• Home
  • »
  • News
  • »
  • coronavirus-latest-news
  • »
  • ಬೆಂಗಳೂರು ಕರಗ ಉತ್ಸವಕ್ಕಿಲ್ಲ ಕೊರೋನಾ ಭೀತಿ; ಕಾರ್ಯಕ್ರಮ ನಡೆಯುವುದು ಖಚಿತ ಎಂದ ಮೇಯರ್

ಬೆಂಗಳೂರು ಕರಗ ಉತ್ಸವಕ್ಕಿಲ್ಲ ಕೊರೋನಾ ಭೀತಿ; ಕಾರ್ಯಕ್ರಮ ನಡೆಯುವುದು ಖಚಿತ ಎಂದ ಮೇಯರ್

ಕಳೆದ ವರ್ಷ ನಡೆದ ಬೆಂಗಳೂರು ಕರಗ

ಕಳೆದ ವರ್ಷ ನಡೆದ ಬೆಂಗಳೂರು ಕರಗ

ಕರಗಕ್ಕೆ ಇನ್ನೂ 28 ದಿನಗಳ ಕಾಲಾವಕಾಶ ಇದೆ. 1941ರಲ್ಲಿ ಪ್ಲೇಗ್ ಬಂದಿತ್ತು, ಆಗಲೂ ನಾವು ಕರಗ ಮಾಡಿದ್ದೇವೆ. ಬ್ರಿಟಿಷರ ಕಾಲದಲ್ಲಿ ಕರ್ಫ್ಯೂ ಆಗಿತ್ತು, ಆಗಲೂ ಕರಗ ಮಾಡಿದ್ದೇವೆ. ಹಾಗಾಗಿ ಈ ಬಾರಿ ಕರಗ ಆಚರಣೆ ನಿಲ್ಲಿಸುವುದಿಲ್ಲ. ಕರಗ ಓಡಾಡುವ ಕಡೆಯೆಲ್ಲಾ ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ ಎಂದು ಎಂಎಲ್​ಸಿ ಪಿ ಆರ್ ರಮೇಶ್ ಹೇಳಿದರು.

ಮುಂದೆ ಓದಿ ...
  • Share this:

    ಬೆಂಗಳೂರು(ಮಾ.11): ರಾಜಧಾನಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಜರಗುವ ಬೆಂಗಳೂರು ಕರಗ ಮಹೋತ್ಸವಕ್ಕೆ ಈ ಬಾರಿ ಕೊರೋನಾ ಅಡ್ಡಿಯಾಗಬಹುದು ಎನ್ನಲಾಗಿತ್ತು. ಕೊರೋನಾ ಭೀತಿ ಹಿನ್ನೆಲೆ, ಬೆಂಗಳೂರು ಕರಗ ಆಚರಣೆ ಮಾಡಬೇಕಾ? ಬೇಡವಾ ಎಂಬ ಗೊಂದಲ ಉಂಟಾಗಿತ್ತು. ಇಂದು ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್​ ಸಭೆ ನಡೆಸಿ ಬೆಂಗಳೂರು ಕರಗ ನಡೆಯುವುದು ಖಚಿತ ಎಂದು ತಿಳಿಸಿದ್ದಾರೆ. ಆ ಮೂಲಕ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

    ಮಾರ್ಚ್ 31 ರಿಂದ ಏಪ್ರಿಲ್ 8 ರವರೆಗೆ ಬೆಂಗಳೂರು ಕರಗ ನಡೆಯಲಿದೆ. ಬೆಂಗಳೂರು ಕರಗ ಸಾಂಸ್ಕೃತಿಕ, ಐತಿಹಾಸಿಕ ಕಾರ್ಯಕ್ರಮ. ಈ ಬಾರಿ ಬೆಂಗಳೂರು ಕರಗ ಮಹೋತ್ಸವ ನಡೆಯುವುದು ಖಚಿತ. ಸಾರ್ವಜನಿಕರು ಎಷ್ಟು ಎಚ್ಚರಿಕೆಯಿಂದ, ಸುರಕ್ಷತೆಯಿಂದ ಇರಬೇಕು ಎಂಬುದನ್ನು ಚರ್ಚಿಸಿದ್ದೇವೆ. ನಾಳೆ ಬೆಳಗ್ಗೆ 7 ಗಂಟೆಗೆ ಕರಗದ ಸ್ಥಳ (ದೇವಸ್ಥಾನದ ಆವರಣ) ವೀಕ್ಷಣೆ ಮಾಡಲಿದ್ದೇವೆ ಎಂದು ಗೌತಮ್​ ಕುಮಾರ್ ಹೇಳಿದ್ದಾರೆ.

    ಆರೋಗ್ಯ ಇಲಾಖೆ ಜೊತೆ ಚರ್ಚಿಸಿದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಗದಿ; ಸಚಿವ ಸುರೇಶ್​ ಕುಮಾರ್

    ಕೊರೋನಾ ಮತ್ತು ಕಾಲರಾ ಇರುವುದರಿಂದ ವಿಶೇಷ ಮುತುವರ್ಜಿ ವಹಿಸುತ್ತೇವೆ. ಬೆಂಗಳೂರು ಜಲಮಂಡಳಿ (BWSSB) ಸ್ಯಾನಿಟರಿ ಲೈನ್ ಲೀಕ್ ಆಗಿರುವುದರ ಬಗ್ಗೆ ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ.

    ಕರಗ ನಡೆಯುವ ಸಂಪೂರ್ಣ ಸ್ಥಳವನ್ನು ಕ್ಲೋರಿನೇಟ್ ಮಾಡಿ ಶುಚಿಗೊಳಿಸುತ್ತೇವೆ.  ಕೊರೋನಾ ಬಗ್ಗೆ ಎಲ್ಲೆಡೆ ಎಚ್ಚರಿಕೆ ವಹಿಸುತ್ತೇವೆ.  ಸದ್ಯಕ್ಕಂತೂ ಕರಗ ಉತ್ಸವ ನಡೆಸುವುದನ್ನು ನಿರ್ಧಾರ ಮಾಡಿದ್ದೇವೆ. ಆದರೆ ಜನ ಹೆಚ್ಚು ಜನ‌ ಸೇರದಂತೆ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು.

    ಕರಗಕ್ಕೆ ಇನ್ನೂ 28 ದಿನಗಳ ಕಾಲಾವಕಾಶ ಇದೆ. 1941ರಲ್ಲಿ ಪ್ಲೇಗ್ ಬಂದಿತ್ತು, ಆಗಲೂ ನಾವು ಕರಗ ಮಾಡಿದ್ದೇವೆ. ಬ್ರಿಟಿಷರ ಕಾಲದಲ್ಲಿ ಕರ್ಫ್ಯೂ ಆಗಿತ್ತು, ಆಗಲೂ ಕರಗ ಮಾಡಿದ್ದೇವೆ. ಹಾಗಾಗಿ ಈ ಬಾರಿ ಕರಗ ಆಚರಣೆ ನಿಲ್ಲಿಸುವುದಿಲ್ಲ. ಕರಗ ಓಡಾಡುವ ಕಡೆಯೆಲ್ಲಾ ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ ಎಂದು ಎಂಎಲ್​ಸಿ ಪಿ ಆರ್ ರಮೇಶ್ ಹೇಳಿದರು.

    ಬೆಂಗಳೂರಿನಲ್ಲಿ ಕೊರೋನಾ ಭೀತಿ; ಸಭೆ-ಪ್ರತಿಭಟನೆಗಳು ರದ್ದು, 60 ದೇಗುಲಗಳಲ್ಲಿಲ್ಲ ಹೋಮ-ಹವನ

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಮೇಯರ್, ಕಮೀಷನರ್, ಪರಿಷತ್ ಸದಸ್ಯ ಪಿ.ಆರ್ ರಮೇಶ್, ಧರ್ಮರಾಯ ದೇವಸ್ಥಾನ ವಾರ್ಡ್ ಕಾರ್ಪೊರೇಟರ್ ಪ್ರತಿಭಾ ಧನರಾಜ್, ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿಯವರು, ಕರಗ ಸಮಿತಿ ಸದಸ್ಯರು ಭಾಗಿಯಾಗಿದ್ದರು.


     

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು