ಶೇಕಡಾ 5.3ಕ್ಕೆ ಏರಿಕೆಯಾಗಿದೆ.
ಕೋವಿಡ್ನ ಎರಡನೇ ಅಲೆಯು ಆರ್ಥಿಕತೆಯ ಮೇಲೆ ಅಷ್ಟೊಂದು ಭಯಾನಕ ಪರಿಣಾಮ ಬೀರಲಿಲ್ಲ. ಇದು ಅನೌಪಚಾರಿಕ ವಲಯದ ಮೇಲೆ ತೀವ್ರ ಪರಿಣಾಮ ಬೀರಿತು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ಆದರೆ ಜೂನ್ ತಿಂಗಳಿನಿಂದ ಆರ್ಥಿಕ ವಲಯ ಕೊಂಚ ಚೇತರಿಸಿಕೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ