ಕೊರೊನಾ (Corona) ಒಂದು ಹಾಗೂ ಎರಡನೇ ಅಲೆಯಿಂದ (Wave) ಸಂಕಷ್ಟಕ್ಕೆ(Problem) ಈಡಾಗಿದ್ದ ಜನರು, ಸದ್ಯ ಇನ್ನೇನು ಕೊರೊನಾ ಹಾವಳಿ ಮುಗೀತು ಎಂದುಕೊಳ್ಳುತ್ತಿರುವಾಗಲೇ ಹೊಸ ರೂಪ ಪಡೆದು ಕೊರೊನಾ ಮಹಾಮಾರಿ ಎಂಟ್ರಿಯಾಗಿ ಎಲ್ಲಾ ಕಡೆ ಆರ್ಭಟ ಮಾಡುತ್ತಿದೆ. ದಕ್ಷಿಣ ಆಫ್ರಿಕಾದಿಂದ (South Africa) ಒಮಿಕ್ರಾನ್ (Omicron) ಆಗಿ ಬಂದಿರುವ ಕೊರೋನಾ ಮಹಾಮಾರಿ ವೈರಸ್ (Virus) ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಬೆಚ್ಚಿಬೀಳಿಸಿದೆ. ಭಾರತದಲ್ಲೂ ಇನ್ನೂರಕ್ಕೂ ಅಧಿಕ ಜನರಿಗೆ ಆವರಿಸಿಕೊಂಡಿರುವ ಮಹಾಮಾರಿ, ತನ್ನ ಕಬಂಧ ಬಾಹುಗಳನ್ನು ಇನ್ನೂ ಸಹ ಚಾಚುತ್ತಲೇ ಇದೆ.. ಹೀಗಾಗಿ ದೇಶದಲ್ಲೆಡೆ ಕಟ್ಟೆಚ್ಚರ ತೆಗೆದುಕೊಳ್ಳಲಾಗಿದೆ ಸದ್ದಿಲ್ಲದೇ ವಕ್ಕರಿಸಿ ಕೊಳ್ಳುತ್ತಿರುವ ಒಮಿಕ್ರಾನ್ ವೈರಸ್ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.. ಸ್ವಲ್ಪ ಜ್ವರ ಬಂದರೂ ಸಾಕು ಎಲ್ಲಿ ಒಮಿಕ್ರಾನ್ ಬಂದಿದೆ ಎಂದು ಭಯಪಡುತ್ತಿದ್ದಾರೆ.. ಜನರ ಈ ಭಯ ಮತ್ತಷ್ಟು ಹೆಚ್ಚು ಮಾಡುವಂತೆ, ರಾತ್ರಿವೇಳೆಯಲ್ಲಿ ನಮಗೆ ಈ ರೀತಿ ಆದರೆ ಅದು ಒಮಿಕ್ರಾನ್ ರೋಗದ ಲಕ್ಷಣಗಳು ಇರಬಹುದು ಎಂದು ಹೇಳಲಾಗುತ್ತಿದೆ.
ಡೆಲ್ಟಾ ವೇರಿಯಂಟ್ಗಿಂತಲೂ ಮೂರು ಪಟ್ಟು ವೇಗವಾಗಿ ಹರಡುತ್ತಿರುವ ಒಮಿಕ್ರಾನ್
24 ನವೆಂಬರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಕರೋನಾ, ಓಮಿಕ್ರಾನ್ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಯಿತು. ದಕ್ಷಿಣ ಆಫ್ರಿಕಾದ ಹೊರತಾಗಿ, ಈ ರೂಪಾಂತರವನ್ನು ಯುನೈಟೆಡ್ ಕಿಂಗ್ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್ನಲ್ಲಿಯೂ ಗುರುತಿಸಲಾಗಿದೆ. ಜೊತೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ವೈರಸ್ ಅಬ್ಬರಿಸುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್ ಪ್ರಕರಣ; ನಾಳೆ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಭೆ
ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅದು ತೀವ್ರವಾಗಿ ಹರಡಬಲ್ಲುದಾದ್ದರಿಂದ ವೇಗವಾಗಿ ವ್ಯಾಪಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಈ ಹಿಂದೆ ಕಾಣಿಸಿಕೊಂಡಿರುವ ಡೆಲ್ಟಾ ವೇರಿಯಂಟ್ಗಿಂತಲೂ ಒಮಿಕ್ರಾನ್ ಹರಡುವಿಕೆ ಮೂರು ಪಟ್ಟು ಅಧಿಕ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.. ಇದರ ನಡುವೆ ಒಮಿಕ್ರೋನ್ ತವರು ದಕ್ಷಿಣ ಆಫ್ರಿಕಾದ ವೈದ್ಯರು ಈ ವೈರಸ್ನ ಲಕ್ಷಣಗಳ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಒಮಿಕ್ರಾನ್ ಅಸ್ತಿತ್ವವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರಾದ ಡಾ.ಆಯಂಜೆಲಿಕ್ ಕೊಯೆಟ್ಜೆ ಅವರು ನೀಡಿರುವ ಮಾಹಿತಿ ಈಗ ಜನರನ್ನು ಬೆಚ್ಚಿಬೀಳಿಸಿದೆ..
ವಿಬಿನ್ನ ರೀತಿಯ ರೋಗ ಲಕ್ಷಣ ಹೊಂದಿರುವ ಒಮಿಕ್ರಾನ್
ಕೊರೊನಾ ಹಾಗೂ ಒಮಿಕ್ರಾನ್ ರೋಗಲಕ್ಷಣಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.. ಕೊರೋನಾ ಮಹಾಮಾರಿ ಸಂಪೂರ್ಣ ಜ್ವರದ ರೀತಿಯ ಲಕ್ಷಣಗಳನ್ನು ಹೊಂದಿದ್ದು, ವಾಸನಾ ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತಿತ್ತು.. ಕೆಲವರಿಗೆ ರುಚಿ ಸಹ ಗೊತ್ತು ಆಗುತ್ತಿರಲಿಲ್ಲ.. ಆದರೆ ಒಮಿಕ್ರಾನ್ ತೀರಾ ವಿಶಿಷ್ಟವಾದ ರೋಗಲಕ್ಷಣಗಳನ್ನು ಹೊಂದಿದೆ. ಸಣ್ಣಜ್ವರ, ಸುಸ್ತು, ಗಂಟಲು ಕೆರೆತವೂ ಇರಬಹುದು. ಆದ್ರೆ ಒಮಿಕ್ರಾನ್ ವೈರಸ್ನ ಸಾಮಾನ್ಯ ಲಕ್ಷಣ. ಈಗ ನಾವು ಹೇಳುವ ಹೊಸ ಲಕ್ಷಣ ನೀವು ರಾತ್ರಿ ನಿದ್ರೆ ಮಾಡುವ ಮುನ್ನ ನಿಮ್ಮನ್ನು ಬೆಚ್ಚಿಬೀಳಿಸಿದೆ.
ರಾತ್ರಿಯ ವೇಳೆ ಕಾಣಿಸಿಕೊಳ್ಳಲಿದೆ ಒಮಿಕ್ರಾನ್ ರೋಗದ ಲಕ್ಷಣಗಳು
ಕೊರೊನಾಗಿಂತ ವಿಭಿನ್ನ ಬಗೆಯ ರೋಗ ಲಕ್ಷಣಗಳನ್ನು ಹೊಂದಿರುವ ಒಮಿಕ್ರಾನ್ ಹೊಸದಾಗಿ ಕಾಟ ಕೊಡುತ್ತಿದೆ. ಅದ್ರಲ್ಲೂ ಬಹುಮುಖ್ಯವಾಗಿ ಒಮಿಕ್ರಾನ್ ವೈರಸ್ ವಕ್ಕರಿಸಿಕೊಂಡವರಿಗೆ ರಾತ್ರಿಯ ಹೊತ್ತಿನಲ್ಲಿ ವಿಪರೀತ ಮೈಕೈ ನೋವು ಬಂದು ಬೆವರುವುದು. ಇದರ ಜೊತೆಗೆ ಉಸಿರಾಟದ ಸಮಸ್ಯೆ, ಎದೆನೋವು, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿತ ಕಂಡು ಬರಲಿದೆಯಂತೆ.ಹೀಗಾಗಿ ರಾತ್ರಿ ವೇಳೆ ಈ ರೀತಿಯ ಅನುಭವ ಯಾರಿಗಾದರೂ ಆಗುತ್ತಿದ್ದರೆ ತಕ್ಷಣವೇ ಮುಂಜಾಗ್ರತೆ ವಹಿಸಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ,ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.
ಇದನ್ನೂ ಓದಿ: ಕ್ರಿಸ್ಮಸ್-ಹೊಸ ವರ್ಷ ಆಚರಣೆಗೆ ಇಲ್ಲ ಅವಕಾಶ; ಕರ್ನಾಟಕ ಬಳಿಕ ದೆಹಲಿಯಲ್ಲಿ ಟಫ್ ರೂಲ್ಸ್
ಇನ್ನು ಡೆಲ್ಟಾ ವೈರಸ್ಗಿಂತ ಓಮಿಕ್ರಾನ್ ಹೆಚ್ಚು ಎಫೆಕ್ಟಿವ್ ಆಗಿದೆ. ಹಾಗಾಗಿ, ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ತೊಂದರೆಯಾಗುವುದಿಲ್ಲ. ಬದಲಾಗಿ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾರಂಭಿಕ ಹಂತದಲ್ಲೇ ಇದನ್ನು ತಡೆಯೋದು ಸೂಕ್ತ. ಜನರಲ್ಲಿ ಇಮ್ಯೂನಿಟಿ ಕಡಿಮೆ ಆಗುತ್ತಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ