HOME » NEWS » Coronavirus-latest-news » WHAT HAPPENS WHEN CHILDHOOD MEMORY LINKS GO AWAY RH

ಭಾಗ-4 | ಬಾಲ್ಯದ ಸ್ಮೃತಿ ಕೊಂಡಿಗಳು ಕಳಚಿದಾಗ ಏನಾಗಬಹುದು ಬಲ್ಲಿರಾ?

ಒಮ್ಮೆ ಆತ ವಿದೇಶದ ಪ್ರವಾಸದಲ್ಲಿದ್ದಾಗ ದೂರದ ನೆಂಟರೊಬ್ಬರ ಮನೆಯಲ್ಲಿ ಒಂದೆರಡು ವಾರ ಇರಬೇಕಾಗಿ ಬಂತು. ಈ ಸಮಯದಲ್ಲಿ ಹಳೆಯ ಸಂಬಂಧಗಳು, ಅದಕ್ಕೆ ಸಂಬಂಧಿಸಿದ ಚಿತ್ರ ಸಂಗ್ರಹ ಮತ್ತು ಹಳೆಯ ಮುೂವಿ ಕ್ಯಾಮರಾದಲ್ಲಿದ್ದ ಚಿತ್ರಗಳನ್ನು ವೀಕ್ಷಿಸುತ್ತಿದ್ದಾಗ ಇವರಿದ್ದ ಮನೆಯ ದೃಶ್ಯಾವಳಿಗಳೂ ಕಂಡುಬಂದವು. ಅವುಗಳನ್ನು ವೀಕ್ಷಿಸುತ್ತಿದ್ದಾಗ ಯಾವುದೋ ಮಾಸಿದ ನೆನಪೊಂದು ತಕ್ಷಣದಲ್ಲಿ ಸ್ಪಷ್ಟವಾಗಿರುವಂತೆ ಭಾಸವಾಯಿತು.

news18-kannada
Updated:April 30, 2020, 8:50 AM IST
ಭಾಗ-4 | ಬಾಲ್ಯದ ಸ್ಮೃತಿ ಕೊಂಡಿಗಳು ಕಳಚಿದಾಗ ಏನಾಗಬಹುದು ಬಲ್ಲಿರಾ?
ಡಾ. ಆಚಾರ್ಯ ಶ್ರೀಧರ.
  • Share this:
ಕೆಲವರಿಗೆ ನೆನಪಿನ ಶಕ್ತಿ ತುಂಬಾ ಉತ್ತಮವಾಗಿರುತ್ತದೆ. ಹಳೆಯ ವಿಷಯಗಳು, ಮುಖಗಳು ಘಟನೆಗಳನ್ನು ಅದ್ಭುತವಾಗಿ ವಿವರಿಸುತ್ತಾರಷ್ಟೇ ಅಲ್ಲದೆಯೇ ಅದು ನಿಖರವಾಗಿಯೂ ಇರುವುದು. ಅದೆಷ್ಟೋ ಸಲ ಇದರಿಂದಲೇ ತಳಮಳಗಳೂ ಸಾಧ್ಯ. ಇಂತಹದೊಂದು ಪ್ರಸಂಗದ ವಿವರಣೆ ಇಲ್ಲಿದೆ:

ವೃತ್ತಿ ಸಂಬಂಧಿತ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಬಂದ ವ್ಯಕ್ತಿಯೊಬ್ಬರು ಆ ಮಾತು ಈ ಮಾತು ಆಡುತ್ತಾ ಪ್ರಸ್ತಾಪಿಸಿದ ಸಂಗತಿಯೊಂದು ನನ್ನ ಗಮನ ಸೆಳೆಯಿತು. ಅವರಿಗೆ ಸದಾ ಕಾಡಿಸುವ ಭಾವನೆಯೊಂದು ಮನಸ್ಸಿಗೆ ಕಸಿವಿಸಿ ಉಂಟು ಮಾಡುವಂತಹದ್ದಾಗಿತ್ತು. ಮೂವತ್ತರ ಆಸುಪಾಸಿನ ಈ ವ್ಯಕ್ತಿ ತನ್ನದೇ ಮನೆ ಪ್ರವೇಶಿಸುತ್ತಿದ್ದಂತೆಯೇ ಮನದಾಳದಲ್ಲಿ ಮೂಡುತ್ತಿದ್ದ ಭಾವನೆ ಎಂದರೆ-ಈ ಮನೆ ನನ್ನದಲ್ಲ- ಎನ್ನುವ ಹಾಗೆ. ಈ ಭಾವನೆಯು ಸಣ್ಣ ವಯಸ್ಸಿನಲ್ಲಿ ಯಾವಾಗಲೋ ಬಂದಿದ್ದು ಈಗಲೂ ಹಾಗೆಯೇ ಮುಂದುವರೆದಿತ್ತು.

ಇದರ ಬಗ್ಗೆ ಅಪ್ಪ-ಅಮ್ಮ, ಅಣ್ಣ,ತಂಗಿ ಚಿಕ್ಕಪ್ಪಂದಿರೊಂದಿಗೆ ಹಂಚಿಕೊಂಡಾಗ ಅಪಹಾಸ್ಯಕ್ಕೆ ಗುರಿಯಾಗಿದ್ದೇ ಹೆಚ್ಚು. ಚಿಕ್ಕಪ್ಪ, ದೊಡ್ಡಮ್ಮಂದಿರ ಮಕ್ಕಳಿಗಂತೂ ಕೊಂಚ ಮಾನಸಿಕ ತೊಂದರೆ ಇರುವುದರ ಸೂಚನೆ ಎನ್ನುವ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಏಕೆಂದರೆ ನನ್ನಂತೆಯೇ ಅವರುಗಳೂ ಅದೇ ಮನೆಯಲ್ಲಿ ಹುಟ್ಟಿದವರು. ಹೀಗಾಗಿ ಈ ಮನೆಯ ಆವರಣದ ಕತೆ, ವಿದ್ಯಮಾನಗಳೆಲ್ಲವೂ ಎಲ್ಲರಿಗೂ ತಿಳಿದಿದ್ದಂತಹದ್ದೇ. ಇಷ್ಟೆಲ್ಲಾ ವಿಷಯಗಳ ನಡುವೆಯೂ ಆತನ ಮನಸಿನಲ್ಲಿ ಸ್ವಂತ ಮನೆಯ ಬಗ್ಗೆ ಇದ್ದ ಅಪರಿಚಿತದ ಭಾವನೆ ಇಳಿದಿರಲಿಲ್ಲ, ಬದಲಾಗಿರಲಿಲ್ಲ.

ಒಮ್ಮೆ ಆತ ವಿದೇಶದ ಪ್ರವಾಸದಲ್ಲಿದ್ದಾಗ ದೂರದ ನೆಂಟರೊಬ್ಬರ ಮನೆಯಲ್ಲಿ ಒಂದೆರಡು ವಾರ ಇರಬೇಕಾಗಿ ಬಂತು. ಈ ಸಮಯದಲ್ಲಿ ಹಳೆಯ ಸಂಬಂಧಗಳು, ಅದಕ್ಕೆ ಸಂಬಂಧಿಸಿದ ಚಿತ್ರ ಸಂಗ್ರಹ ಮತ್ತು ಹಳೆಯ ಮುೂವಿ ಕ್ಯಾಮರಾದಲ್ಲಿದ್ದ ಚಿತ್ರಗಳನ್ನು ವೀಕ್ಷಿಸುತ್ತಿದ್ದಾಗ ಇವರಿದ್ದ ಮನೆಯ ದೃಶ್ಯಾವಳಿಗಳೂ ಕಂಡುಬಂದವು. ಅವುಗಳನ್ನು ವೀಕ್ಷಿಸುತ್ತಿದ್ದಾಗ ಯಾವುದೋ ಮಾಸಿದ ನೆನಪೊಂದು ತಕ್ಷಣದಲ್ಲಿ ಸ್ಪಷ್ಟವಾಗಿರುವಂತೆ ಭಾಸವಾಯಿತು. ಹಲವಾರು ಸಲ ಅದೇ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ನೆಂಟರನ್ನು ಆ ದೃಶ್ಯಾವಳಿಗಳ ಬಗ್ಗೆ ಕೇಳಿದಾಗ ಅವರು ನೀಡಿದ ವಿವರಣೆಯೂ ಈತನ ಮನದಾಳದಲ್ಲಿದ್ದ -ಈ ಮನೆ ನನ್ನದಲ್ಲ ಎನ್ನುವ- ಭಾವ ಕ್ಷಣದಲ್ಲಿ ಬದಲಾಗಿತು:

ಈತ ಮೂರು ವರ್ಷದವನಾಗಿದ್ದಾಗ ಆಸ್ತಿ ವಿಭಜನೆಯಾಗಿತ್ತು. ಇವನಿದ್ದ ಕೋಣೆಯು ಬೇರೆಯರ ಪಾಲಿಗೆ ಹೋಗಿತ್ತು, ತಮ್ಮ ಮಗುವು ಹೊಸ ಜಾಗಕ್ಕೆ ಅಷ್ಟೊಂದು ಸುಲಭವಾಗಿ ಹೊಂದಿಕೊಳ್ಳುವುದಿಲ್ಲ ಎನ್ನುವುದು ಪೋಷಕರಿಗೆ ತಿಳಿದಿದ್ದರಿಂದ ಮಗುವಿಗೆ ಪರಿಚಯವಿದ್ದ ಕೋಣೆಯಂತೆಯೇ ಹೊಸ ಕೋಣೆಯನ್ನು ಸಕಲ ರೀತಿಯಲ್ಲಿ ಸಿದ್ಧಪಡಿಸಿದ್ದರಂತೆ… ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಆತನ ಮನಸಿನಲ್ಲಿ ಎಂತಹದ್ದೋ ಹೊಸ ನೆಮ್ಮದಿ ಕಾಣಿಸಿಕೊಂಡಿತ್ತು. 

ಹೀಗೆ, ನಮ್ಮ ಮನದಾಳದಲ್ಲಿನ ಭಾವುಕತೆಯು ಹೊರಬಾರಲಾರದೇ ವಿಲವಿಲನೆ ಒದ್ದಾಡುವಂತೆ ಮಾಡುವುದಕ್ಕೆ ಮಾಸಿದ ಸ್ಮೃತಿ ಕೊಂಡಿಗಳೂ ಕಾರಣವಾಗಿರಬಲ್ಲದು.

ಇದನ್ನು ಓದಿ: ಭಾಗ- 3 | ನೀವು ಹುಟ್ಟಾ ದ್ವಿಭಾಷಿಗರೆ? ಹಾಗಿದ್ದರೇ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ಎಂತಹದಿರಬಹುದು ಗೊತ್ತಾ?ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.bruhanmati.com/
Youtube Video

 
First published: April 30, 2020, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories