ವಲಸೆ ಕಾರ್ಮಿಕರ ಸಂಕಷ್ಟಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ಜರುಗಿಸಿದ ಕ್ರಮವೇನು?; ಸುಪ್ರೀಂ ಪ್ರಶ್ನೆ

ಬಿಹಾರದ ಮುಝಾಫರ್ಪುರದ ರೈಲ್ವೆ ನಿಲ್ದಾಣದಲ್ಲಿ ಸತ್ತಿರುವ ತಾಯಿಯನ್ನು ಮಗುವೊಂದು ಎಬ್ಬಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್​

  • Share this:
ನವ ದೆಹಲಿ (ಮೇ 28); ದೇಶದಲ್ಲಿ ಕೊರೋನಾ ಕಾರಣಕ್ಕೆ ಲಾಕ್‌ಡೌನ್ ಘೋಷಿಸಿದ ನಂತರ ಅತಿಹೆಚ್ಚು ಸಮಸ್ಯೆಗೆ ಒಳಗಾದದ್ದು ವಲಸೆ ಕಾರ್ಮಿಕರು. ಕಳೆದ 68 ದಿನಗಳಿಮದ ಪ್ರತಿ ದಿನವೂ ವಲಸೆ ಕಾರ್ಮಿಕರ ಬವಣೆ, ಹಸಿವು, ಸಾವು ನೋವಿನ ವರದಿಗಳು ದಾಖಲಾಗುತ್ತಿದ್ದು ಈ ಕುರಿತು ಕೊನೆಗೂ ಇಂದು ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ್ದೇನು? ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸಿದೆ.

ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮೂರು ನ್ಯಾಯಾಧೀಶರ ಪೀಠದಿಂದ ಕನಿಷ್ಠ 50 ಪ್ರಶ್ನೆಗಳನ್ನು ಕೇಳಿದ್ದು ವಲಸೆ ಕಾಮಿಕರ ವಿಚಾರದಲ್ಲಿ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿಂದೆ ಇದೇ ಸುಪ್ರೀಂ ಕೋರ್ಟ್ ರೈಲು ಹಳಿಗಳಲ್ಲಿ ಮಲಗಿ ಸಾವನಪ್ಪಿದ ಕಾರ್ಮಿಕರ ಬಗ್ಗೆ ಮಾತನಾಡುತ್ತಾ “ಜನರನ್ನು ರೈಲು ಹಳಿಗಳ ಮೇಲೆ ಮಲಗಿ ಮೃತಪಟ್ಟಿದ್ದು ದುರಾದೃಷ್ಟಕರ. ಆದರೆ, ಇವರನ್ನು ನಡೆದಯಂತೆ ತಡೆಯಲಾಗುವುದಿಲ್ಲ”ಎಂದು ಅಭಿಪ್ರಾಯಪಟ್ಟಿತ್ತು.

ಈ ಬಗ್ಗೆ ಮದ್ರಾಸ್ ಹೈಕೋರ್ಟ್, ಆಂಧ್ರ ಪ್ರದೇಶದ ಹೈಕೋರ್ಟ್ಗಳು ಸುಪ್ರೀಂ ಕೋರ್ಟ್ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದವು. ಪರಿಣಾಮ ಈಗ ಸುಪ್ರೀಂ ಕೋರ್ಟ್ ವಲಸೆ ಕಾರ್ಮಿಕರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿದೆ.
ಕಳೆದ ಎರಡು ದಿನಗಳಿಂದ ಶ್ರಮಿಕ್ ಟ್ರೈನ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 09 ಮಂದಿ ವಲಸೆ ಕಾರ್ಮಿಕರು ಅನ್ನ ನೀರಿಲ್ಲದೇ ಸಾವನಪ್ಪಿದ್ದಾರೆ.

ಬಿಹಾರದ ಮುಝಾಫರ್ಪುರದ ರೈಲ್ವೆ ನಿಲ್ದಾಣದಲ್ಲಿ ಸತ್ತಿರುವ ತಾಯಿಯನ್ನು ಮಗುವೊಂದು ಎಬ್ಬಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

“ವಲಸಿಗರಿಗೆ ಮೊದಲ ಸಮಸ್ಯೆ ಸಾರಿಗೆಯಾಗಿದೆ. ನೋಂದಣಿಯಾದ ನಂತರವೂ ಅವರು ವಾರಗಳವರೆಗೆ ಕಾಯುತ್ತಿದ್ದಾರೆ. ಈ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆಯೇ? ಇಲ್ಲದಿದ್ದರೆ ಅವರ ಹಣವನ್ನು ರಾಜ್ಯವು ಹೇಗೆ ಪಾವತಿಸುತ್ತಿದೆ?” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಅಲ್ಲದೆ, “ಎಲ್ಲರನ್ನೂ ಒಂದೇ ಸಮಯದಲ್ಲಿ ಸಾಗಿಸಲು ಸಾಧ್ಯವಿಲ್ಲ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅವರು ಸಾರಿಗೆ ಪಡೆಯುವವರೆಗೆ ಅವರಿಗೆ ಸರ್ಕಾರಗಳು ಆಹಾರ ಮತ್ತು ಆಶ್ರಯವನ್ನು ನೀಡಬೇಕು” ಎಂದು ನ್ಯಾಯಾಲಯ ಸೂಚಿಸಿದೆ.

ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಅಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತಮ್ಮ ಊರಿಗೆ ತೆರಳಲು ಸಾಧ್ಯವಾಗದೆ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ವಲಸಿಗರಿಗೆ ಪರಿಹಾರ ಒದಗಿಸಲು ಕೈಗೊಂಡ ಕ್ರಮಗಳ ಬಗ್ಗೆ ತಮ್ಮ ಅಫಿಡವಿಟ್ಗಳನ್ನೂ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ : ಕೊರೋನಾ ಭೀತಿ; ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳ ವಿಮಾನಯಾನಕ್ಕೆ ನಿರ್ಬಂಧ
First published: